Friday, March 29, 2024
spot_imgspot_img
spot_imgspot_img

ಪುತ್ತೂರು: ಹಿಂ ಜಾ ವೇ ಮುಖಂಡನಿಗೆ ಹನಿಟ್ರ್ಯಾಪ್ ಮಾಡಲು ವಿಫಲ ಯತ್ನ; ಪ್ರಕರಣ ದಾಖಲು!

- Advertisement -G L Acharya panikkar
- Advertisement -

ಪುತ್ತೂರು: ಹಿಂದು ಜಾಗರಣ ವೇದಿಕೆಯ ಮಾತೃಸುರಕ್ಷಾ ಮಂಗಳೂರು ವಿಭಾಗ ಸಂಯೋಜಕ ಬ.ಗಣರಾಜ ಭಟ್ ಕೆದಿಲ ಅವರ ಫೇಸ್ ಬುಕ್ ಖಾತೆಗೆ ಪ್ರೀತಾ ಶರ್ಮ ಅನ್ನುವ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿದ್ದು ,ಆ ಹೆಸರಿನ ವ್ಯಕ್ತಿಯ ಪರಿಚಯ ಗಣರಾಜ ಭಟ್ ರಿಗೆ ಇಲ್ಲದ ಕಾರಣ ರಿಕ್ವೆಸ್ಟ್ ಸ್ವೀಕರಿಸದೆ ಮೆಸೆಂಜರ್ ನಲ್ಲಿ ತಂಗಿ ನೀವು ಯಾರ ಎಂದು ಗೊತ್ತಾಗ್ಲಿಲ್ಲ, ಎಂದು ಸಂದೇಶ ಮಾಡಿರುತ್ತಾರೆ.

ಅದಕ್ಕೆ ನಾನು ನ್ಯೂ ಡೆಲ್ಲಿಯವಳು ವಿಡಿಯೊ ಕರೆಯಲ್ಲಿ ಎಂಜೋಯ್ ಮಾಡೋಣ ಎಂದು ಆಕೆ ಉತ್ತರಿಸಿದಳು.
ಆಗ ಇದು ಹನಿಟ್ರ್ಯಾಪ್ ಆಗಿರಬಹುದೆಂದು ಭಟ್ ರಿಗೆ ಸಂಶಯ ಬಂದು, ಸಂಘಟನೆಯ ಕಾರ್ಯಕರ್ತರಿಗೆ ವಿಚಾರ ತಿಳಿಸಿದ್ದಲ್ಲದೆ, ಆ ಸಂದೇಶವನ್ನು ಸ್ಕ್ರೀನ್ ಶಾಟ್ ತೆಗೆದು ತನ್ನ ಪೇಸ್ ಬುಕ್ ಎಕೌಂಟಿನಲ್ಲಿ ಈ ರೀತಿ ಮೋಸ ನಡೆಯುತ್ತಿದೆ ಜಾಗರುಕತರಾಗಿರಿ ಎಂದು ಪೋಸ್ಟ್ ಮಾಡಿದ್ದಾರೆ.

ನಂತರ ಗಣರಾಜ ಭಟ್ ಅವರ ದೂರವಾಣಿ ಸಂಖ್ಯೆಯನ್ನು ಆಕೆ ಕೇಳಿದ್ದಾಳೆ. ಇವರು ಕೊಡದೆ ಇದ್ದಾಗ ಮೆಸೆಂಜರ್ ನಲ್ಲಿ ವಿಡಿಯೋ ಕರೆ ಮಾಡಿದ್ದಾಳೆ. ಇವರು ಕರೆಯನ್ನು ಸ್ವೀಕರಿಸಿ ತನ್ನ ಮುಖವನ್ನು ತೋರಿಸಲಿಲ್ಲ‌. ತಕ್ಷಣ ಕರೆಯನ್ನು ಸ್ಥಗಿತಗೊಳಿಸಿ ನಿಮ್ಮ ಮುಖ, ಪೂರ್ತಿ ಶರೀರ ಹಾಗು ಗುಪ್ತಾಂಗ ತೋರಿಸಿ ಎಂದು ಸಂದೇಶ ಬಂದಿರುತ್ತದೆ. ತಕ್ಷಣ ಈ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗಣರಾಜ ಭಟ್ ಅವರು ಪುತ್ತೂರು ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದೇ ರೀತಿ ಹಲವು ಯುವಕರಿಗೆ ಸಂದೇಶಗಳು ಬಂದಿದ್ದು. ಕೆಲವರು ವಿಡಿಯೊ ಕರೆಯನ್ನು ಸ್ವೀಕರಿಸಿದಾಗ ಹುಡುಗಿಯ ನಗ್ನ ವೀಡಿಯೊ ಬಂದಿರುತ್ತದೆ. ಈ ಕಡೆಯಿಂದ ಇವರು ನೋಡುವ ವಿಡಿಯೊವನ್ನು ಸಹಿತ ಸ್ಕ್ರೀನ್ ವೀಡಿಯೋ ಸೆರೆಹಿಡಿದು. ನೀವು ನನಗೆ ಹಣ ಹಾಕದಿದ್ದರೆ ನಿಮ್ಮ ಈ ವಿಡಿಯೊವನ್ನು ಪಬ್ಲಿಕ್ ಮಾಡುತ್ತೇನೆಂದು ಬೆದರಿಸಿ, ಮರಿಯಾದೆಗೆ ಅಂಜಿ ಹಣ ಕಳುಹಿಸಿದವರು ಅನೇಕರಿದ್ದಾರೆ. ಅಲ್ಲದೆ ಕಳುಹಿಸಲು ಹಣವಿಲ್ಲದೆ,
ಮರ್ಯಾದೆ ಹೋಗುವುದೆಂದು ಅಂಜಿ ಆತ್ಮಹತ್ಯೆಗೆ ಶರಣಾದ ಪ್ರಕರಣವೂ ಇದೆ. ಇಂತಹ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿದೆ.

ಈ ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚಾಗಿ ಹಿಂದು ಸಂಘಟನೆಯ ಕಾರ್ಯಕರ್ತರ ವಿರುದ್ದ ನಡೆಯುತ್ತಿದೆ .ಹಿಂದು ಸಂಘಟನೆಯ ಯುವಕರ ಮಾನ ಹಾನಿ ಮಾಡುವ ಅತಿ ದೊಡ್ಡ ಷಡ್ಯಂತ್ರ ಇದಾಗಿದ್ದು ಆರೋಪಿಗಳನ್ನು ಆದಷ್ಟು ಬೇಗ ಬಂದಿಸಬೇಕೆಂದು ಹಿಂದು ಜಾಗರಣ ವೇದಿಕೆಯ ವಿಟ್ಲ ತಾಲೂಕು ಅಧ್ಯಕ್ಷ ಗಣೇಶ ಕುಲಾಲ್ ಕೆದಿಲ ಆಗ್ರಹಿಸಿದ್ದಾರೆ.

ಇಂತಹ ಪ್ರಕರಣದಲ್ಲಿ ಯುವಕರು ಎಚ್ಚರವಾಗಿರಬೇಕು. ಅಪರಿಚಿತ ವ್ಯಕ್ತಿಯ ಸ್ನೇಹ ಕೋರಿಕೆ,ಹಾಗು ವಿಡಿಯೊ ಕರೆ ಸ್ವೀಕರಿಸಬೇಡಿ ಎಂದು ಎಲ್ಲರಿಗು ತಿಳಿಸಿ ಎಂದು ಪುತ್ತೂರು ನಗರ ಠಾಣಾ ಸಬ್ ಇನ್ಸ್ಪೆಕ್ಟರ್ ಶ್ರೀ ಜಂಬೂ ರಾಜ್ ಮಾಜನ್ ಅವರು ತಿಳಿಸಿದ್ದಾರೆ.

driving
- Advertisement -

Related news

error: Content is protected !!