
ಉಂಡ ಮನೆಗೆ ದ್ರೋಹ ಬಗೆದ ಎರಡನೇ ಆರೋಪಿ
ಪುತ್ತೂರು: ಕೆಲ ದಿನಗಳ ಹಿಂದೆ ಬಡಗನ್ನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಗುರುಪ್ರಸಾದ್ ರೈ ಕುದ್ಕಾಡಿ ಅವರ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೇರಳದ ಕುಖ್ಯಾತ ದರೋಡೆಕೋರರ ತಂಡ ಈ ಕೃತ್ಯ ಎಸಗಿದೆ. ಕೆಲ ದಿನಗಳ ಹಿಂದೆ ಸೀತಂಗೋಳಿ ನಿವಾಸಿಯೋರ್ವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದ ಪೊಲೀಸರು ಒಟ್ಟು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿಟ್ಲ ಪೆರುವಾಯಿಯ ಸುಧೀರ್ ಮಣಿಯಾಣಿ, , ಪೈವಳಿಕೆ ಸಮೀಪದ ಅಟ್ಟಿಗೋಳಿಯ ಕಿರಣ್, ಕಾಞಂಗಾಡಿನ ನಿವಾಸಿ ಸನಲ್, ಸೀತಾಂಗೊಳ್ಳಿ ಸಮೀಪದ ಬಾಡೂರಿನ ವಸಂತ್, ಕೇರಳದ ಫೈಝಲ್ ಮತ್ತು ಕಾಸರಗೋಡಿನ ಎಡನಾಡ್ ಗ್ರಾಮದ ರಾಜೀವ ಗಾಂಧಿ ನಗರದ ಅಬ್ದುಲ್ ನಿಸಾರ್ ಬಂಧಿತ ಆರೋಪಿಗಳು.
ಈ ಪ್ರಕರಣ ವಸಂತ ಎಂಬಾತನ ಮೇಲೆ ಬದಿಯಡ್ಕ, ಕುಂಬಳೆ ಪೊಲೀಸ್ ಠಾಣೆಯಲ್ಲಿ ನಾಲ್ಕು ಪ್ರಕರಣ, ಕಿರಣ್ ಎಂಬಾತನ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಸುಲಿಗೆ ಪ್ರಕರಣ, ಬರ್ಕೆ ಹಾಗೂ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಗಾಂಜಾ ಪ್ರಕರಣ, ಸನಲ್ ಕೆ.ವಿ ಎಂಬಾತನ ಮೇಲೆ ಕೇರಳ ರಾಜ್ಯದಲ್ಲಿ ಒಟ್ಟು 15ಪ್ರಕರಣಗಳಾಗಿದ್ದು, ನಾಲ್ಕು ಪ್ರಕರಣಗಳಲ್ಲಿ 9ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ.
ಮಹಮ್ಮದ್ ಫೈಝಲ್ ಮತ್ತು ಅಬ್ದುಲ್ ನಿಸಾರ್ 2022ರಲ್ಲಿ ಪುತ್ತೂರು ಗ್ರಾ.ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿಯಲ್ಲಿ ವೃದ್ಧೆಯ ಚೈನ್ ಎಳೆದ ಪ್ರಕರಣ ಹಾಗೂ ಕುದ್ದುಪದವಿನ ಪೆಟ್ರೋಲ್ ಬಂಕ್ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದನು.
ಇನ್ನೂ ಈ ಪ್ರಕರಣ ಆರೋಪಿ ಸುಧೀರ್ ಪೆರುವಾಯಿ ಎಂಬಾತ ಈ ಹಿಂದೆ ಕಾಳುಮೆಣಸು ದರೋಡೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತ ಗುರುಪ್ರಸಾದ್ ರೈ ಅವರಿಗೆ ಸಂಬಂಧಿಯೋರ್ವರ ಮೂಲಕ ಪರಿಚಯವಾಗಿ ಉಂಡ ಮನೆಗೆ ದ್ರೋಹ ಬಗೆದಿದ್ದಾನೆ.
ವರ್ಷಗಳ ಹಿಂದೆ ಗುರುಪ್ರಸಾದ್ ರೈಯವರ ಮನೆಗೆ ವಾಹನವೊಂದರಲ್ಲಿ ಚಾಲಕನಾಗಿ ಬಂದಿದ್ದ ಸುಧೀರ್ ಪೆರುವಾಯಿ ಎಂಬಾತ ಗುರುಪ್ರಸಾದ್ ರೈಯವರ ಮನೆಯ ವಿಷಯವನ್ನು ತಿಳಿದುಕೊಂಡು ದರೋಡೆ ತಂಡಕ್ಕೆ ಮಾಹಿತಿ ನೀಡಿ ಬಳಿಕ ಆತನೂ ಸೇರಿ ತಂಡ ಈ ಕೃತ್ಯ ಎಸಗಿದೆ. ಸೆ.6ರಂದು ರಾತ್ರಿ ಕುದ್ಕಾಡಿ ಮನೆಯಲ್ಲಿ ದರೋಡೆ ನಡೆದಿತ್ತು. ಕೃತ್ಯ ಎಸಗುವ ಮೊದಲ ದಿನ ರಾತ್ರಿ ತಂಡವೊಂದು ರಾತ್ರಿ ವೇಳೆ ಗುರುಪ್ರಸಾದ್ ರೈಯವರ ಮನೆಯ ಬಳಿ ಬಂದು ಬಾಗಿಲು ಬಡಿದು ಹೋಗಿದ್ದರು.

ಐವರು ದರೋಡೆಕೋರರ ತಂಡ ನ.6ರಂದು ತಡರಾತ್ರಿ ಗುರುಪ್ರಸಾದ್ ರೈಯವರ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿ ದರೋಡೆ ಮಾಡಿದ್ದರು. ಗುರುಪ್ರಸಾದ್ ರೈ ಮತ್ತು ಅವರ ತಾಯಿ ಕಸ್ತೂರಿ ರೈಯವರನ್ನು ಹಗ್ಗ ಮತ್ತು ಬಟ್ಟೆಯಿಂದ ಕಟ್ಟಿ ಬಾಯಿಯನ್ನು ಬಿಗಿದು ಕತ್ತಿನ ಭಾಗಕ್ಕೆ ಮಾರಕಾಸ್ತ್ರಗಳನ್ನು ಇಟ್ಟು ಬೆದರಿಸಿ 30 ಸಾವಿರ ರೂ.ನಗದು ಮತ್ತು ಸುಮಾರು 15 ಪವನ್. ಚಿನ್ನಾಭರಣವನ್ನು ದರೋಡೆ ಮಾಡಲಾಗಿತ್ತು. ಕಸ್ತೂರಿ ರೈಯವರನ್ನು ಬೆದರಿಸಿ ಅವರ ಕೈಯಿಂದಲೇ ಬೀಗದ ಕೀ ಪಡೆದುಕೊಂಡು ಕಪಾಟಿನಲ್ಲಿದ್ದ ಚಿನ್ನಾಭರಣವನ್ನು ದೋಚಿ ತಂಡ ಪರಾರಿಯಾಗಿದ್ದರು. ಹೋಗುವಾಗ ಗುರುಪ್ರಸಾದ್ ರ ಮತ್ತವರ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿ, ಕಸ್ತೂರಿ ರೈಯವರಿಗೆ ಕುಡಿಯಲು ನೀರು ಕೊಟ್ಟು ಹೋಗಿದ್ದು, ಈ ಮನೆಯ ಋಣ ಹೊಂದಿರುವವರೇ ಯಾರೋ ಕೃತ್ಯ ಎಸಗಿದ್ದಾರೆ ಎನ್ನುವ ಸಂಶಯಕ್ಕೆ ಕಾರಣವಾಗಿತ್ತು.
ಮನೆಯ ಮಾಹಿತಿ ಇರುವವರೇ ಈ ಕೃತ್ಯ ಎಸಗಿದ್ದಾರೆ ಮತ್ತು ಕೇರಳ ಮೂಲದ ದರೋಡೆಕೋರರ ತಂಡವೇ ಈ ಕೃತ್ಯ ಎಸಗಿದೆ ಎನ್ನುವ ಬಲವಾದ ಸಂಶಯದೊಂದಿಗೆ ಸಂಪ್ಯ ಪೊಲೀಸರ ಒಂದು ತಂಡ ಕೇರಳದಲ್ಲಿ ಸತತ ಕಾರ್ಯಾಚರಣೆ ನಡೆಸಿ ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಎಸ್ಪಿ ಸಿ.ಬಿ ರಿಷ್ಯಂತ್ ನಿರ್ದೇಶನದಲ್ಲಿ ಡಿವೈಎಸ್ಪಿ ಗಾನ ಪಿ ಕುಮಾರ್ ನೇತೃತ್ವದಲ್ಲಿ ನಾಲ್ಕು ತಂಡ ರಚಿಸಿ ಸಿನಿಮೀಯ ರೀತಿಯಲ್ಲಿ ಪ್ರಕರಣ ಭೇದಿಸುವಲ್ಲಿ ಪೊಲೀಸರ ತಂಡ ಯಶಸ್ವಿಯಾಗಿದ್ದಾರೆ.

ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯ ವೈಖರಿಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಇಡೀ ಕರಾವಳಿ ಮತ್ತು ಕಾಸರಗೋಡು ಜಿಲ್ಲೆಗಳನ್ನೇ ಬೆಚ್ಚಿ ಬೀಳಿಸುವಂತಹ ಪೆರ್ಲ ಜಬ್ಬಾರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪಚ್ಚಂಬಳ ರವಿ ಜೀವಾವಧಿ ಶಿಕ್ಷೆಗೆ ಒಳಪಟ್ಟು 12 ವರ್ಷಗಳಿಂದ ಕೇರಳ ಕಾರಾಗೃಹದಲ್ಲಿದ್ದು, ಪೆರೋಲ್ ಮೇಲೆ ಬಂದು ಈ ಪ್ರಕರಣದಲ್ಲಿ ವಾಹನ ಕೊಟ್ಟ ಆರೋಪವಿದೆ. ಬಳಿಕ ಮತ್ತೆ ಕಾರಾಗೃಹಕ್ಕೆ ವಾಪಾಸಾಗಿದ್ದು ಆತನನ್ನು ಈ ಪ್ರಕರಣದಲ್ಲಿ ಇನ್ನಷ್ಟೇ ವಶಕ್ಕೆ ಪಡೆಯಬೇಕಾಗಿದೆ. ಈತ ಸೇರಿದಂತೆ ಒಟ್ಟು ಏಳು ಮಂದಿ ಸೇರಿ ದರೋಡೆ ಎಸಗಿದ್ದು ಈ ಪೈಕಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದ ಬಗ್ಗೆ ಪುತ್ತೂರು ಪೊಲೀಸ್ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕ ಸಿ ಬಿ ರಿಷ್ಯಂತ್ ಅವರ ಉಪಸ್ಥಿತಿಯಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ., ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ಎಸ್ .ಎಂ. ಇವರುಗಳ ನಿರ್ದೇಶನದಂತೆ ಮತ್ತು ಪುತ್ತೂರು ಉಪ-ವಿಭಾಗದ ಪೊಲೀಸ್ ಉಪ ಅಧೀಕ್ಷಕ ಡಾ| ಗಾನ ಪಿ, ಕುಮಾರ್ ರವರ ಮಾರ್ಗದರ್ಶನದ ಮೇರೆಗೆ ವಿಶೇಷ ಪತ್ತೆ ತಂಡದ ಅತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ ಎಸ್, ರವರ ನೇತೃತ್ವದಲ್ಲಿ ಪುತ್ತೂರು ಸಂಚಾರ ಪೊಲೀಸ್ ಠಾಣಾ ಪಿಎಸ್ಐ ಉದಯರವಿ ಎಂ ವೈ, ಪುತ್ತೂರು ಗ್ರಾಮಾಂತರ ಠಾಣಾ ಪಿಎಸ್ಐ ಧನಂಜಯ ಬಿ.ಸಿ., ಉಪ್ಪಿನಂಗಡಿ ಠಾಣಾ ಪಿಎಸ್ಐ ರುಕ್ಮ ನಾಯ್ಕ, ಉಪ್ಪಿನಂಗಡಿ ಠಾಣಾ ಹೆಚ್.ಸಿ. ಹರೀಶ್ಚಂದ್ರ, ವೇಣೂರು ಠಾಣಾ ಹೆಚ್.ಸಿ. ಪ್ರವೀಣ್ ಮೂರುಗೋಳಿ, ವಿಟ್ಲ ಪೊಲೀಸ್ ಠಾಣಾ ಹೆಚ್ ಸಿ ಉದಯ ರೈ, ಪುತ್ತೂರು ಗ್ರಾಮಾಂತರ ವೃತ್ತ ಕಛೇರಿಯ ಹೆಚ್ ಸಿ ಅಬ್ದುಲ್ ಸಲೀಂ, ಪಿಸಿ, ಜಗದೀಶ್ ಅತ್ತಾಜೆ, ಎ.ಹೆಚ್.ಸಿ ಹರೀಶ್, ಪುತ್ತೂರು ಗ್ರಾಮಾಂತರ ಠಾಣಾ ಎಎಸ್ಐ ಮುರುಗೇಶ್, ಹೆಚ್.ಸಿ ಪ್ರವೀಣ್ ರೈ, ಹೆಚ್.ಸಿ ಅದ್ರಾಮ್, ಹೆಚ್.ಸಿ ಬಾಲಕೃಷ್ಣ , ಹೆಚ್.ಸಿ ಹರೀಶ್, ಹೆಚ್.ಸಿ ಪ್ರಶಾಂತ್, ಪಿಸಿ ಮುನಿಯ ನಾಯ್ಕ, ಪುತ್ತೂರು ಸಂಚಾರ ಠಾಣಾ ಹೆಚ್.ಸಿ ಪ್ರಶಾಂತ್ ರೈ, ಪುತ್ತೂರು ನಗರ ಠಾಣಾ ಪಿಸಿ ವಿನಾಯಕ ಎಸ್ ಬಾರ್ಕಿ, ಪಿಸಿ ಶರಣಪ್ಪ ಪಾಟೀಲ್, ಬಂಟ್ವಾಳ ಸಂಚಾರ ಠಾಣಾ ಪಿಸಿ ವಿವೇಕ್, ಪಿಸಿ ಕುಮಾರ್ ಕೆ, ಜಿಲ್ಲಾ ಗಣಕಯಂತ್ರ ವಿಭಾಗದ ಎಹೆಚ್ಸಿ ಸಂಪತ್ ಕುಮಾರ್, ಸಿಪಿಸಿ ದಿವಾಕರ್, ವಾಹನ ಚಾಲಕ ಪ್ರವೀಣ್ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯ ಎಲ್ಲಾ ಅಧಿಕಾರಿ & ಸಿಬ್ಬಂದಿಗಳು ಈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.