Saturday, June 28, 2025
spot_imgspot_img
spot_imgspot_img

ಪದಕದತ್ತ ಮತ್ತೊಂದು ಹೆಜ್ಜೆ ಇಟ್ಟ ಪಿ.ವಿ ಸಿಂಧು..! ಮುಂದಿನ ಪಂದ್ಯ ಯಾರ ಜೊತೆಗೆ ನಡೆಯಲಿದೆ..?!

- Advertisement -
- Advertisement -

ಟೋಕಿಯೋ : ಭಾರತದ ಬ್ಯಾಡ್ಮಿಂಟನ್ ಚ್ಯಾಂಪಿಯನ್ ಪಿ.ವಿ.ಸಿಂಧು ಇಂದು ಮಹಿಳಾ ಸಿಂಗಲ್ಸ್ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ, ವರ್ಲ್ಡ್ ನಂ.5 ಆಗಿರುವ ಜಪಾನಿನ ಅಕಾನೆ ಯಮಗುಚಿ ವಿರುದ್ಧ, ಗೆಲುವು ಸಾಧಿಸಿದರು. ಇದರೊಂದಿಗೆ ಟೋಕಿಯೋ ಒಲಿಂಪಿಕ್ಸ್ನ ಸೆಮಿಫೈನಲ್ಸ್ ಗೆ ಪ್ರವೇಶಿಸಿರುವ ಸಿಂಧು, ಚಿನ್ನದ ಪದಕದತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ರಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ 26 ವರ್ಷ ವಯಸ್ಸಿನ ಪಿ.ವಿ ಸಿಂಧು, 56 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಉತ್ತಮ ಆಟಗಾರಿಕೆ ಪ್ರದರ್ಶಿಸಿದರು. ಟೋಕಿಯೋದ ಮುಸಾಶೀನೋ ಫಾರೆಸ್ಟ್ ಪ್ಲಾಜಾದಲ್ಲಿ ನಡೆದ ಪಂದ್ಯದಲ್ಲಿ 21-13, 22-20 ಸ್ಕೋರ್ ಪಡೆದು, ನೇರ ಸೆಟ್ ಗಳೊಂದಿಗೆ ಅಕಾನೆ ಅವರನ್ನು ಪರಾಜಯಗೊಳಿಸಿದರು. ಥಾಯ್ಲೆಂಡಿನ ರತ್ಮನೊಕ್ ಇಂತಾನಾನ್ ಮತ್ತು ಚೀನಾದ ಟಾಯಿ ಟ್ಸು ಯಿಂಗ್ ನಡುವೆ ನಡೆಯಲಿರುವ ಮತ್ತೊಂದು ಕ್ವಾರ್ಟರ್ ಫೈನಲ್ಸ್ ಪಂದ್ಯದ ವಿಜೇತರೊಂದಿಗೆ, ಸಿಂಧು, ಸೆಮಿಫೈನಲ್ಸ್ ಆಡಲಿದ್ದಾರೆ.

- Advertisement -

Related news

error: Content is protected !!