Sunday, July 19, 2026
spot_imgspot_img
spot_imgspot_img

ಪಿಯುಸಿ ಉತ್ತೀರ್ಣರಾದವರಿಗೆ ಹಸ್ತಚಾಲಿತ ವರ್ಗಾವಣೆ ಪ್ರಮಾಣ ಪತ್ರ’ ಬದಲಿಗೆ ಡಿಜಿಲಾಕರ್ ಮೂಲಕ ಕ್ಯೂಆರ್ ಕೋಡ್ ಸಹಿತ ‘ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ’ ವಿತರಣೆ

- Advertisement -
- Advertisement -

ಬೆಂಗಳೂರು: ರಾಜ್ಯ ಸರಕಾರವು 2025-26ನೇ ಸಾಲಿನಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ‘ಹಸ್ತಚಾಲಿತ ವರ್ಗಾವಣೆ ಪ್ರಮಾಣ ಪತ್ರ’ ಬದಲಿಗೆ ಡಿಜಿಲಾಕರ್ ಮೂಲಕ ಕ್ಯೂಆರ್ ಕೋಡ್ ಸಹಿತ ‘ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ’ ವಿತರಿಸಬೇಕು ಎಂದು ಆದೇಶ ಹೊರಡಿಸಿದೆ.

ಮೊದಲಿಗೆ ಪ್ರಾಯೋಗಿಕವಾಗಿ ರಾಜ್ಯದ ಎಲ್ಲ ಸರಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಫ್ರೆಶರ್ಸ್ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿಯ ಪರೀಕ್ಷೆ-2 ಮುಗಿದ ನಂತರ ಫಲಿತಾಂಶ ದತ್ತಾಂಶದ ಆಧಾರದ ಮೇಲೆ ಡಿಜಿಲಾಕರ್ ನಲ್ಲಿ ‘ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ’ವನ್ನು ನಿಯಮಾನುಸಾರ ವಿತರಿಸಲು ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ವಿಭಾಗದ ನಿರ್ದೇಶಕರಿಗೆ ಅನುಮತಿ ನೀಡಲಾಗಿದೆ.ಡಿಜಿಟಲ್ ವರ್ಗಾವಣೆ ಪ್ರಮಾಣ ಪತ್ರ’ದಲ್ಲಿ ಅವಶ್ಯವಿಲ್ಲದ ಕಾಲಂಗಳಾದ ಶುಲ್ಕ ಬಾಕಿ, ವಿದ್ಯಾರ್ಥಿ ವೇತನ, ಹಾಜರಾತಿ ಲೆಕ್ಕಾಚಾರ ನಮೂನೆಯನ್ನು ಕೈಬಿಡಲಾಗುತ್ತದೆ. ಆದರೆ ವಿದ್ಯಾರ್ಥಿಯ ಶೈಕ್ಷಣಿಕ ದಾಖಲೆಗಳ ಜೋಡಣೆಗಾಗಿ ಪ್ರಮಾಣ ಪತ್ರ’ದಲ್ಲಿ ಸ್ಯಾಟ್ಸ್ ಸಂಖ್ಯೆಯ ಜೊತೆಗೆ ‘ಪರೀಕ್ಷಾ ನೋಂದಣಿ ಸಂಖ್ಯೆ’ ಮತ್ತು ‘ಆಟೋಮೇಟೆಡ್ ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿಯನ್ನು (ಆಪಾ‌ರ್)’ ನಮೂದಿಸಲಾಗುತ್ತದೆ.

ಪ್ರಾಂಶುಪಾಲರು ನಿಗದಿತ ದಿನಾಂಕದೊಳಗೆ ‘ನಡತೆ ಪ್ರಮಾಣ ಪತ್ರ’ವನ್ನು ನಮೂದಿಸಬೇಕು. ನಿಗದಿತ ದಿನಾಂಕದ ನಂತರ ಯಾವುದೇ ಷರಾ ನಮೂದಿಸದೇ ಇದ್ದಲ್ಲಿ ತಂತ್ರಾಂಶವು ಸ್ವಯಂಚಾಲಿತವಾಗಿ “ಉತ್ತಮ” ಎಂದು ಮುದ್ರಿಸಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.ದತ್ತಾಂಶದ ನಿಖರತೆಗಾಗಿ, ಪ್ರಥಮ ಹಂತದಲ್ಲಿ ಕೇವಲ ದ್ವಿತೀಯ ಪಿಯುಸಿಯಲ್ಲಿ ‘ಉತ್ತೀರ್ಣರಾದ ಫ್ರೆಶರ್ಸ್’ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ನೀಡಲಾಗುತ್ತದೆ. ಮದ್ಯಂತರವಾಗಿ ವಿದ್ಯಾರ್ಥಿಗಳು ವರ್ಗಾವಣೆ ಪತ್ರಕ್ಕಾಗಿ ಬೇಡಿಕೆ ಸಲ್ಲಿಸಿದಲ್ಲಿ, ಹಿಂದೆ ಇರುವ ಪದ್ಧತಿಯಲ್ಲಿಯೇ ಪ್ರಾಂಶುಪಾಲರ ಹಂತದಲ್ಲಿ ಕ್ರಮವಹಿಸಬೇಕು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

- Advertisement -

Related news

error: Content is protected !!