Wednesday, April 24, 2024
spot_imgspot_img
spot_imgspot_img

ರಾಮ ಜನ್ಮಭೂಮಿ ಟ್ರಸ್ಟ್ ಹೆಸರಿನಲ್ಲಿ ನಕಲಿ ಚೆಕ್ ಬಳಸಿ ಅವ್ಯವಹಾರ

- Advertisement -G L Acharya panikkar
- Advertisement -

ರಾಮ ಜನ್ಮಭೂಮಿ ವಿವಾದ ಕೊನೆಗೂ ಇತ್ಯರ್ತಗೊಂಡಿದ್ದು, ಇತ್ತೀಚೆಗಷ್ಟೇ ಮಂದಿರ ನಿರ್ಮಾಣ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ಮಾಡಿದ್ದರು. 2022ರ ವೇಳೆಗೆ ರಾಮ ಮಂದಿರ ನಿರ್ಮಾಣ ಆಗಲಿದೆ ಎನ್ನಲಾಗುತ್ತಿದೆ.

ಈ ಮಧ್ಯೆ ಶಾಕಿಂಗ್​ ಬೆಳವಣಿಗೆಯೊಂದು ನಡೆದಿದೆ. ಕೆಲ ಅನಾಮಧೇಯ ವ್ಯಕ್ತಿಗಳು ನಕಲಿ ಚೆಕ್​ ಬಳಕೆ ಮಾಡಿ ರಾಮ ಮಂದಿರ ಟ್ರಸ್ಟ್​ನಿಂದ ದೊಡ್ಡ ಮೊತ್ತದ ಹಣ ವಿತ್​ಡ್ರಾ ಮಾಡಿರುವುದಾಗಿ ಜೀ ನ್ಯೂಸ್​ ವರದಿ ಮಾಡಿದೆ. ನಕಲಿ ಚೆಕ್​ ಬಳಕೆ ಮಾಡಿ ಎರಡು ಬಾರಿ ಹಣ ವಿತ್​ ಡ್ರಾ ಮಾಡಲಾಗಿತ್ತು. ಮೂರನೇ ಬಾರಿಯೂ ಖದೀಮರು ಇದೇ ಮಾರ್ಗ ಅನುಸರಿಸಲು ಮುಂದಾಗಿದ್ದರು.

ಈ ಬಗ್ಗೆ ಬ್ಯಾಂಕ್​ನವರಿಗೆ ಅನುಮಾನ ಬಂದಿತ್ತು. ಹೀಗಾಗಿ, ಮೂರನೇ ಬಾರಿ ಹಣ ವಿತ್​ ಡ್ರಾ ಮಾಡಲು ಬಂದಾಗ ಬ್ಯಾಕ್​ ಮ್ಯಾನೇಜರ್​ ಟ್ರಸ್ಟ್​ನವರಿಗೆ ತಿಳಿಸಿದ್ದರು. ವಿಚಾರ ತಿಳಿಯುತ್ತಿದ್ದಂತೆ ಟ್ರಸ್ಟ್​ನವರು ಬ್ಯಾಂಕ್​ಗೆ ಆಗಮಿಸಿದ್ದಾರೆ. ಈ ವೇಳೆ ಇದು ನಕಲಿ ಚೆಕ್​ ಎನ್ನುವ ವಿಚಾರ ಗೊತ್ತಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸದಂತೆ ಈಗಾಗಲೇ ಕೆಲವರ ವಿರುದ್ಧ ಎಫ್​ಐಆರ್​ ದಾಖಲು ಮಾಡಲಾಗಿದೆ. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ.

- Advertisement -

Related news

error: Content is protected !!