- Advertisement -
- Advertisement -
ನವದೆಹಲಿ: ಭಾರತೀಯರ ದಶಕಗಳ ಕನಸು ನನಸಾಗಿದೆ. ಫ್ರಾನ್ಸ್ ನಿಂದ ಡಸಾಲ್ಟ್ ರಫೇಲ್ ಯುದ್ಧ ವಿಮಾನಗಳು ಭಾರತದ ಭೂಸ್ಪರ್ಶಿಸಿದ್ದು, ವಾಯುನೆಲೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ಅಂಬಾಲಾ ವಾಯುನೆಲೆಯಲ್ಲಿ ರಫೇಲ್ ಯುದ್ಧ ವಿಮಾನಗಳು ಲ್ಯಾಂಡಿಂಗ್ ಆಗಿದ್ದು ಅದ್ಧೂರಿ ಸ್ವಾಗತ ಕೋರಲಾಯಿತು.
The Touchdown of Rafale at Ambala. pic.twitter.com/e3OFQa1bZY
— Rajnath Singh (@rajnathsingh) July 29, 2020
ಭಾರತೀಯ ವಾಯುಸೇನೆ ಮುಖ್ಯಸ್ಥ ಆರ್ ಕೆಎಸ್ ಬದೌರಿಯಾ ಹಾಗೂ ಹಿರಿಯ ಅಧಿಕಾರಿಗಳು ರಫೇಲ್ ಯುದ್ಧ ವಿಮಾನಗಳನ್ನು ಸ್ವಾಗತಿಸಿ, ಅಧಿಕೃತವಾಗಿ ವಾಯುಸೇನೆಗೆ ಸೇರ್ಪಡೆಗೊಳಿಸಿದರು. ಮುಂದಿನ ತಿಂಗಳು ಆಗಸ್ಟ್ ನಲ್ಲಿ ರಫೇಲ್ ಸಂಭ್ರಮಾಚರಣೆ ನಡೆಯಲಿದೆ ಎಂದು ಭಾರತೀಯ ವಾಯುಸೇನೆ ಸ್ಪಷ್ಟಪಡಿಸಿದೆ.
- Advertisement -