Wednesday, December 11, 2024
spot_imgspot_img
spot_imgspot_img

ರಾಜಸ್ಥಾನ ಸರ್ಕಾರದ ಬಿಕ್ಕಟ್ಟು ಮತ್ತಷ್ಟು ಜಟಿಲ.!

- Advertisement -
- Advertisement -

ವರದಿ: ನ್ಯೂಸ್ ಡೆಸ್ಕ್, ವಿ ಟಿವಿ

ನವದೆಹಲಿ: ರಾಜಸ್ಥಾನ ಸರ್ಕಾರದ ಬಿಕ್ಕಟ್ಟು ಶಮನವಾಗುವ ಲಕ್ಷಣಗಳೇ ಕಾಣುತ್ತಿಲ್ಲ. ಹೀಗಾಗಿ ಡಿಸಿಎಂ ಸಚಿನ್ ಪೈಲಟ್ ತನ್ನ ಬೆಂಬಲಿಗ ಶಾಸಕರ ಜತೆ ನವದೆಹಲಿಗೆ ತೆರಳಿದ್ದು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಸಿಎಂ ಪಟ್ಟಕ್ಕಾಗಿ ನಡೆಯುತ್ತಿದೆಯಾ ಒಳಜಗಳ..?
ರಾಜಸ್ಥಾನದಲ್ಲಿ ಸಿಎಂ ಅಶೋಕ್ ಗೆಹ್ಲೋಟ್ ಹಾಗೂ ಸಚಿನ್ ಪೈಲಟ್ ನಡುವಿನ ಮುನಿಸು ಇಂದು ನಿನ್ನೇಯದ್ದಲ್ಲ. ಸಿಎಂ ಪಟ್ಟಕ್ಕಾಗಿ ಕಾಯುತ್ತಿರುವ ಪೈಲಟ್, ಮಧ್ಯಪ್ರದೇಶದಲ್ಲಿ ಪಕ್ಷ ತೊರೆದ ಜ್ಯೋತಿರಾದಿತ್ಯ ಸಿಂಧಿಯಾ ಅವರ ದಾರಿ ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ಗೆ ಮಾಹಿತಿ ನೀಡಲು ಸಚಿನ್ ಪೈಲಟ್ ಮೂವರು ಬೆಂಬಲಿಗ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟು 22 ಕಾಂಗ್ರೆಸ್ ಶಾಸಕರ ಪೈಕಿ 19 ಶಾಸಕರು ಸಚಿನ್ ಪೈಲಟ್ ಬೆಂಬಲಿಗರು ಎಂದೇ ಹೇಳಲಾಗ್ತಿದೆ. ಹೀಗಾಗಿ ಈ ಶಾಸಕರನ್ನು ಗುರುಗ್ರಾಮ್ ನ ರೆಸಾರ್ಟ್ ನಲ್ಲಿ ಇಡಲಾಗಿದೆ.

ಸರ್ಕಾರ ಉರುಳಿಸುವ ತಂತ್ರ ಮಾಡುತ್ತಿದೆಯಾ ಬಿಜೆಪಿ..?
ಮತ್ತೊಂದುಕಡೆ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ನಮ್ಮ ಶಾಸಕರನ್ನು ಖರೀಸುತ್ತಿಲು ಪಯತ್ನ ನಡೆಯುತ್ತಿದೆ ಎಂದು ಸಿಎಂ ಅಶೋಕ್ ಗೆಹ್ಲೋಟ್ ಆರೋಪ ಮಾಡುತ್ತಲೇ ಬಂದಿದ್ದಾರೆ. ಒಟ್ಟಿನಲ್ಲಿ ರಾಜಸ್ಥಾನ ಕಾಂಗ್ರೆಸ್ ಸರ್ಕಾರದ ಬೆಳವಣಿಗೆ ದಿನಕ್ಕೊಂದು ತಿರುವು ಪಡೆದುಕೊಂಡಿದ್ದು, ರಾಜಕೀಯ ವಲಯದಲ್ಲಿ ತ್ರೀವ್ರ ಕುತೂಹಲಕ್ಕೆ ಕಾರಣವಾಗಿದೆ.

- Advertisement -

Related news

error: Content is protected !!