Friday, May 17, 2024
spot_imgspot_img
spot_imgspot_img

ಚೀನಾ ದಾಳಿ ಎದುರಿಸಲು ಎಂಥದ್ದೇ ಸಂದರ್ಭ ಬಂದರೂ ಭಾರತ ಸಮರ್ಥವಾಗಿದೆ – ರಾಜನಾಥ್ ಸಿಂಗ್

- Advertisement -G L Acharya panikkar
- Advertisement -

ನವದೆಹಲಿ: ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರು ಇಂದು ಸಂಸತ್ತಿನಲ್ಲಿ ಪೂರ್ವ ಲಡಾಖ್‌ ಗಡಿಯಲ್ಲಿ ಚೀನಾ ಹೆಚ್ಚುವರಿ ಸೇನೆ ನಿಯೋಜನೆ ಮಾಡಿದ್ದು, ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ‌. ಈ ಪರಿಸ್ಥಿತಿಯನ್ನು ನಿಭಾಯಸಿಲು ಭಾರತೀಯ ಸೇನೆ ಸಮರ್ಥವಾಗಿದೆ ಭಾರತ-ಚೀನಾ ಗಡಿ ಬಿಕ್ಕಟ್ಟಿನ ಬಗ್ಗೆ ಮಾತನಾಡಿದರು.

ಪಾಂಗಾಂಗ್ ತ್ಸೊ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಗಳು, ಗೊಗ್ರಾ ಮತ್ತು ಪೂರ್ವ ಲಡಾಕ್ ಘರ್ಷಣೆ ಕೇಂದ್ರಗಳಾಗಿವೆ. ಇದಕ್ಕೆ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದರು.ಗಡಿಯ ವಿಚಾರ ನಿಭಾಯಿಸಲು ಕೇಂದ್ರ ಸರ್ಕಾರ ಬದ್ದವಾಗಿದೆ. ಎರಡು ದೇಶಗಳು ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆ ನಡೆಸುತ್ತಿವೆ. ಚೀನಾ ರಕ್ಷಣಾ ಸಚಿವರ ಭೇಟಿ ವೇಳೆ ನಮ್ಮ ಸೇನೆ ಗಡಿ ನಿರ್ವಹಣೆ ವಿಚಾರದಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಂಡಿದೆ ಎಂದು ತಿಳಿಸಿದೆ. 

ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ಕಾಪಾಡಲು ಗಡಿಗಳನ್ನು ಕಾಯುತ್ತಿರುವ ಸಶಸ್ತ್ರಪಡೆಯೊಂದಿಗೆ ನಾವೆಲ್ಲರೂ ನಿಲ್ಲಬೇಕು ಎಂಬ ನಿರ್ಣಯವನ್ನು ಅಂಗೀಕರಿಸಬೇಕು ಎಂದು ಸದನವನ್ನು ಕೇಳಿಕೊಳ್ಳುತ್ತೇನೆ ಎಂದು ತಿಳಿಸಿದರು.ಪ್ರಧಾನಿ ಭೇಟಿ ಬಳಿಕ ಸೈನಿಕರಲ್ಲಿ ಹುಮ್ಮಸ್ಸು ದುಪ್ಪಟ್ಟಾಗಿದೆ ಜೀವದ ಹಂಗು ತೊರೆದು ದೇಶದ ಸೇವೆ ಮಾಡಿತ್ತಿದ್ದಾರೆ ಎಂದು ಸೈನಿಕರನ್ನು ರಾಜನಾಥ್‌ ಸಿಂಗ್‌ ಶ್ಲಾಘಿಸಿದರು.

- Advertisement -

Related news

error: Content is protected !!