Friday, July 11, 2025
spot_imgspot_img
spot_imgspot_img

ಕೋರೋನಾ ಚೈನ್ ಲಿಂಕ್ ಬ್ರೇಕ್ ಮಾಡಲು ಪ್ರಧಾನಿ ದೇಶದಲ್ಲಿ ಪೂರಕ ವ್ಯವಸ್ಥೆಯೊಂದಿಗೆ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಬೇಕು

- Advertisement -
- Advertisement -

ದೇಶದಲ್ಲಿ ದಿನಂದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೋರೋನಾ ಪೀಡಿತರ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ… ಮತ್ತು ಪರಿಸ್ಥಿತಿ ನಿಯಂತ್ರಣ ತಪ್ಪಿರುವ ಈ ಸಂಧರ್ಭದಲ್ಲಿ ಸರಕಾರವು ಕೋವಿಡ್ ಹರಡುವಿಕೆಯ ಚೈನ್ ಲಿಂಕ್ ನ್ನು ಬ್ರೇಕ್ ಮಾಡಬೇಕಾಗಿದೆ ಅದಕ್ಕಾಗಿ ದೇಶದಾದ್ಯಂತ ಜನತೆಗೆ ಒಮ್ಮೆಲೆ ತೊಂದರೆಯಾಗದ ರೀತಿಯಲ್ಲಿ ಪೂರ್ವ ತಯಾರಿಯೊಂದಿಗೆ ಎರಡನೇ ಭಾರಿ National Lock Down ನ್ನು ಘೋಷಿಸಬೇಕಾದ ಅನಿವಾರ್ಯತೆ ಇದೆ.!

ಕೋವಿಡ್ ಹರಡುವಿಕೆ ಮತ್ತಷ್ಟು ಹೆಚ್ಚಿದರೆ ಸೊಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಹೋದರೆ ಸರಕಾರಕ್ಕೆ ಅದನ್ನು ನಿಭಾಯಿಸಲು ಕೂಡಾ ಕಷ್ಟವಾಗಬಹುದು. ದೇಶದ ಜನರ ಪ್ರಾಣ ಉಳಿಸುವ ಕಾರ್ಯ ಆಗಬೇಕಾಗಿದೆ ಪೂರ್ವ ತಯಾರಿಯೊಂದಿಗೆ ದೇಶದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ – ಡೌನ್ ಆಗಬೇಕಾದ ಅಗತ್ಯತೆ ಇದೆ!!

ಲಾಕ್ – ಡೌನ್ ನಿಂದ ಆರ್ಥಿಕತೆಯ ಮೇಲೆ ತೀವ್ರವಾಗಿ ಕೆಟ್ಟ ಪರಿಣಾಮವೂ ಎದುರಾಗಲಿದ್ದು ಆರ್ಥಿಕ ಸಂಕಷ್ಟವೂ ಮುಂದಿನ ದಿನಗಳಲ್ಲಿ ದೇಶವಾಸಿಗಳನ್ನು ಕಾಡಬಹುದು ಆದರೆ ಜನಸಾಮಾನ್ಯರ ಜಿವನದ ಜೊತೆಗೆ ಜೀವವನ್ನೂ ಕಾಪಾಡಬೇಕಾಗಿದೆ. ಗೌರವಾನ್ವಿತ ಪ್ರಧಾನ ಮಂತ್ರಿಗಳು ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸಬೇಕಾಗಿದೆ.

ರಾಕೇಶ್ ಬಿರ್ತಿ ಸಾಮಾಜಿಕ ಕಾರ್ಯಕರ್ತರು, ಬ್ರಹ್ಮಾವರ
- Advertisement -

Related news

error: Content is protected !!