ವರದಿ: ನ್ಯೂಸ್ ಡೆಸ್ಕ್, ವಿ ಟಿವಿ
ಲಕ್ನೋ: ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ಹಿನ್ನಲೆಯಲ್ಲಿ ಅಯೋಧ್ಯೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಹೀಗಾಗಿ ರಾಮಲಲ್ಲಾ (ಬಾಲರಾಮ) ನಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ಚಿನ್ನಲೇಪದ ವಸ್ತ್ರದಲ್ಲಿ ರಾಮಲಲ್ಲಾ ಕಂಗೊಳಿಸುತ್ತಿದ್ದು, ವಿಶೇಷ ಪೂಜೆ ನಡೆಯುತ್ತಿದೆ.
#WATCH The idol of 'Ram Lalla' at the Ram Janambhoomi site in #Ayodhya.
— ANI (@ANI) August 5, 2020
Prime Minister Narendra Modi will perform 'Bhoomi Poojan' for #RamTemple at the site later today. pic.twitter.com/eL29b500Mx
ಈಗಾಗಲೇ ಪ್ರಧಾನಿ ಮೋದಿ ಅಯೋಧ್ಯೆ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಮಧ್ಯಾಹ್ನ 12.30ಕ್ಕೆ ಭೂಮಿ ಪೂಜೆ ನಡೆಸಲಿದ್ದಾರೆ. ಅದಕ್ಕೂ ಮೊದಲು ರಾಮಲಲ್ಲಾನ ದರ್ಶನ ಪಡೆಯಲಿದ್ದಾರೆ.
ಹಸಿರು ಬಣ್ಣದ ಈ ವಸ್ತ್ರಕ್ಕೆ ಕೇಸರಿ ಬಣ್ಣದ ಬಾರ್ಡರ್ ಹಾಕಲಾಗಿದೆ. ನವರತ್ನಗಳನ್ನು ಅಳವಡಿಸಿ ಈ ವಸ್ತ್ರವನ್ನು ಸಿದ್ಧಪಡಿಸಲಾಗಿದೆ. ಭಗವತ್ ಪ್ರಸಾದ್ ಹಾಗೂ ಶಂಕರ್ ಲಾಲ್ ಎಂಬ ಸಹೋದರರ ನೇತೃತ್ವದಲ್ಲಿ ಈ ವಸ್ತ್ರವನ್ನು ಸಿದ್ಧಪಡಿಸಲಾಗಿದೆ. ಸುಮಾರು 4 ತಲೆಮಾರಿನಿಂದ ರಾಮಲಲ್ಲಾನಿಗೆ ಇದೇ ಅಂಗಡಿಯಲ್ಲಿ ವಸ್ತ್ರ ಸಿದ್ಧಪಡಿಸಲಾಗುತ್ತಿದೆ.