Monday, September 26, 2022
spot_imgspot_img
spot_imgspot_img

ರಮಾನಾಥ ರೈ ರವರ 71 ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಪುತ್ತೂರು ಪ್ರಜ್ಞಾ ಆಶ್ರಮದಲ್ಲಿ ಆಚರಿಸಿದ ಬೆಳ್ಳಿಪ್ಪಾಡಿ ರಮಾನಾಥ ರೈ ಅಭಿಮಾನಿ ಬಳಗ

- Advertisement -G L Acharya G L Acharya
- Advertisement -

ಪುತ್ತೂರು : ಬೆಳ್ಳಿಪ್ಪಾಡಿ ರಮಾನಾಥ ರೈ ಅಭಿಮಾನಿ ಬಳಗ ಪುತ್ತೂರು ಇದರ ವತಿಯಿಂದ ರಮಾನಾಥ ರೈ ಅವರ 71 ನೇ ಹುಟ್ಟುಹಬ್ಬವನ್ನು ಪುತ್ತೂರಿನ ಬಿರುಮಲೆ ಬೆಟ್ಟದಲ್ಲಿರುವ ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಮತ್ತು ಪುನರ್ವಸತಿ ಕೇಂದ್ರ ವಾಗಿರುವ ಪ್ರಜ್ಞಾ ಆಶ್ರಮದಲ್ಲಿ ವಿಶಿಷ್ಟವಾಗಿ ಆಚರಿಸಲಾಯಿತು.

ರಮಾನಾಥ ರೈ ಅವರು ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ ಆಶ್ರಮದ ವಿಕಲಚೇತನರಿಗೆ ತಿನ್ನಿಸಿದರು. ಇದೇ ವೇಳೆ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಸುದರ್ಶನ್ ಪಡಿಯಾರ್ ಹಾಗೂ ಪ್ರಜ್ಞಾ ಆಶ್ರಮದ ಅಣ್ಣಪ್ಪ- ಜ್ಯೋತಿ ದಂಪತಿಗಳನ್ನು ಸನ್ಮಾನಿಸಲಾಯಿತು. ಅಭಿಮಾನಿ ಬಳಗದ ವತಿಯಿಂದ ಆಶ್ರಮದ ನಿವಾಸಿಗಳಿಗೆ ಬಟ್ಟೆ ವಿತರಿಸಲಾಯಿತು. ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಮುರಳೀಧರ ಗೌಡ ಕೆಮ್ಮಾರ ಅವರು ರೂ ಐದು ಸಾವಿರವನ್ನು ರಮಾನಾಥ ರೈ ಅವರ ಮೂಲಕ ಆಶ್ರಮಕ್ಕೆ ಹಸ್ತಾಂತರಿಸಿದರು.

ಬೆಳ್ಳಿಪ್ಪಾಡಿ ರಮಾನಾಥ ರೈ ಅಭಿಮಾನಿ ಬಳಗ ಪುತ್ತೂರು ಇವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ರೈ ಅವರು ನನ್ನ ವಿರೋಧಿಗಳು ನಾನು ಜಾತ್ಯಾತೀತ ಎಂಬ ನೆಲೆಯಲ್ಲಿ ನನ್ನನ್ನು ವಿರೋಧಿಸುತ್ತಿರುವುದು ನನಗೆ ತುಂಬಾ ಖುಷಿ ಕೊಡುತ್ತದೆ ಯಾಕೆಂದರೆ ನಾನು ಯಾವತ್ತೂ ಜಾತಿವಾದಿ, ಮತೀಯವಾದಿ ಅಲ್ಲ ಎಂದ ಅವರು ಪ್ರಪಂಚದಲ್ಲಿ ಭಾರತ ದೇಶಕ್ಕೆ ಹೋಲಿಸುವ ಇನ್ನೊಂದು ದೇಶವಿದ್ದರೆ ಅದು ಭಾರತ ಮಾತ್ರ ಆದುದರಿಂದ ವಿವಿಧತೆಯಲ್ಲಿ ಏಕತೆಯನ್ನು ಮೈಗೂಡಿಸಿಕೊಂಡ ಜಾತ್ಯಾತೀತ ಭವ್ಯ ಪರಂಪರೆಯನ್ನು ಹೊಂದಿದ ಭಾರತದ ರಕ್ಷಣೆಗೆ ನಾವು ಕಟಿಬದ್ದರಾಗೋಣ ಎಂದರು.

 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಅಧಿಕಾರ ಇದ್ದರೂ ಇಲ್ಲದಿದ್ದರೂ ಸಾರ್ವಜನಿಕರ ಸೇವೆಯಲ್ಲಿ ತಮ್ಮನ್ನು ನಿರಂತರವಾಗಿ ತೊಡಗಿಸಿ ಕೊಂಡಿರುವ ಧನಿವರಿಯದ ಜನನಾಯಕ ರಮಾನಾಥ ರೈ ಅವರು ಮತ್ತೊಮ್ಮೆ ಶಾಸಕರಾಗಿ, ಸಚಿವರಾಗಿ ಸೇವೆ ಸಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಎನ್.ಕೆ. ಜಗನ್ನಿವಾಸ್ ರಾವ್ ಮಾತನಾಡಿ ರಮಾನಾಥ ರೈ ಅವರು ಯಾವುದೇ ಆಪಾದನೆ ಇಲ್ಲದ ದಕ್ಷಿಣ ಕನ್ನಡ ಜಿಲ್ಲೆಯ ಜನ ನಾಯಕ ಎಂದರು.

ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ ಪ್ರಸ್ತಾವನೆಗೈದು ಸ್ವಾಗತಿಸಿದರು. ಅಭಿಮಾನಿ ಬಳಗದ ಪ್ರಮುಖರಾದ ಅನ್ವರ್ ಖಾಸಿಂ, ಜಗದೀಶ್ ಕಜೆ, ಗಂಗಾಧರ ಎಲಿಕ, ಬಶೀರ್ ಪರ್ಲಡ್ಕ, ಕಮಲೇಶ್ ಎಚ್.ಡಿ, ಅಶೋಕ್ ಕೆ.ಸಿ, ರವಿಚಂದ್ರ ಆಚಾರ್ಯ ಅತಿಥಿಗಳನ್ನು ಗೌರವಿಸಿದರು.

ಅತಿಥಿಗಳಾಗಿ ಭಾಗವಹಿಸಿದ್ದ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್‌ ಕೆ.ಬಿ, ಕೆ.ಆರ್.ಹುಸೈನ್ ದಾರಿಮಿ ರೆಂಜಲಾಡಿ, ಪುತ್ತೂರು ಮಹಿಳಾ ಕಾಲೇಜು ನಿವೃತ್ತ ಪ್ರಾಂಶುಪಾಲ ಕ್ಷೇವಿಯರ್ ಡಿ’ಸೋಜ, ಪುತ್ತೂರು ಬ್ಲಾಕ್ ಯವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಮಾತನಾಡಿದರು. ಬೆಂಗಳೂರು ರಾಜೀವ್ ಗಾಂಧಿ ವಿ.ವಿ. ಸಿಂಡಿಕೇಟ್ ಮಾಜಿ ಸದಸ್ಯ ಡಾ. ರಘು ಬೆಳ್ಳಿಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರುಗಳಾದ ಎಂ.ಎಸ್. ಮುಹಮ್ಮದ್, ಅನಿತಾ ಹೇಮನಾಥ ಶೆಟ್ಟಿ, ಪ್ರಮುಖರಾದ ಸೂತ್ರಬೆಟ್ಟು ಜಗನ್ನಾಥ ರೈ, ಕಾರ್ತಿಕ್ ರೈ ಬೆಳ್ಳಿಪ್ಪಾಡಿ, ಮಲ್ಲಿಕಾ ಪಕ್ಕಳ, ಶಕ್ತಿ ಸಿನ, ರಾಬಿನ್ ತಾವ್ರೋ, ವಾಣಿ ಶ್ರೀಧರ್, ಹನೀಫ್ ಬಗ್ಗುಮೂಲೆ, ಹನೀಫ್ ಪುಂಚತ್ತಾರ್, ಹನೀಫ್ ಮುಂಡೂರು, ನ್ಯಾಯವಾದಿ ಎಂ.ಪಿ. ಅಬೂಬಕ್ಕರ್, ಶಬ್ಬೀರ್ ಕೆಂಪಿ, ಎಂ.ಜಿ.ಇಸ್ಮಾಯಿಲ್, ಅಬ್ದುರ್ರಹ್ಮಾನ್ ಅಜಾದ್ ದರ್ಬೆ, ಶಾಬಾ ಕಬಕ, ಅದ್ದು ಕೆದುವಡ್ಕ, ಸಯ್ಯದ್ ಕಬಕ, ಬ್ರೈಟ್ ಇಸ್ಮಾಯಿಲ್ ಪೋಳ್ಯ, ಮೂಸಾ ಕುಂಞಿ ಕಬಕ, ಎಂ.ಕೆ.ಮೂಸ ವಿಟ್ಲ, ಉನೈಸ್ ಗಡಿಯಾರ, ಖಲಂದರ್ ಅಲಿ, ಹಕೀಂ ಖಂದಕ್ ಮಿತ್ತೂರು, ಜಿ.ಎ. ಸಂಶುದ್ದೀನ್ ಅಜ್ಜಿನಡ್ಕ, ರಶೀದ್ ಮುರ, ಜಮಾಲ್ ಮುಕ್ವೆ, ಅಶ್ರಫ್ ಮುಕ್ವೆ, ಮೋನು ಬಪ್ಪಳಿಗೆ, ಅಬೂಬಕ್ಕರ್ ನಸೀಬ್, ನೌಶೀರ್ ಪಾಟ್ರಕೋಡಿ, ಅರ್ಷದ್ ಕೋಡಿ ಹಾಗೂ ಇಬ್ರಾಹಿಂ ಕಡವ ಮೊದಲಾದವರು ಭಾಗವಹಿಸಿದ್ದರು.

ಇಸಾಕ್ ಸಾಲ್ಮರ ವಂದಿಸಿದರು, ನೇಮಾಕ್ಷ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!