Friday, April 26, 2024
spot_imgspot_img
spot_imgspot_img

ಮದುವೆ ದಿನವೇ ಮದುಮಗನಿಗೆ ಶಾಕಿಂಗ್ ನ್ಯೂಸ್ ಕೊಟ್ಟ ಓಲ್ಡ್ ಲವರ್ ಯುವತಿಯೊಬ್ಬಳನ್ನು ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿ ವಂಚಿಸಿ ಇನ್ನೊಬ್ಬಳ ಜತೆ ಮದುವೆ-ಮದುವೆ ದಿನವೇ ಅತ್ಯಾಚಾರ ದೂರು ದಾಖಲಿಸಿದ ಸಂತ್ರಸ್ಥೆ ಯುವತಿ

- Advertisement -G L Acharya panikkar
- Advertisement -

ವಿಟ್ಲ: ಯುವಕನೊಬ್ಬ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ, ಬಳಿಕ ಆಕೆಯ ಜತೆ ದೈಹಿಕ ಸಂಪರ್ಕ ನಡೆಸಿ ಬಳಿಕ ಬೇರೆ ಯುವತಿ ಜತೆ ಮದುವೆಯಾಗಿದ್ದು, ಈ ಬಗ್ಗೆ ನೊಂದ ಯುವತಿ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪಾಣೆಮಂಗಳೂರು ಸಮೀಪದ ಆಲಡ್ಕ ನಿವಾಸಿ ನಾಸೀರ್(30) ಎಂಬಾತ ಮಾಣಿ ಸಮೀಪದ ಯುವತಿಯನ್ನು 11 ವರ್ಷಗಳಿಂದ ಪ್ರೀತಿಸುತ್ತಿದ್ದು, ಈ ನಡುವೆಯೂ ಐದು ವರ್ಷದ ಮೊದಲು ತನ್ನ ತಂಗಿಯ ಮದುವೆಗೆಂದು ಹೇಳಿ ಯುವತಿಯಿಂದ 60 ಸಾವಿರ ರೂ. ಹಾಗೂ 40 ಸಾವಿರ ರೂ. ಮೊತ್ತದ ಚಿನ್ನವನ್ನು ಪಡೆದು ಹಿಂತಿರುಗಿಸರಲಿಲ್ಲ.

ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಬಲತ್ಕಾರವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಈ ವಿಷಯವನ್ನು ಯಾರಲ್ಲಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿರುತ್ತಾನೆ. ಈ ಬಗ್ಗೆ ಯುವತಿ ಯಾರಲ್ಲಿಯೂ ಈ ವಿಚಾರ ತಿಳಿಸಿರುವುದಿಲ್ಲ. ನಂತರ ಯುವತಿಯನ್ನು ವಿವಾಹವಾಗುತ್ತೇನೆ ಎಂದು ನಂಬಿಸಿ ಮತ್ತೆ ಎರಡು ಬಾರಿ ದೈಹಿಕ ಸಂಪರ್ಕ ಬೆಳೆಸಿರುತ್ತಾನೆ.

ಮದುವೆಯಾಗುತ್ತಾನೇ ಎಂಬ ನಂಬಿಕೆಯಿಂದ ಯುವತಿ ಯುವಕನ ಬಗ್ಗೆ ಯಾರಲ್ಲಿಯೂ ಹೇಳದೇ ಮುಚ್ಚಿಟ್ಟಿದ್ದಳು. ಈ ದಿನ ಸೋಮವಾರ ಪಾಣೆಮಂಗಳೂರಿನ ಮದುವೆ ಹಾಲ್ ನಲ್ಲಿ ಬೇರೆ ಹುಡುಗಿ ಜತೆ ಮದುವೆ ಯಾಗಿರುವ ಬಗ್ಗೆ ನೊಂದ ಯುವತಿಗೆ ತಿಳಿದಿದೆ. 11 ವರ್ಷದಿಂದ ಮದುವೆಯಾಗುವುದಾಗಿ ನಂಬಿಸಿ ಮೂರು ಬಾರಿ ದೈಹಿಕ ಸಂಪರ್ಕ ಮಾಡಿ ಈ ದಿನ ಆತ ಬೇರೆ ಯುವತಿ ಜತೆ ವಿವಾಹ ಆಗಿದ್ದರಿಂದ ನೊಂದ ಯುವತಿ ಮನೆಯವರಿಗೆ ತಿಳಿಸಿ ಅವರೊಂದಿಗೆ ಬಂದು ವಿಟ್ಲ ಪೊಲೀಸ್ ಠಾಣೆಗೆ ಯುವಕನ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!