Monday, April 29, 2024
spot_imgspot_img
spot_imgspot_img

ಪುತ್ತೂರಿನಲ್ಲಿ ಅಪರೂಪದ ಬೆಕ್ಕಿನ ಕಣ್ಣಿನ ಹಾವು ಪತ್ತೆ..!!

- Advertisement -G L Acharya panikkar
- Advertisement -

ಪುತ್ತೂರು: ಪುತ್ತೂರಿನಲ್ಲಿ ಅಪರೂಪವಾದ ಬೆಕ್ಕಿನ ಕಣ್ಣಿನ ಹಾವೊಂದು ಕಾಣಸಿಕ್ಕಿದೆ.

ಈ ಹಾವನ್ನು ಬೆಕ್ಕಿನ ಕಣ್ಣಿನ ಹಾವು ಎಂದು ಕರೆಯಲಾಗುತ್ತಿದ್ದು ಬೆಕ್ಕಿನ ಕಣ್ಣಿನಂತೆ ಹೊಳಪು ಹೊಂದಿರುವ ಕಾರಣ ಬೆಕ್ಕಿನ ಕಣ್ಣಿನ ಹಾವು ಎಂದು ಕರೆಯಲಾಗುತ್ತಿದೆ.

ರಾತ್ರಿ ವೇಳೆಯ ಸಂಚಾರಿಯಾಗಿರುವ ಈ ನಿರುಪದ್ರವಿ ಹಾಫಾರೆಸ್ಟಿನ್ ಕ್ಯಾಟ್ ಸ್ನೇಕ್ ಸಣ್ಣ ಹಕ್ಕಿ, ಒತಿಕ್ಯಾತ, ಹಕ್ಕಿಗಳ ಮೊಟ್ಟೆಯನ್ನು ಬೇಟೆಯಾಡಿ ತಿನ್ನುತ್ತವೆ. ವಿಷಕಾರಿಯಲ್ಲದ ನಿರುಪದ್ರವಿಯಾಗಿರುವ ಅಪರೂಪದ ಈ ಪಾರೆಸ್ಟಿನ್ ಕ್ಯಾಟ್ ಸ್ನೇಕ್ ಬಲ್ನಾಡಿನ ರವಿಕೃಷ್ಣ ಕಲ್ಲಜೆ ಎನ್ನುವವರ ಮನೆಯಲ್ಲಿ ಪತ್ತೆಯಾಗಿದೆ.

ಹಳದಿ ಬಣ್ಣದಲ್ಲಿ ಕಂದು‌ ಬಣ್ಣದ ಪಟ್ಟಿ ಹೊಂದಿರುವ ಹಾವನ್ನು ಪುತ್ತೂರಿನ ಉರಗತಜ್ಞ ತೇಜಸ್ ಬನ್ನೂರ್ ರಕ್ಷಣೆ ಮಾಡಿ ದೂರದ ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.

- Advertisement -

Related news

error: Content is protected !!