ಅತಿ ಹೆಚ್ಚು ಟ್ರೋಲ್ಗೆ ಒಳಗಾಗಿರುವ ದಂಪತಿ ಎಂದರೆ ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ರವೀಂದರ್ ಚಂದ್ರಶೇಖರ್ ಮತ್ತು ಕಿರುತೆರೆ ನಿರೂಪಕಿ ಮಹಾಲಕ್ಷ್ಮಿ. ಮೊದಲ ವಿವಾಹ ವಾರ್ಷಿಕೋತ್ಸವದ ಖುಷಿಯಲ್ಲಿ ಇರುವಾಗಲೇ ಈ ಜೋಡಿಗೆ ಶಾಕಿಂಗ್ ಎದುರಾಗಿತ್ತು.
ಮಾಧವ ಮೀಡಿಯಾ ಪ್ರೈ. ಲಿಮಿಟೆಡ್‌ನ ಬಾಲಾಜಿ ಎಂಬ ಉದ್ಯಮಿ ರವೀಂದರ್ ಚಂದ್ರಶೇಖರ್ ತಮಗೆ ವಂಚನೆ ಮಾಡಿದ್ದಾರೆಂದು ಅವರು ದೂರು ದಾಖಲಿಸಿದ್ದರು. ರವೀಂದ್ರರ್ ತಮ್ಮ ಲಿಬ್ರಾ ಪ್ರೊಡಕ್ಷನ್ಸ್ ಅಡಿ ಘನತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಯೋಜನೆ ಹಣ ಹೂಡಿಕೆ ಮಾಡುವಂತೆ ಉದ್ಯಮಿ ಬಾಲಾಜಿ ಅವರನ್ನು ಪ್ರೇರೇಪಿಸಿದ್ದರು. ಈ ಸಂಬಂಧ ಸೆಪ್ಟೆಂಬರ್ 2020ಯಲ್ಲಿ ಸುಮಾರು 15.38 ಕೋಟಿ ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದರು. ಆದರೆ, ಹಣ ಪಡೆದ ಬಳಿಕ ಯೋಜನೆಯನ್ನು ಆರಂಭಿಸಿಲ್ಲ ಹಾಗೂ ಹಣವನ್ನೂ ಹಿಂತಿರುಗಿಸಿಲ್ಲ ಎಂದು ಚೆನ್ನೈ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ನಿರ್ಮಾಪಕ ರವೀಂದರ್ ಚಂದ್ರಶೇಖರನ್ ಅವರನ್ನು ವಂಚನೆ ಪ್ರಕರಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ರವೀಂದರ್ ಚಂದ್ರಶೇಖರ್ ವಿರುದ್ಧ ಕೇಂದ್ರ ಅಪರಾಧ ವಿಭಾಗದ ಪೊಲೀಸ್ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿದೆ
ಕಳೆದ ವರ್ಷದ ಸೆ. 1ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರೆಗೂ ಎಲ್ಲವೂ ಚೆನ್ನಾಗಿಯೇ ಇತ್ತು. ಪತ್ನಿಯನ್ನು ಸದಾ ಹಾಡಿ ಹೊಗಳುತ್ತಿದ್ದ ರವೀಂದರ್, ಪತ್ನಿ ಮೇಲಿನ ತಮ್ಮ ಪ್ರೀತಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪತ್ರಗಳ ಮೂಲಕ ವ್ಯಕ್ತಪಡಿಸುತ್ತಿದ್ದರು. ಹೀಗಿರುವಾಗಲೇ ವಂಚನೆ ಕೇಸ್‌ನಲ್ಲಿ ರವೀಂದರ್ ಬಂಧನವಾಗುತ್ತಿದ್ದಂತೆ ಮಹಾಲಕ್ಷ್ಮೀ ತನ್ನ ವರಸೆ ಬದಲಿಸಿದ್ದಾರೆ.
ಮಹಾಲಕ್ಷ್ಮಿ ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಸುರಿಸಿದ್ದಾರೆ. ನನಗೆ ಈ ಮನುಷ್ಯ ಮೋಸ ಮಾಡಿದ್ದಾನೆ. ತಾನು ಹೀಗೆ ಹತ್ತಾರು ಕೋಟಿ ರೂಪಾಯಿ ಮೋಸ ಮಾಡಿರುವ ವಿಷಯವನ್ನು ನನಗೆ ತಿಳಿಸದೇ ಮದುವೆಯಾಗಿದ್ದಾನೆ. ನಾನು ನನ್ನ ಮೊದಲ ಪತಿಗೆ ಡಿವೋರ್ಸ್ ಕೊಟ್ಟು ಈತನ ಜೊತೆ ಮದುವೆಯಾಗಿ ಮೋಸ ಹೋದೆ ಎಂದು ಗೋಳೋ ಎಂದು ಅತ್ತಿದ್ದಾರೆ. ಆತ ಮೊಬೈಲ್ ಸಂಖ್ಯೆ ಬದಲಿಸಿಕೊಂಡು ಮೋಸ ಮಾಡುತ್ತಿದ್ದ. ಇದ್ಯಾವುದೂ ನನ್ನ ಅರಿವಿಗೆ ಬರಲಿಲ್ಲ ಎಂದಿದ್ದಾರೆ. ಸದ್ಯ ಮಹಾಲಕ್ಷ್ಮಿ ಅವರು ಮಾನಸಿಕ ಆಘಾತಕ್ಕೆ ಒಳಗಾಗಿದ್ದು, ಒತ್ತಡದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.