Friday, March 21, 2025
spot_imgspot_img
spot_imgspot_img

5 ವರ್ಷಗಳ ಬಳಿಕ ರೆಪೊ ದರ ಕಡಿತ ಮಾಡಿದ ಆರ್‌ಬಿಐ..!

- Advertisement -
- Advertisement -

ನವದೆಹಲಿ: ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ ಮಹತ್ವದ ಕ್ರಮಕೈಗೊಂಡಿದೆ. ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಬಡ್ಡಿ ದರಗಳನ್ನು ಕಡಿತ ಮಾಡಿದೆ.

RBI ಹಣಕಾಸು ನೀತಿ ಸಮಿತಿ ಪ್ರಮುಖ ದರವನ್ನು 6.50% ರಿಂದ 6.25% ಕ್ಕೆ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

ಮೂವರು ಆರ್‌ಬಿಐ ಸದಸ್ಯರು ಮತ್ತು ಮೂವರು ಬಾಹ್ಯ ಸದಸ್ಯರನ್ನು ಒಳಗೊಂಡಿರುವ ಎಂಪಿಸಿ, 2020ರ ಮೇ ತಿಂಗಳಲ್ಲಿ ಕೊನೆಯದಾಗಿ ರೆಪೊ ದರವನ್ನು ಕಡಿಮೆ ಮಾಡಿತ್ತು. ಅದಾದ ಬಳಿಕ ನಡೆದ 11 ನೀತಿ ಸಭೆಗಳಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ತಂದಿರಲಿಲ್ಲ.

ಚಿಲ್ಲರೆ ಹಣದುಬ್ಬರವು ಶೇ.6 ರೊಳಗೆ ಇದೆ. ಹೀಗಾಗಿ, ಆರ್‌ಬಿಐ ದರ ಕಡಿತದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು.

ಈ ಮಾರ್ಚ್‌ನಲ್ಲಿ ಕೊನೆಗೊಳ್ಳುವ ಹಣಕಾಸು ವರ್ಷದ ನೈಜ ಜಿಡಿಪಿ ಬೆಳವಣಿಗೆ 6.4% ಎಂದು ಅಂದಾಜಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಮುಂಬರುವ ಹಣಕಾಸು ವರ್ಷದಲ್ಲಿ ನಿರೀಕ್ಷಿತ ನೈಜ ಬೆಳವಣಿಗೆ ಮೊದಲ ತ್ರೈಮಾಸಿಕದಲ್ಲಿ 6.7%, ಎರಡನೇ ತ್ರೈಮಾಸಿಕದಲ್ಲಿ 7%, ಮೂರನೇ ತ್ರೈಮಾಸಿಕದಲ್ಲಿ 6.5% ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 6.5% ಎಂದು ಅವರು ಅಂದಾಜಿಸಿದ್ದಾರೆ.

- Advertisement -

Related news

error: Content is protected !!