Sunday, June 29, 2025
spot_imgspot_img
spot_imgspot_img

ರಸ್ತೆಯಲ್ಲಿ ನದಿಯಂತೆ ಹರಿದ ರೆಡ್​ವೈನ್; ವಿಡಿಯೋ ವೈರಲ್..!!

- Advertisement -
- Advertisement -
vtv vitla

ಪೋರ್ಚುಗಲ್‌ನ ಸಣ್ಣ ಪಟ್ಟಣವಾದ ಸಾವೊ ಲೊರೆಂಕೊ ಡಿ ಬೈರೊದಲ್ಲಿನ ಬೀದಿಗಳಲ್ಲಿ ಕೆಂಪು ವೈನ್ ನದಿಯಂತೆ ಹರಿಯುತ್ತಿರುವುದು ಕಂಡುಬಂದಿದೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಇದರ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.

ನ್ಯೂಯಾರ್ಕ್ ಪೋಸ್ಟ್‌ನಲ್ಲಿನ ವರದಿಯ ಪ್ರಕಾರ, 600,000 ಗ್ಯಾಲನ್​ಗಳಷ್ಟು ಅಂದರೆ 2.2 ಮಿಲಿಯ್ ಲೀಟರ್​ನಷ್ಟು ಮದ್ಯವನ್ನು ಹೊತ್ತೊಯ್ಯುವ ಸ್ಥಳೀಯ ವೈನ್ ತಯಾರಕರಾದ ಲೆವಿರಾ ಡಿಸ್ಟಿಲರಿ ಒಡೆತನದ ಎರಡು ಟ್ಯಾಂಕ್‌ಗಳು ಇದ್ದಕ್ಕಿದ್ದಂತೆ ಕುಸಿದು ಬಿದ್ದ ಪರಿಣಾಮ ವೈನ್ ಬೀದಿಗಳಲ್ಲಿ ನದಿಯಂತೆ ಹರಿದಿದೆ

ಈ ಘಟನೆ ಸೋ ಲೊರೆಂಕೊ ಡಿ ಬೈರೊ ಎಂಬ ಪುಟ್ಟ ಪಟ್ಟಣದಲ್ಲಿ ಬೀದಿಯಲ್ಲಿ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಲಂಪಿಕ್ ಈಜುಕೊಳವನ್ನು ತುಂಬುವಷ್ಟು ವೈನ್ ಬೀದಿಗಳಲ್ಲಿ ಹರಿಯುತ್ತಿದ್ದಂತೆ ಸ್ಥಳೀಯರು ಆಶ್ಚರ್ಯಕ್ಕೊಳಗಾದರು. ರಸ್ತೆಯಲ್ಲಿ ಹರಿದಾಡಿದ ವೈನ್‌ ಸೆರ್ಟಿಮಾ ನದಿಯನ್ನು ಸೇರಿ ನದಿ ವೈನ್ ಆಗಿ ಪರಿವರ್ತನೆಗೊಳ್ಳುವ ಮೊದಲು ನಿಲ್ಲಿಸಲು ಅಧಿಕಾರಿಗಳು ಹಠಾತ್ತನೆ ಕಾರ್ಯಪ್ರವೃತ್ತರಾದರು.

ಈ ಘಟನೆಗಾಗಿ ಲೆವಿರಾ ಡಿಸ್ಟಿಲರಿ ಜನರ ಕ್ಷಮೆಯಾಚಿಸಿದೆ. ನಾವು ಈ ಪ್ರದೇಶವನ್ನು ಸ್ವಚ್ಛಗೊಳಿಸುವ , ಹಾನಿಯನ್ನು ಸರಿಪಡಿಸುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಲೆವಿರಾ ತಿಳಿಸಿದೆ.

- Advertisement -

Related news

error: Content is protected !!