Sunday, June 29, 2025
spot_imgspot_img
spot_imgspot_img

ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್​ ಸಹಚರ ಅನು ಬಂಧನದ ಬಳಿಕ ಮನನೊಂದ ತಂದೆ ಹೃದಯಾಘಾತದಿಂದ ಸಾವು!

- Advertisement -
- Advertisement -

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಅನು ಅಲಿಯಾಸ್​ ಅನುಕುಮಾರ್​ ಮನೆಯಲ್ಲಿ ಇನ್ನೊಂದು ದುರಂತ ನಡೆದಿದೆ. ಮಗನ ಬಂಧನದ ಬಳಿಕ ಚಿಂತೆಗೆ ಒಳಗಾಗಿದ್ದ ಅನುಕುಮಾರ್​ ತಂದೆ ಚಂದ್ರಣ್ಣ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ

ದರ್ಶನ್‌ ಮತ್ತು ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ A6, A7 ಆರೋಪಿಗಳನ್ನು ಚಿತ್ರದುರ್ಗ ಡಿವೈಎಸ್ಪಿ , ಕಾಮಾಕ್ಷಿಪಾಳ್ಯ ಪೊಲೀಸರ ನೇತೃತ್ವದಲ್ಲಿ ಶುಕ್ರವಾರ ಬಂಧಿಸಲಾಯಿತು. A7 ಆರೋಪಿ ಬಂಧನದ ಬೆನ್ನಲ್ಲೇ ಆತನ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹೃದಯ ವಿದ್ರಾವಕ ಘಟನೆ ನಡೆದಿದೆ.

ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಸಂಜಯ್ ಗೌಡ್ ನೇತೃತ್ವದಲ್ಲಿ ಎ6 ಆರೋಪಿ ಜಗ್ಗ ಅಲಿಯಾಸ್ ಜಗಧೀಶ್, ಎ7 ಆರೋಪಿ ಅನಿ ಅಲಿಯಾಸ್ ಅನುಕುಮಾರ್ ಇಬ್ಬರನ್ನೂ ಬಂಧಿಸಿ ಬೆಂಗಳೂರಿಗೆ ಕರೆದೊಯ್ದರು.

ಬಂಧನದ ಬೆನ್ನಲ್ಲೇ ಆರೋಪಿ ಅನುಕುಮಾರ್‌ ತಂದೆ ಚಂದ್ರಣ್ಣ (60) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಗನ ಬಂಧನದಿಂದ ಮನನೊಂದ ತಂದೆ ಚಿತ್ರದುರ್ಗದ ಸಿಹಿ ನೀರು ಹೊಂಡ ಬಳಿಯ ಮನೆಯಲ್ಲಿ ಸಾವಿಗೀಡಾಗಿದ್ದಾರೆ.

- Advertisement -

Related news

error: Content is protected !!