Saturday, June 28, 2025
spot_imgspot_img
spot_imgspot_img

ಮಣಿಪಾಲ : ಶಾಲಾಮಕ್ಕಳನ್ನು ಕೊಂಡೊಯ್ಯುತ್ತಿದ್ದ ರಿಕ್ಷಾ ಪಲ್ಟಿ : ಮೂವರಿಗೆ ಗಾಯ

- Advertisement -
- Advertisement -

ಮಣಿಪಾಲ : ಶಾಲಾ ಮಕ್ಕಳನ್ನು ಕೊಂಡೊಯ್ಯುತ್ತಿದ್ದ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಕೆಳ ಪರ್ಕಳದ ಈಶ್ವರ ನಗರದ ನಗರಸಭೆಯ ಪಂಪ್ ಹೌಸ್ ಬಳಿ ಇಂದು ಸಂಜೆ ನಡೆದಿದೆ.

ಘಟನೆಯಲ್ಲಿ ಮೂವರು ವಿಧ್ಯಾರ್ಥಿಗಳಿಗೆ ಗಾಯಗಳಾಗಿದೆ. ಶಾಲೆಯ ಮಕ್ಕಳನ್ನು ಸಂಜೆ ಮನೆಗೆ ಕರೆ ತರುತ್ತಿದ್ದ ವೇಳೆ ಮಣಿಪಾಲದಿಂದ ಪರ್ಕಳದ ಕಡೆ ಹೋಗುತ್ತಿದ್ದ ರಿಕ್ಷಾ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ ಎಂದು ತಿಳಿದುಬಂದಿದೆ. ಇದರಿಂದ ರಿಕ್ಷಾದಲ್ಲಿದ್ದ ಮೂವರು ಮಕ್ಕಳಿಗೆ ಗಾಯಗಳಾಗಿದೆ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!