ವಿಟ್ಲ: ವಿಟ್ಲ-ಪುತ್ತೂರು ರಸ್ತೆಯ ಎಂಪೈರ್ ಮಾಲ್ ನಲ್ಲಿ ಆರ್.ಜೆ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮತ್ತು ಫ್ಯಾಶನ್ ವರ್ಲ್ಡ್ ರೆಡಿಮೆಡ್ಸ್ ಆ್ಯಂಡ್ ಟೆಕ್ಸ್ ಟೈಲ್ಸ್ ಶೊ ರೂಂ ಇಂದು ಶುಭಾರಂಭಗೊಂಡಿತು.
ಅಲ್ ಹಾಜ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್, ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ವಿಟ್ಲ ಶೋಕಾಮಾತೆಯ ಇಗರ್ಜಿಯ ಧರ್ಮಗುರು ಐವನ್ ಮಿಚಲ್ ರೋಡ್ರಿಗಸ್ ಅವರು ಜತೆಯಾಗಿ ಎರಡು ಸಂಸ್ಥೆಯನ್ನು ಉದ್ಘಾಟಿಸಿದರು.
ಅಲ್ ಹಾಜ್ ಕೆ.ಎಸ್ ಆಟ್ಟಕೋಯ ತಂಙಳ್ ಕುಂಬೋಳ್ ದುವಾಃ ಆಶೀರ್ವಚನ ನೀಡಿ, ಬಳಿಕ ಮಾತನಾಡಿ ಆಭರಣಗಳಿಗೆ ಯಾವುದೇ ಜಾತಿ ಇಲ್ಲ. ಎಲ್ಲಾ ಧರ್ಮದವರಿಗೂ ಚಿನ್ನಾಭರಣ ಅಗತ್ಯವಾಗಿದೆ. ಈ ಸಂಸ್ಥೆಯನ್ನು ಉದ್ಘಾಟಿಸಲು ಸರ್ವ ಧರ್ಮದವರನ್ನು ಆಹ್ವಾನಿಸಿರುವುದು ಶ್ಲಾಘನೀಯ ಎಂದರು.
ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ ಪ್ರತಿಯೊಬ್ಬರು ಪರಸ್ಪರ ಅರಿತು ಬಾಳಿದರೆ ಜೀವನ ಬಂಗಾರವಾಗುತ್ತದೆ. ಪ್ರತಿಯೊಬ್ಬರು ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ವ್ಯವಹಾರ ಯಶಸ್ವಿಯಾಗಬೇಕಾದರೆ ಗ್ರಾಹಕರಿಗೆ ಪ್ರಮಾಣಿಕ ಸೇವೆ ನೀಡಬೇಕು ಎಂದರು.
ವಿಟ್ಲ ಶೋಕಾಮಾತೆಯ ಇಗರ್ಜಿಯ ಧರ್ಮಗುರು ಐವನ್ ಮಿಚಲ್ ರೋಡ್ರಿಗಸ್ ಮಾತನಾಡಿ ಸರ್ವಧರ್ಮದಲ್ಲಿ ಮಾನವೀಯತೆ ಇದೆ. ಎಲ್ಲರನ್ನೂ ಒಗ್ಗೂಡಿಸುವುದು. ಗೌರವಿಸುವುದು. ಮಾನವೀಯ ಸೇವೆಯಾಗಿದೆ ಎಂದರು.
ಉದ್ಯಮಿಗಳಾದ ರಝಾಕ್ ಸುಳ್ಯ, ಸುಲೈಮಾನ್ ಹಾಜಿ ನಾರ್ಶ, ಎಂಪೈರ್ ಮಾಲ್ ನ ಮಾಲಕ ಪೀಟರ್ ಲಸ್ರೋದೊ, ಮುಬೀನ್, ಬಂಟ್ವಾಳ ಜಂಇಯ್ಯತುಲ್ ಫಲಾಹ್ ಅಧ್ಯಕ್ಷ ರಶೀದ್ ವಿಟ್ಲ, ಸಾಮಾಜಿಕ ಮುಖಂಡ ಶಾಕೀರ್ ಅಳಕೆಮಜಲು, ಉಬೈದ್ ವಿಟ್ಲ ಬಝಾರ್, ಅಬ್ದುಲ್ಲ ಹಾಜಿ ಸ್ಟೈಲ್ ಪಾರ್ಕ್, ಇಕ್ಬಾಲ್ ಶೀತಲ್, ಅಬೂಬಕ್ಕರ್ ಅನಿಲಕಟ್ಟೆ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.
ಆರ್.ಜೆ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮತ್ತು ಫ್ಯಾಶನ್ ವರ್ಲ್ಡ್ ರೆಡಿಮೆಡ್ಸ್ ಆ್ಯಂಡ್ ಟೆಕ್ಸ್ ಟೈಲ್ಸ್ ಶೊ ರೂಂ ಸಂಸ್ಥೆಯ ಪಾಲುದಾರರಾದ
ತಾನಾಜಿ, ಅಬ್ದುಲ್ ಮುತ್ತಲಿಬ್ ನಾರ್ಶ, ಮಹಮ್ಮದ್ ಇಕ್ಬಾಲ್ ಸಿಂಗಾರಿ, ಅಶ್ರಪ್ ನಾರ್ಶ ಉಪಸ್ಥಿತರಿದ್ದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.
ವಿಟ್ಲದ ಎಂಪೈರ್ ಮಾಲ್ ನಲ್ಲಿ 20 ವರ್ಷಗಳಿಂದ ರಾಜಧಾನಿ ಜುವೆಲ್ಲರ್ಸ್ ಕಾರ್ಯಾಚರಿಸುತ್ತಾ ಬಂದಿದ್ದು, ಹಳೆ ಬೇರು ಹೊಸ ಹೆಸರೊಂದಿಗೆ ಆರ್.ಜೆ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಹೆಸರಿನೊಂದಿಗೆ ಹೊಸ ವಿನ್ಯಾಸ, ಹೊಸ ನಾಮಕರಣದೊಂದಿಗೆ ಜನರ ಮುಂದೆ ಬಂದಿದೆ. ಕಳೆದ ಹಲವಾರು ವರ್ಷಗಳಿಂದ ಚಿನ್ನದ ವ್ಯಾಪಾರದಲ್ಲಿ ಮೇಲುಗೈ ಸಾಧಿಸಿದ್ದ ರಾಜಧಾನಿ ಜುವೆಲ್ಲರಿ ಇದೀಗ ಇನ್ನಷ್ಟು ಪ್ರಗತಿ ಸಾಧಿಸಿ, ಹೊಚ್ಚ ಹೊಸ ಶೊ ರೂಮ್ ನೊಂದಿಗೆ ಶುಬಾರಂಭಗೊಂಡಿದೆ.
ವಿಟ್ಲದಲ್ಲಿ ಕಳೆದ 13 ವರ್ಷಗಳಿಂದ ಬಟ್ಟೆ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದ ಫ್ಯಾಶನ್ ವರ್ಲ್ಡ್ ರೆಡಿಮೆಡ್ಸ್ ಆ್ಯಂಡ್ ಟೆಕ್ಸ್ ಟೈಲ್ಸ್ ಹವಾನಿಯಂತ್ರಿತ ಶೊ ರೂಂ ವಿನೂತನ ಕಲೆಕ್ಷನ್ ನೊಂದಿಗೆ ನವೀಕರಣಗೊಂಡು ಉದ್ಘಾಟನೆಗೊಂಡಿದ್ದು, ಇಲ್ಲಿ ಮಹಿಳೆಯರ, ಪುರುಷರ, ಮಕ್ಕಳ ಉಡುಪುಗಳು ಉತ್ತಮ ಗುಣಮಟ್ಟದ ಸಂಗ್ರಹ ಇಲ್ಲಿದೆ. ಸೂರತ್, ಅಹಮದಾಬಾದ್, ಮುಂಬೈ, ಡೆಲ್ಲಿ, ಕಲ್ಕತ್ತಾ, ಜಯಪುರದ ಪ್ರಸಿದ್ಧ ಡಿಸೈನರ್ ಗಳಿಂದ ತಯಾರಿಸಿದ ಸರಾರ, ಪೆನ್ಸಿಲ್ ಪ್ಯಾಂಟ್, ಪ್ಲಾಝೊ, ಲೆಹಂಗ, ಗೌನ್ಸ್, ಪ್ಯಾಂಟ್ ಶರ್ಟ್, ಜೀನ್ಸ್, ಕುರ್ತಿಸ್ ಗಳ ಅಪೂರ್ವ ವಿಶೇಷ ಸಂಗ್ರಹ ಇಲ್ಲಿದೆ.
ಉದ್ಘಾಟನೆ ಪ್ರಯುಕ್ತ ಆರ್ ಜೆ ಗೋಲ್ಡ್ ಮತ್ತು ಡೈಮಂಡ್ಸ್ ನಲ್ಲಿ ಮೇಕಿಂಗ್ ಚಾರ್ಜ್ ಶೇ.50 ಆಫರ್, ವಿವಾಹ ಖರೀದಿ ಗ್ರಾಹಕರಿಗೆ 30 ದಿನದ ವರೆಗೆ ಗೋಲ್ಡ್ ಕಾಯಿನ್ ಉಚಿತ, ಏಳು ದಿನ SCRATCH ಮೂಲಕ ಗಿಪ್ಟ್ ಬಾಕ್ಸ್ ಗೆಲ್ಲುವ ಅವಕಾಶ ಇದೆ.