- Advertisement -
- Advertisement -
ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಟ್ಲ ಕಸಬಾ ಗ್ರಾಮದ ಒಕ್ಕೆತ್ತೂರು-ಕೊಡಂಗೆ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿದೆ.
ಒಕ್ಕೆತ್ತೂರಿನಿಂದ ಊರ್ದಂಗಡಿ, ಸುರುಂಬಡ್ಕ, ಕೊಡಂಗೆ ಮೊದಲಾದ ಕಡೆಗಳಿಗೆ ಸಂಪರ್ಕ ಕಲ್ಪಿಸುತ್ತದೆ. ರಸ್ತೆ ಬದಿಯಲ್ಲಿ ಸಮರ್ಪಕವಾಗಿ ನೀರು ಹರಿಯಲು ಚರಂಡಿ ಇಲ್ಲ. ಚರಂಡಿಯಲ್ಲಿ ಕಸ ತುಂಬಿದ್ದರಿಂದ ನೀರು ಹಾದುಹೋಗುತ್ತಿಲ್ಲ.

ಇದರಿಂದ ರಸ್ತೆಯಲ್ಲಿಯೇ ನೀರು ಹರಿಯುತ್ತಿದೆ. ಜೋರಾಗಿ ಮಳೆ ಬಂದಾಗ ರಸ್ತೆ ಹೊಳೆಯಾಗಿ ಮಾರ್ಪಾಡುತ್ತದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ರಸ್ತೆಯಲ್ಲಿ ಪ್ರತಿನಿತ್ಯ ನೂರಾರು ಮಂದಿ ಸಂಚಾರ ಮಾಡುತ್ತಿದ್ದಾರೆ. ನೀರು ತುಂಬಿದ್ದರಿಂದ ನಡೆದುಕೊಂಡು ಬಿಡಿ, ವಾಹನದಲ್ಲಿ ಸಂಚಾರ ಮಾಡಲು ಹರಸಾಹಸ ಪಡುವಂತಾಗಿದೆ.


- Advertisement -