Tuesday, July 8, 2025
spot_imgspot_img
spot_imgspot_img

ಒಡಿಶಾದ ಇತಿಹಾಸದಲ್ಲೆ ಅತಿ ದೊಡ್ಡ ದರೋಡೆ!!

- Advertisement -
- Advertisement -

ಒಡಿಶಾ: ಕಟಕ್ ಪಟ್ಟಣದ ಐಐಎಫ್‌ಎಲ್ ಫಿನಾನ್ಷಿಯಲ್ ಲಿಮಿಟೆಡ್ ಬ್ಯಾಂಕೇತರ ಹಣಕಾಸು ಸಂಸ್ಥೆಯಿಂದ ಹತ್ತೇ ನಿಮಿಷದಲ್ಲಿ 12ಕೋಟಿ ಮೌಲ್ಯದ ಚಿನ್ನ ಹಾಗೂ ಹಣ ದರೋಡೆ ಮಾಡಲಾಗಿದೆ.
ಇದು ಒಡಿಶಾದ ಇತಿಹಾಸದಲ್ಲೆ ನಡೆದ ಅತಿ ದೊಡ್ಡ ದರೋಡೆ ಪ್ರಕರಣ ಎನಿಸಿಕೊಂಡಿದೆ.

ನಾಲ್ವರು ಸಶಸ್ತ್ರಧಾರಿಗಳು ಹೆಲ್ಮೆಟ್ ಧರಿಸಿ ಐಐಎಫ್ ಎಲ್ ಫಿನಾನ್ಷಿಯಲ್ ಲಿಮಿಟೆಡ್‌ನ ನಾಯಸರಕ್ ಶಾಖೆ ಮೇಲೆ ದಾಳಿ ನಡೆಸಿದ್ದಾರೆ. ಶಾಖೆಯ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಹೆದರಿಸುವ ಮೂಲಕ ಶಾಖೆಯೊಳಗೆ ನುಗ್ಗಿದ್ದಾರೆ.


ಹಿಂದಿ ಹಾಗೂ ಒಡಿಸ್ಸಿ ಭಾಷೆಯಲ್ಲಿ ಮಾತನಾಡುತ್ತಿದ್ದ ಆರೋಪಿಗಳು ಸಂಸ್ಥೆಯ ಮ್ಯಾನೇಜರ್ ಅನ್ನೂ ಒಳಗೊಂಡಂತೆ ಇನ್ನುಳಿದ ಸಿಬ್ಬಂದಿಯನ್ನು ಸುತ್ತುವರೆದು, ಬಳಿಕ ಅವರಿಂದ ಲಾಕರ್ ಕೀ ಕಿತ್ತುಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಒಂದೆರಡು ಚಿನ್ನದ ಪೊಟ್ಟಣ ಹೊರತುಪಡಿಸಿ ಸುಮಾರು 12 ಕೋಟಿ ಮೌಲ್ಯದ ಚಿನ್ನ ಹಾಗೂ ಹಣ ದರೋಡೆ ಮಾಡಿದ್ದಾರೆ. ಇವರು ದರೋಡೆ ಮಾಡುತ್ತಿರುವ ಸಮಯದಲ್ಲಿ ಶಾಖೆಯ ಸಿಸಿಟಿವಿ ಕಾರ್ಯನಿರ್ವಹಿಸುತ್ತಿರಲಿಲ್ಲ ಎಂದು IIFL ಶಾಖೆ ಕಾರ್ಯನಿರ್ವಾಹಕ ಸತ್ಯ ಪ್ರಧಾನ್ ಮಾಹಿತಿ ನೀಡಿದ್ದಾರೆ.
ದರೋಡೆಕೋರರನ್ನು ಪತ್ತೆ ಹಚ್ಚಲು ಪೊಲೀಸರು ವಿಶೇಷ ತಂಡ ರಚಿಸಿದ್ದು, ನಗರದ ಗಡಿಭಾಗವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.

- Advertisement -

Related news

error: Content is protected !!