ನವದೆಹಲಿ: ಮಹಿಳೆಯರು, ತನ್ನ ಗಂಡನ ಆದಾಯ ಎಷ್ಟಿದೆ ಎಂದು ತಿಳಿದುಕೊಳ್ಳಲು (ಮಾಹಿತಿ ಹಕ್ಕು ಕಾಯ್ದೆ) ಅಡಿ ಅರ್ಜಿ ಹಾಕಿ ಮಾಹಿತಿ ಪಡೆಯಬಹುದು ಅಂತ ಸಿಐಸಿ(Central Information Commission) ತಿಳಿಸಿದೆ. ಈ ಮೂಲಕ ಹೆಂಡತಿಗೆ ತನ್ನ ಗಂಡನ ಆದಾಯದ ಬಗ್ಗೆ ತಿಳಿದುಕೊಳ್ಳುವ ಹಕ್ಕಿದೆ ಎಂಬುದನ್ನ ಎತ್ತಿಹಿಡಿದಿದೆ.

ಜೋಧ್ಪುರದ ರಹ್ಮದ್ ಬಾನೋ ಎಂಬ ಮಹಿಳೆ ತನ್ನ ಗಂಡದ ಒಟ್ಟು ಆದಾಯ ಹಾಗೂ ತೆರಿಗೆ ವಿಧಿಸಬಹುದಾದ ಆದಾಯ ಎಷ್ಟಿದೆ ಎಂದು ತಿಳಿಸಲು ಕೋರಿ ಆದಾಯ ತೆರಿಗೆ ಇಲಾಖೆಗೆ ಮನವಿ ಸಲ್ಲಿಸಿದ್ದರು. ಆದ್ರೆ ಐಟಿ ಇಲಾಖೆ, ನೀವು ಬಯಸಿರುವ ಮಾಹಿತಿ ಮೂರನೇ ವ್ಯಕ್ತಿ(ಥರ್ಡ್ ಪಾರ್ಟಿ)ಗೆ ಸೇರಿದ್ದಾಗಿದ್ದು, ಆರ್ಟಿಐ ಅಡಿ ಇಂಥ ಮಾಹಿತಿ ನೀಡಲಾಗುವುದಿಲ್ಲ ಎಂದು ಹೇಳಿದೆ ಅಂತ ರಹ್ಮದ್ ಬಾನೋ ತಿಳಿಸಿದ್ದಾರೆ.

ಹೀಗಾಗಿ ಬಾನೋ ಈ ಕುರಿತು ಸಿಐಸಿಗೆ ಮೇಲ್ಮನವಿ ಸಲ್ಲಿಸಿದ್ದರು.ಬಾನೋ ಅವರ ಅರ್ಜಿಯನ್ನ ಪರಿಗಣಿಸಿದ ಸಿಐಸಿ, ಆದಾಯ ತೆರಿಗೆ ಇಲಾಖೆಯ, ‘ಥರ್ಡ್ ಪಾರ್ಟಿ’ ವಾದವನ್ನ ಹಾಗೂ RTI ಅಡಿ ಈ ಮಾಹಿತಿ ನೀಡಲಾಗುವುದಿಲ್ಲ ಎಂಬುದನ್ನ ತಳ್ಳಿಹಾಕಿದೆ. ಮಹಿಳೆ ಕೇಳಿರುವ ಮಾಹಿತಿಯನ್ನ 15 ದಿನಗಳ ಒಳಗಾಗಿ ನೀಡುವಂತೆ ಜೋಧ್ಪುರದ ಐಟಿ ಇಲಾಖೆಗೆ ಸಿಐಸಿ ನಿರ್ದೇಶಿಸಿದೆ.

