- Advertisement -
- Advertisement -
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಕೊರೊನಾ ನಿಯಂತ್ರಿಸಲು ಬಿಬಿಎಂಪಿ ಹಾಗೂ ಸರ್ಕಾರ ಹರಸಾಹಸಪಡುತ್ತಿದೆ. ಮಾಸ್ಕ್, ಸಾಮಾಜಿಕ ಅಂತರ ಕಾಯ್ದುಕೊಳ್ಳದವರಿಗೆ ಸರ್ಕಾರ ದಂಡ ವಿಧಿಸುತ್ತಿದೆ. ಆದ್ರೂ ಕೂಡ ಕೆಲವರು ನಿಯಮ ಪಾಲಿಸುತ್ತಿಲ್ಲ. ಹೀಗಾಗಿ ಅಂತವರಿಗೆ ದಂಡ ವಿಧಿಸುವುದರ ಮೂಲಕ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಇಲ್ಲಿಯವರೆಗೆ ಕೊರೊನಾ ನಿಯಮ ಉಲ್ಲಂಘಿಸಿದವರ ವಿರುದ್ಧ 1.5 ಕೋಟಿ ರೂ. ದಂಡ ವಸೂಲಿ ಮಾಡಿದೆ.
ಬಿಬಿಎಂಪಿ ಮಾರ್ಷಲ್ ಗಳು ನಗರದಲ್ಲಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ಇರುವುವರಿಂದ ದಂಡ ವಸೂಲಿ ಮಾಡುತ್ತಿದ್ದಾರೆ. ಅಚ್ಚರಿಯೆಂದ್ರೆ ಇಲ್ಲಿಯವರೆಗೆ ಮಾಸ್ಕ್ ಧರಿಸದೇ ಇರುವ ವ್ಯಕ್ತಿಗಳಿಂದ 1,31,86,404 ರೂ. ದಂಡ ವಸೂಲಿ ಮಾಡಲಾಗಿದೆ. ದೈಹಿಕ ಅಂತರ ಪಾಲಿಸದೇ ಇರುವವರಿಂದ 18,33,049 ರೂ. ದಂಡ ವಸೂಲಿ ಮಾಡಲಾಗಿದೆ.
- Advertisement -