

ರಷ್ಯಾ ಹಾಗೂ ಉಕ್ರೇನ್ ನಡುವಿನ ಉದ್ವಿಗ್ನ ಪರಿಸ್ಥಿತಿ ಈಗ ಬಿಗಿಗೊಂಡಿದೆ. ರಷ್ಯಾ ಅಧ್ಯಕ್ಷ ಪುಟಿನ್ ಬೆಳ್ಳಂಬೆಳಗ್ಗೆ ಮುಂಜಾನೆ ಆರು ಗಂಟೆಗೆ ಉಕ್ರೇನ್ ವಿರುದ್ಧ ಮಿಲಿಟರಿ ಆಪರೇಷನ್ ಘೋಷಿಸಿದ್ದಾರೆ. ಈ ನಡುವೆ ಈ ವಿಚಾರವಾಗಿ ಯಾವುದೇ ಯಾವುದೇ ರಾಷ್ಟ್ರಗಳು ಮೂಗು ತೂರಿಸದಂತೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ.
ಪೂರ್ವ ಉಕ್ರೇನ್‌ನಲ್ಲಿ ರಷ್ಯಾ ಮಿಲಿಟರಿ ಕಾರ್ಯಾಚರಣೆ ನಡೆಸಲಿದೆ ಎಂದು ವ್ಲಾಡಿಮಿರ್ ಪುಟಿನ್ ಬೆಳಗ್ಗೆ ಆರು ಗಂಟೆಗೆ ಘೋಷಿಸಿದ್ದಾರೆ. ರಷ್ಯಾದ ಈ ಇತ್ತೀಚಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡುವ ಯಾವುದೇ ವಿದೇಶ ರಾಷ್ಟ್ರಗಳ ಪ್ರಯತ್ನ ಅವರು ಎಂದೂ ನೋಡಿರದ ತೀವ್ರ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಪುಟಿನ್ ಎಚ್ಚರಿಸಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.

ಕೆಲವೇ ಗಂಟೆಗಳಲ್ಲಿ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡಲಿದೆ ಎಂಬ US ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಹೇಳಿಕೆಯ ಬೆನ್ನಲ್ಲೇ ಈ ಆಕ್ರಮಣದ ಘೋಷಣೆಯಾಗಿದೆ. ಉಕ್ರೇನಿಯನ್ ಆಕ್ರಮಣವನ್ನು ಹಿಮ್ಮೆಟ್ಟಿಸಲು ಪ್ರತ್ಯೇಕತಾವಾದಿಗಳು ಕ್ರೆಮ್ಲಿನ್‌ಗೆ ಸಹಾಯವನ್ನು ಕೇಳಿದ್ದಾರೆ ಎಂದು ರಷ್ಯಾ ಈ ಹಿಂದೆ ಹೇಳಿತ್ತು.
ಇಷ್ಟು ದಿನಗಳ ತನಕ ರಷ್ಯಾ-ಉಕ್ರೇನ್ ಗಡಿಗಳಲ್ಲಿ ರಷ್ಯಾದ ಮಿಲಿಟರಿಗಳ ದೊಡ್ಡ ನಿಯೋಜನೆಯನ್ನು ಮಾಡಿತ್ತು. ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಎರಡು ಪ್ರತ್ಯೇಕತಾವಾದಿ ಪ್ರದೇಶಗಳನ್ನು ಸ್ವತಂತ್ರವೆಂದು ಗುರುತಿಸಿದ ನಂತರ ಉಕ್ರೇನ್‌ನ ಪೂರ್ವದಲ್ಲಿ ಶೆಲ್ ದಾಳಿ ತೀವ್ರಗೊಂಡಿತ್ತು.

