ಮೊದಲ ಆಟೋ ಗ್ಯಾಸ್ ಚಾಲಕರಿಗೆ ವಿಶೇಷ ಬಹುಮಾನ.. ಏನದು ಅನ್ನೋದು ಕ್ಯೂರಿಯಾಸಿಟಿ ನಿಮಗಿದ್ಯಾ.. ಹಾಗಾದ್ರೆ ಬನ್ನಿ ಇದೇ ಸೆ. 8 ನೇ ಶುಕ್ರವಾರದಂದು..


ಭಾರತಕ್ಕೆ ಅತೀ ಹೆಚ್ಚು ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡುವ ಅತೀ ದೊಡ್ಡ ಕಂಪೆನಿ ಏಜೀಸ್ ಲಾಜಿಸ್ಟಿಕ್ ಲಿಮಿಟೆಡ್. ಕೇಂದ್ರ ಸರಕಾರ ಸ್ವಾಮ್ಯದ ಅತೀ ದೊಡ್ಡ ಪೆಟ್ರೋಲಿಯಂ ಪ್ರಾಡಕ್ಟ್ ಕಂಪೆನಿಗಳಲ್ಲಿ ಅತೀ ಹೆಚ್ಚು ದಾಸ್ತಾನು ಹೊಂದಿರುವ ಸಾಮರ್ಥ್ಯ ಉಳ್ಳ ಏಜೀಸ್ ಲಾಜಿಸ್ಟಿಕ್ ಲಿಮಿಟೆಡ್ ಕಂಪೆನಿ ಇದು ರಷ್ಯಾನ್ ಮೂಲದ ಒಂದು ಅತೀ ದೊಡ್ಡ ಕಂಪೆನಿಯಾಗಿದೆ.
ಇದೀಗ ವಿಟ್ಲದ ಗ್ರಾಹಕರಿಗೆ ತಮ್ಮ ಸೇವೆಯನ್ನು ನೀಡಲು ಸಜ್ಜಾಗಿ ನಿಂತಿದೆ ಸಾಯಿಗಣೇಶ್ ಆಟೋ ಗ್ಯಾಸ್ AEGIS LOGISTICS ltd.
ವಿಟ್ಲ ಮಂಗಳೂರು ಪ್ರಮುಖ ರಸ್ತೆಯ ಬೊಬ್ಬೆಕೇರಿಯಲ್ಲಿ ನೂತನವಾಗಿ ಪ್ರಾರಂಭಿಸುವ ಸಾಯಿಗಣೇಶ್ ಆಟೋ ಗ್ಯಾಸ್ AEGIS LOGISTICS ltd.. ಉದ್ಘಾಟನೆ ಇದೇ ಸೆಪ್ಟೆಂಬರ್ 8ನೇ ಶುಕ್ರವಾರದಂದು ನಡೆಯಲಿದೆ. ಕೆ.ಎಸ್ ಕೃಷ್ಣ ಭಟ್ ಮ್ಯಾನೇಜಿಂಗ್ ಟ್ರಸ್ಟಿ, ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ ಇವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.

ಸುಕೇಶ್ ಕುಟ್ಟಿ, ಜನರಲ್ ಮ್ಯಾನೇಜರ್ AEGIS LOGISTICS ltd. ಇವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಉದ್ಘಾಟನಾ ಸಮಾರಂಭದಲ್ಲಿ ಅರವಿಂದ್ ಕೆ. ಗುಪ್ತ, ಪ್ರಾದೇಶಿಕ ವ್ಯವಸ್ಥಾಪಕರು AEGIS LOGISTICS ltd. ಬೆಂಗಳೂರು, ಎಸ್. ಚಂದ್ರಶೇಖರ ಭಟ್ ಕಾರ್ಯದರ್ಶಿ ಶ್ರೀ ಸತ್ಯಸಾಯಿ ಲೋಕ ಸೇವಾ ಟ್ರಸ್ಟ್ ಅಳಿಕೆ, ನಾಗರಾಜ್ ಹೆಚ್.ಇ ಪೊಲೀಸ್ ಇನ್ಸ್ಪೆಕ್ಟರ್ ಆರಕ್ಷಕ ಠಾಣೆ ವಿಟ್ಲ, ಗೋಪಾಲ ನಾಯ್ಕ ಮುಖ್ಯ ಅಧಿಕಾರಿ ಪಟ್ಟಣ ಪಂಚಾಯತ್ ವಿಟ್ಲ, ಯನ್.ಕೆ ಮಹಾಬಲೇಶ್ವರ ಭಟ್ ಆಡಳಿತ ಮೊಕ್ತೇಸರರು ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನ ಕೋಡಪದವು, ಎಂ.ನಿತ್ಯಾನAದ ನಾಯಕ್ ಉದ್ಯಮಿಗಳು ನಾಯಕ್ಸ್ ಫ್ಯಾಮಿಲಿ ವಿಟ್ಲ, ಮೊಹಮ್ಮದ್ ಇಕ್ಬಾಲ್ ಹಾನೆಶ್ಚ್ ಸಂಚಾಲಕರು, ಹೊರಿಝಾನ್ ಪಬ್ಲಿಕ್ ಸ್ಕೂಲ್ ಮೇಗಿನಪೇಟೆ ವಿಟ್ಲ, ಹರೀಶ್ ಸಿ ಎಚ್ ಸದಸ್ಯರು ಪಟ್ಟಣ ಪಂಚಾಯತ್ ವಿಟ್ಲ, ವಸಂತ್ ಶಿವಾಜಿನಗರ ಅಧ್ಯಕ್ಷರು ಬಿ ಎಂ ಎಸ್ ಅಟೋ ಚಾಲಕ ಮಾಲಕರ ಸಂಘ ವಿಟ್ಲ, ರಮೇಶ್ ಶಿವಾಜಿನಗರ ಅಧ್ಯಕ್ಷರು, ಫೆಡೆರೇಶನ್ ಆಫ್ ಆಟೋ ರಿಕ್ಷಾ ಯೂನಿಯನ್ (C.I.T.U) ವಿಟ್ಲ, ಆರಂಗಳ ಇಸುಫ್ ಕುಳಾಲು, ಹಿರಿಯ ರಿಕ್ಷಾ ಚಾಲಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮೊದಲ ಬಾರಿಗೆ ತಮ್ಮ ಆಟೋಗಳಿಗೆ ಗ್ಯಾಸ್ ತುಂಬಿಸಲು ಬರುವ ಗ್ರಾಹಕರಿಗೆ ಸಮವಸ್ತ್ರ ನೀಡಿ ಗೌರವಿಸಲಾಗುವುದು.