Saturday, April 27, 2024
spot_imgspot_img
spot_imgspot_img

*ಸಹಕಾರಿ ಸಂಸ್ಥೆಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಪ್ರಕರಣ.!!*

- Advertisement -G L Acharya panikkar
- Advertisement -

ಉಡುಪಿ:-ಉಡುಪಿಯ ಸಹಕಾರಿ ಸಂಸ್ಥೆಯಿಂದ ,ನಕಲಿ ಅಧಿಕಾರ ಪತ್ರ ಸೃಷ್ಟಿಸಿ ಕೋಟ್ಯಂತರ ರೂ ಸಾಲ ಪಡೆದ ಕಿಶನ್ ಹೆಗ್ಡೆ ,ಅವರ ಪತ್ನಿ ಪ್ರಸಾದಿನಿ ಶೆಡ್ತಿ ,ಸಿ ಎ ಕುಮಾರ್, ಹಾಗೂ ಬಿ.ಎಲ್.ಚಿದಂಬರಂ ರೆಡ್ಡಿ ವಿರುದ್ಧ ಬೆಂಗಳೂರು ಹೆಬ್ಬಾಳ ಪೊಲೀಸರು ವಂಚನೆ ಪ್ರಕರಣ ದಾಖಲಾಗಿದೆ.

ಆರೋಪಿಗಳು 2005 ಜುಲೈ 11ರಂದು ನಕಲಿ ಅಧಿಕಾರ ಪತ್ರ ಸೃಷ್ಟಿಸಿದ್ದಾರೆ.ಬೆಂಗಳೂರಿನ ದೂರುದಾರರಾದ ಕಿಶೋರ್ ಹೆಗ್ಡೆ , ಹಾಗೂ ಅಮೇರಿಕಾ ದಲ್ಲಿ ನೆಲೆಸಿರುವ ಅವರ ಸಹೋದರ ಕಿರಣ್ ಹೆಗ್ಡೆ ಹಾಗೂ ತಾಯಿ ವಿಶಾಲಾಕ್ಷಿ ಹೆಗ್ಡೆಯ ನಕಲಿ ಸಹಿ ಮಾಡಿ ವಂಚನೆ ಮಾಡಿದ್ದಾರೆ.ಮತ್ತು  ಆರೋಪಿಗಳು ಯಾರು ನಮ್ಮನ್ನು ಬೇಟಿಯಾಗಿಲ್ಲ ಹಾಗೂ ಅವರ ಪರಿಚಯವೂ ಇಲ್ಲ ದೂರುದಾರು ಆರೋಪಿಸಿದ್ದಾರೆ.

ಕಿಶೋರ್ ಹೆಗ್ಡೆ ಅವರ ಅವಿಭಜಿತ ಕುಟುಂಬದ ಆಸ್ತಿಯನ್ನು ಆಧಾರವಾಗಿ ಇಟ್ಟುಕೊಂಡು ಕಿಶನ್ ಹೆಗ್ಡೆ ,ಅವರ ಪತ್ನಿ ಪ್ರಸಾದಿನಿ ಶೆಡ್ತಿ ಉಡುಪಿಯ ಸಹಕಾರಿ ಸಂಸ್ಥೆಗಳಿಂದ ಕೋಟ್ಯಂತರ ರೂ ಸಾಲ ಪಡೆದು ವಂಚಿಸಿದ್ದಾರೆ. ಈ ನಕಲಿ ದಾಖಲೆ ಆಧಾರದಲ್ಲಿ ಸಾಲಿಯಾನ್ ಎಂಬವನಿಗೆ ಆರೋಪಿ ಕಿಶನ್ ಮೂರು ಎಕ್ರೆ ಜಾಗ ಮಾರಾಟ ಮಾಡಿ ಲಕ್ಷಾಂತರ ರೂ ಲಾಭ ಮಾಡಿದ್ದಾರೆ. ಆದರೆ ಕೆಲ ಭಾಗವನ್ನು ಕಿಶನ್ ಹೆಗ್ಡೆ ನಕಲಿ ದಾಖಲೆ ಆಧಾರದಲ್ಲಿ ತನ್ನ ಹೆಂಡತಿಗೆ ವರ್ಗಾಹಿಸಿದ್ದಾರೆ. ಕಿಶನ್ ಹೆಗ್ಡೆ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷ ,ಪ್ರಭಾವಶಾಲಿ ವ್ಯಕ್ತಿ ಯಾಗಿರುವ ಕಾರಣ ತನ್ನ ಕುಟುಂಬಕ್ಕೆ ಭಯವಿದೆ ಎಂದು ದೂರುದಾರ ಕಿಶೋರ್ ಹೆಗ್ಡೆ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಸಾಮಾನ್ಯ ವರ್ಗದವರಿಗೆ 10000 ಸಾಲ ಕೊಡುವಾಗ ಹಿಂದೆ ಮುಂದೆ ನೋಡುತ್ತೇವೆ.. ಆದರೆ ಇಂಥ ವ್ಯಕ್ತಿಗಳಿಗೆ ಕೋಟಿಗಟ್ಟಲೆ ಸಾಲ ನೀಡುವಾಗ ಸಹಕಾರಿ ಸಂಘಗಳು ಯಾರ ಒತ್ತಡಕ್ಕೆ ಮಂಡಿ ಉರುತ್ತದೆ…?ಮತ್ತು ಸಹಕಾರಿ ಸಂಘಗಳ ಇಂತಹ ಅನೇಕ ಎಡವಟ್ಟುಗಳು ಮುಚ್ಚು ಮರೆಯಾಗಿದೆ.ಕಾಂಗ್ರೆಸ್ ಮುಖಂಡ, ಮಾಜಿ ಸಹಕಾರಿ ಕೊಳ್ಕೆ ಬೈಲ್ ಕಿಶನ್ ಹೆಗ್ಡೆ  ಇವರ ವಿರುದ್ಧ ವಂಚನೆ ಪ್ರಕರಣವನ್ನು, ಮುಕ್ಕ ಘಟಕದ “ವಿಶ್ವ ಹಿಂದೂ ಪರಿಷತ್ ಬಜರಂಗದಳ”ದ ಅಧ್ಯಕ್ಷ ಭಾಸ್ಕರ್ ಮುಕ್ಕ ಪ್ರಕರಣ ಖಂಡಿಸಿದ್ದಾರೆ.ಹಾಗೂ ಹೆಚ್ಚಿನ ತನಿಖೆಗೆ ಆಗ್ರಹಿಸಿದ್ದಾರೆ.

- Advertisement -

Related news

error: Content is protected !!