- Advertisement -
- Advertisement -
ಪುತ್ತೂರು: ಸಂಪ್ಯ ಸಮೀಪದ ವಾಗ್ಲೆ ಎಂಬಲ್ಲಿ ಶೆಡ್ ಒಂದರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ಕಸಾಯಿ ಖಾನೆಗೆ ದಾಳಿ ನಡೆಸಿದ ಸಂಪ್ಯ ಪೊಲೀಸರ ತಂಡ ಆರೋಪಿಗಳನ್ನು ಬಂಧಿಸಿ ಅಲ್ಲಿದ್ದ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.

ಇಲ್ಯಾಸ್ ಹಾಗೂ ಅಬ್ದುಲ್ಲಾ ಬಂಧಿತ ಆರೋಪಿಗಳು. ಆರ್ಯಾಪು ಗ್ರಾಮದ ಸಂಪ್ಯ ಸಮೀಪದ ವಾಗ್ಲೆ ಎಂಬಲ್ಲಿ ಆರೋಪಿ ಇಲ್ಯಾಸ್ ನ ಮನೆ ಬಳಿಯಿರುವ ಶೆಡ್ ನಲ್ಲಿ ಅಕ್ರಮವಾಗಿ ದನಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಂಪ್ಯ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಶೆಡ್ ನಲ್ಲಿ ಸುಮಾರು 25 ಕೆ.ಜಿಯಷ್ಟು ದನದ ಮಾಂಸ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಇಲ್ಯಾಸ್ ಹಾಗೂ ಅಬ್ದುಲ್ಲಾ ಎಂಬವರನ್ನು ಬಂಧಿಸಿದ್ದಾರೆ.

- Advertisement -