- Advertisement -
- Advertisement -
ಮೈಸೂರು: ಗಂಧದ ಕಡ್ಡಿ ತುಂಬಿದ್ದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಮೈಸೂರು-ನಂಜನಗೂಡು ರಸ್ತೆಯಲ್ಲಿ ನಡೆದಿದೆ.

ಲಾರಿ ನಂಜನಗೂಡಿನ ಕಡಕೋಳ ಕೈಗಾರಿಕಾ ಪ್ರದೇಶದಿಂದ ಮೈಸೂರು ಕಡೆಗೆ ಬರುತ್ತಿದ್ದಾಗ ಕ್ಯಾಂಟರ್ ಲಾರಿಗೆ ಬೆಂಕಿ ಹೊತ್ತಿಕೊಂಡಿದೆ. ಸುಮಾರು ಆರು ಲಕ್ಷ ರೂ. ಮೌಲ್ಯದ ಗಂಧದ ಕಡ್ಡಿ ಬೆಂಕಿಗಾಹುತಿಯಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.


- Advertisement -