Saturday, June 28, 2025
spot_imgspot_img
spot_imgspot_img

ಸ್ಯಾಂಡಲ್​ವುಡ್​​ನ ಖ್ಯಾತ ಪೋಷಕ ನಟ ರಾಕ್​ಲೈನ್​ ಸುಧಾಕರ್​ ವಿಧಿವಶ

- Advertisement -
- Advertisement -

ಬೆಂಗಳೂರು: ಸ್ಯಾಂಡಲ್​ವುಡ್​​ನ ಖ್ಯಾತ ಪೋಷಕ ನಟ ರಾಕ್​ಲೈನ್​ ಸುಧಾಕರ್​ ವಿಧಿವಶರಾಗಿದ್ದಾರೆ. ಇಂದು ಸಿನಿಮಾ ಶೂಟಿಂಗ್​​ನಲ್ಲಿ ತೊಡಗಿದ್ದ ವೇಳೆ, ಚಿತ್ರೀಕರಣದ ಸ್ಪಾಟ್​​ನಲ್ಲೇ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಡಕೋಟಾ ಅನ್ನೋ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸುಧಾಕರ್, ದಿಗಂತ್ ಅಭಿನಯದ ಪಂಚರಂಗಿ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ರು. ಬಳಿಕ ಪರಮಾತ್ಮ, ಡ್ರಾಮಾ, ಟೋಪಿವಾಲಾ, ಝೂಮ್, ವಾಸ್ತು ಪ್ರಕಾರ, ಲವ್ ಇನ್ ಮಂಡ್ಯ, ಮಿಸ್ಟರ್ ಆ್ಯಂಡ್​ ಮಿಸಸ್​ ರಾಮಾಚಾರಿ, ಮುಕುಂದ ಮುರಾರಿ, ಪ್ರೇಮಗೀಮಾ ಜಾನೇ ದೋ, ಕೆಮಿಸ್ಟ್ರಿ ವಿತ್ ಕರಿಯಪ್ಪ, ಉಡುಂಬ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.

- Advertisement -

Related news

error: Content is protected !!