Sunday, June 29, 2025
spot_imgspot_img
spot_imgspot_img

ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾ – ನಟಿ ಸಂಜನಾ ಮನೆ ಮೇಲೆ ಸಿಸಿಬಿ ದಾಳಿ -ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದ ಅಧಿಕಾರಿಗಳು.!

- Advertisement -
- Advertisement -

ಬೆಂಗಳೂರು: ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್​ ನಂಟಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಬೆಳ್ಳಂ ಬೆಳಗ್ಗೆ ನಟಿ ಸಂಜನಾ ಗಲ್ರಾಣಿ ಮನೆಗೆ ದಾಳಿ ಮಾಡಿದ ಸಿಸಿಬಿ ಅಧಿಕಾರಿಗಳು ಮನೆ ಪರಿಶೀಲನೆ ನಡೆಸಿ, ಹೆಚ್ಚಿನ ವಿಚಾರಣೆಗೆ ಸಂಜನಾ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಗಳವಾರ ಬೆಳ್ಳಂಬೆಳಗ್ಗೆಯೇ ಇಂದಿರಾ ನಗರದಲ್ಲಿರುವ ನಟಿ ಸಂಜನಾ ಅವರ ನಿವಾಸದ ಮೇಲೆ ಸಿಸಿಬಿ ಇನ್ಸ್​ಪೆಕ್ಟರ್ ಅಂಜುಮಾಲ, ಪೂರ್ಣಿಮಾ ನೇತೃತ್ವದ ತಂಡದಿಂದ ದಾಳಿ ಮಾಡಿ, ಸಂಜನಾ ಅವರ ನಿವಾಸದಲ್ಲಿ ಅವರ ಮೊಬೈಲ್, ಲ್ಯಾಪ್’ಟಾಪ್, ಹಾರ್ಡ್ ಡಿಸ್ಕ್‌ ಸೇರಿದಂತೆ ಹಲವು ವಸ್ತುಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!