Sunday, August 2, 2026
spot_imgspot_img
spot_imgspot_img

ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಂಬು ಹಾಗೂ ದಾನಿಗಳ ಸಹಕಾರದೊಂದಿಗೆ ಪುಸ್ತಕ ವಿತರಣಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: (ಜೂ. 15) ವಿಶ್ವ ಹಿಂದೂ ಪರಿಷದ್ ಬಜರಂಗದಳ ಕಡಂಬು ಹಾಗೂ ದಾನಿಗಳ ಸಹಕಾರದೊಂದಿಗೆ ಕಡಂಬು ವಾರ್ಡ್ ಸಂಖ್ಯೆ 219-220ರ 1 ರಿಂದ 10ನೇ ತರಗತಿವರೆಗಿನ ಸುಮಾರು 93 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಹಾಶಕ್ತಿ ಕೇಂದ್ರದ ಬಿಜೆಪಿ ಅಧ್ಯಕ್ಷರಾದ ಅರವಿಂದ್ ರೈ ಭಾಗವಹಿಸಿ ಪ್ರತಿಯೊಂದು ವಿದ್ಯಾರ್ಥಿಗಳಿಗೂ ಪುಸ್ತಕವು ಅತ್ಯಗತ್ಯವಾಗಿದೆ. ಇಂದು ನೀಡುತ್ತಿರುವಂತಹ ಪುಸ್ತಕವನ್ನು ಎಲ್ಲಾ ವಿದ್ಯಾರ್ಥಿಗಳು ಹಾಳು ಮಾಡದೆ ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಸಂದೇಶ ನೀಡಿದರು. ಕಾರ್ಯಕ್ರಮದಲ್ಲಿ ಇನ್ನೊರ್ವ ಅಥಿತಿಯಾಗಿದ್ದ ಬಿಜೆಪಿಯ ಪ್ರಮುಖರಾದ ಸುರೇಶ್ ಕೊಟ್ಟಾರಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ವಿಟ್ಲ ಪಡ್ನೂರು ಗ್ರಾಮ ಪಂಚಾಯತಿನ ಸದಸ್ಯರಾದ ಅಮಿತಾ ಗೌಡ ಬನ, ಬೀಡಿ ಗುತ್ತಿಗೆದಾರರಾದ ಶಾಂತಪ್ಪ ಪೂಜಾರಿ ಕಡಂಬು, ವಿಶ್ವಹಿಂದೂ ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಇದರ ಸಂಚಾಲಕರಾದ ಚೇತನ್ ಕಡಂಬು, ವಿಶ್ವಹಿಂದೂ ಪರಿಷದ್ ಬಜರಂಗದಳ ಕಡಂಬು ಇದರ ಸಂಚಾಲಕರಾದ ಸತೀಶ್ ಗೌಡ, ವಿಶ್ವಹಿಂದೂ ಪರಿಷದ್ ಬಜರಂಗದಳ ಕಡಂಬು ಇದರ ಕಾರ್ಯದರ್ಶಿಯಾದ ಧೀರಜ್, ಪ್ರಮುಖರಾದ ಲಿಖಿತ್ ಕಡಂಬು, ಸಂತೋಷ್ ಕಡಂಬು, ಅಭಿಷೇಕ್ ಶಂಬೂರು ಉಪಸ್ಥಿತರಿದ್ದರು. ಕಾರ್ಯಮದಲ್ಲಿ ತನ್ವಿಷಾ, ಲತಿಕ, ಶ್ರೀನಿಧಿ, ಶ್ರೀಲಕ್ಷ್ಮಿ ಪ್ರಾರ್ಥನೆಯನ್ನು ಮಾಡಿದರು. ಕಾರ್ಯಕ್ರಮವನ್ನು ಚೈತನ್ಯ ಬೆದ್ರಕಾಡು ನಿರೂಪಿಸಿ ಸ್ವಾಗತಿಸಿ ವಂದಿಸಿದರು

- Advertisement -

Related news

error: Content is protected !!