Thursday, May 2, 2024
spot_imgspot_img
spot_imgspot_img

ರಾಜ್ಯದಲ್ಲಿ ಆಗಸ್ಟ್ 23ರಿಂದ ಶಾಲಾ-ಕಾಲೇಜು ಆರಂಭ; ನೈಟ್ ಕರ್ಪ್ಯೂ ಜಾರಿ! ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ

- Advertisement -G L Acharya panikkar
- Advertisement -

ರಾಜ್ಯದಲ್ಲಿ ಕೊರೋನಾ 3ನೇ ಅಲೆಯ ಮುನ್ಸೂಚನೆ ನೀಡಿದೆ. ಇದೇ ಸಂದರ್ಭದಲ್ಲಿ ರಾಜ್ಯದಲ್ಲಿ ಆಗಸ್ಟ್ 23ರಿಂದ ಶಾಲಾ-ಕಾಲೇಜು ಆರಂಭ ಮಾಡುವಂತ ನಿರ್ಧಾರವನ್ನು ರಾಜ್ಯ ಸರ್ಕಾರ ಕೈಗೊಂಡಿದೆ. ಆಗಸ್ಟ್ 23ರಿಂದ ರಾಜ್ಯದಲ್ಲಿ 9, 10, 11 ಮತ್ತು 12ನೇ ತರಗತಿ ಆರಂಭಿಸಲು ಕ್ರಮ ಕೈಗೊಂಡಿರೋದಾಗಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.

ಇಂದಿನಿ0ದ ರಾತ್ರಿ 9 ಗಂಟೆಯಿ0ದ ನೈಟ್ ಕರ್ಪ್ಯೂ ಜಾರಿಗೊಳಿಸಲಾಗುತ್ತಿದೆ. ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಪ್ಯೂ ಜಾರಿಯಲ್ಲಿ ಇರಲಿದೆ ಎಂಬುದಾಗಿ ತಿಳಿಸಿದ್ದಾರೆ.

ಕೋವಿಡ್ ತಾಂತ್ರಿಕಾ ಸಲಹಾ ಸಮಿತಿಯನ್ನು ಒಳಗೊಂಡ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು. ಪಾಸಿಟಿವಿಟಿ ರೇಟ್ ದರ ಆಧರಿಸಿ, ಕೆಲವು ನಿರ್ಧಾರ ಕೈಗೊಳ್ಳಲಾಗಿದೆ. ಮೊದಲನೆಯದಾಗಿ ಗಡಿ ಜಿಲ್ಲೆಗಳಲ್ಲಿ ಈಗ ಇರುವಂತ ನೈಟ್ ಕರ್ಪ್ಯೂವನ್ನು ವೀಕ್ ಎಂಡ್ ಕರ್ಪ್ಯೂ ಕೂಡ ಜಾರಿಗೊಳಿಸಲಾಗುತ್ತಿದೆ. ರಾಜ್ಯಾಧ್ಯಂತ ನೈಟ್ ಕರ್ಪ್ಯೂವನ್ನು ರಾತ್ರಿ 9 ರಿಂದ ಬೆಳಿಗ್ಗೆ 5ರವರೆಗೆ ಜಾರಿಗೊಳಿಸಲಾಗಿದೆ ಎಂದರು.

ಶಾಲಾ-ಕಾಲೇಜು ತೆರೆಯೋ ಸಂಬ0ಧ ತಜ್ಞರೊಂದಿಗೆ ಚರ್ಚಿಸಲಾಗಿದೆ. ಮೊದಲ ಹಂತದಲ್ಲಿ 9, 10, 11 ಹಾಗೂ 12ನೇ ತರಗತಿಯನ್ನು ಆಗಸ್ಟ್ 23ರಿಂದ ತೆರೆಯೋದಕ್ಕೆ ಅವಕಾಶ ನೀಡಲಾಗುತ್ತಿದೆ. ಈ ಶಾಲಾ-ಕಾಲೇಜುಗಳನ್ನು ವಾರದಲ್ಲಿ ಎರಡು ಬ್ಯಾಚ್ ನಂತೆ ತರಗತಿ ಆರಂಭಕ್ಕೆ ತಿಳಿಸಲಾಗಿದೆ. ಕೊರೋನಾ ನಿಯಂತ್ರಣ ಕ್ರಮದೊಂದಿಗೆ ಆರಂಭಿಸೋದಕ್ಕೆ ಅನುಮತಿಸಲಾಗಿದೆ. ಮುಂದಿನ ದಿನಗಳಲ್ಲಿ ಪ್ರಾಥಮಿಕ ಹಾಗೂ ಇತರೆ ತರಗತಿ ಆರಂಭ ಕುರಿತಂತೆ ಕೋವಿಡ್ 3ನೇ ಅಲೆ ನೋಡಿಕೊಂಡು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

- Advertisement -

Related news

error: Content is protected !!