


ವಿಟ್ಲ : ಸ್ಕೂಟರ್ ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿದ ಪರಿಣಾಮ ಅಪಘಾತ ಸಂಭವಿಸಿ ಸ್ಕೂಟರ್ ಸಮೇತ ಸವಾರ ಮತ್ತು ಸಹ ಸವಾರ ರಸ್ತೆಗೆ ಬಿದ್ದು, ಸಹಸವಾರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕು ಕುಳ ಗ್ರಾಮದ, ಅಳಕೆ ಮಜಲು ನಿನ್ನಿಕಲ್ ನರ್ಸರಿ ಮುಂಭಾಗದಲ್ಲಿ ನಡೆದಿದೆ.
ಇಡ್ಕಿದು ಗ್ರಾಮ, ಬಂಟ್ವಾಳ ನಿವಾಸಿ, ಜಯಪ್ರಭ ಎ ಎಂಬವರ ದೂರಿನಂತೆ, ದಿನಾಂಕ: 11-05-2024 ರಂದು ಸಂಜೆ, ಆರೋಪಿ ಕೃಷ್ಣಪ್ಪಗೌಡ ಎಂಬವರು KA-19-HH-2105ನೇ ಸ್ಕೂಟರ್‌ನಲ್ಲಿ ಉದಯಪ್ರಸಾದ್ ಎಂಬವರನ್ನು ಹಿಂಬದಿ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಸ್ಕೂಟರ್ ಚಲಾಯಿಸಿಕೊಂಡು ಹೋಗುವಾಗ ಸ್ಕೂಟರ್ ನ್ನು ಸವಾರ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ಸವಾರಿ ಮಾಡಿದ ಪರಿಣಾಮ, ಸ್ಕೂಟರ್ ಸಮೇತ ಸವಾರ ಮತ್ತು ಸಹ ಸವಾರ ಉದಯಪ್ರಸಾದ್ ರವರು, ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಸಹ ಸವಾರನಿಗೆ ಗಾಯಗಳಾಗಿದ್ದು, ಸವಾರನಿಗೆ ಯಾವುದೇ ಗಾಯವಾಗಿರುವುದಿಲ್ಲ. ಗಾಯಾಳುವನ್ನು ಜಯಪ್ರಭ ಎ ಮತ್ತು ಸವಾರ ಉಪಚರಿಸಿ ಚಿಕಿತ್ಸೆಯ ಬಗ್ಗೆ ಪುತ್ತೂರು ಪ್ರಗತಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆದುಕೊಂಡು ಬಿಡುಗಡೆಗೊಂಡಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 88/2024 ಕಲಂ: 279,337 ಬಾಧಂಸಂ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.