ಬಂಟ್ವಾಳ : ಸೋಷಿಯಲ್ ಡೆಮೋಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ನಾವೂರು ಬ್ರಾಂಚ್ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ಪ್ರಯುಕ್ತ ಕಂಡತ್ತ್ ಲ್ ಒರು ನಾಳ್ ( ಕೆಸರುಗದ್ದೆ ) ಕ್ರೀಡಾಕೂಟ ಕಾರ್ಯಕ್ರಮ ನಾವೂರು ಗ್ರಾಮದ ದುಗಳಚ್ಚಿಲ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ನಾವೂರು ಬ್ರಾಂಚ್ ಅಧ್ಯಕ್ಷ ಸ್ವಾದಿಕ್ ನಾವೂರು ವಹಿಸಿದ್ದರು. ಕಾರ್ಯಕ್ರಮದ ಪ್ರಯುಕ್ತ ಊರಿನ ನಾಗರಿಕರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಕ್ಕಳು, ಯುವಕರು, ಹಿರಿಯರು ಬೆಳಿಗ್ಗೆಯಿಂದ ಸಂಜೆವರೆಗೂ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ಸಂತೋಷಪಟ್ಟರು. ಕ್ರೀಡಾಕೂಟವನ್ನು ರಿಯಾಜ್ ಬೆಳ್ತಂಗಡಿ ನಡೆಸಿಕೊಟ್ಟರು.
ಸಮಾರೋಪ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಇನ್ಫಾಮೇಟ್ ಫೌಂಡೇಶನ್ (ರಿ ) ಇದರ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಮಾತನಾಡಿ ಮಾನಸಿಕ, ದೈಹಿಕ ಆರೋಗ್ಯಕ್ಕೆ ಕ್ರೀಡೆ ಬಹಳ ಮುಖ್ಯವಾಗಿದ್ದು ಇಂತಹ ಸೌಹಾರ್ದ ಕ್ರೀಡಾ ಕಾರ್ಯಕ್ರಮಗಳಿಂದ ಗ್ರಾಮದಲ್ಲಿ ಅನ್ಯೋನ್ಯತೆ ಒಗ್ಗಟ್ಟು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ವೇದಿಕೆಯಲ್ಲಿ SDPI ನಾವೂರು ಬ್ರಾಂಚ್ ಸಮಿತಿ ಅಧ್ಯಕ್ಷ ಸ್ವಾದಿಕ್ ನಾವೂರು, ಕಾರ್ಯದರ್ಶಿ ಶಹೀಮ್ ಮುರ, ಕೋಶಾಧಿಕಾರಿ ಇಸಾಕ್ ಸಿ. ಎಂ, ಜೊತೆ ಕಾರ್ಯದರ್ಶಿ ಸಲೀಮ್ ಮುರ, ಉಪಾಧ್ಯಕ್ಷ ಸಾದಿಕ್ ಕಿರ್ನಡ್ಕ, ಕಾರ್ಯಕ್ರಮದ ಉಸ್ತುವಾರಿ ಅಶ್ರಫ್ ಎನ್. ಹೆಚ್, ಅಬೂಸ್ವಾಲಿಹ್ ದುಗಳಚ್ಚಿಲ್, ಇಬ್ರಾಹೀಮ್ ಎನ್ ಎಚ್, ಹಮೀದ್ ಎನ್ ಎಸ್, ಕೇಳ್ತಾಜೆ ಜುಮಾ ಮಸೀದಿ ಅಧ್ಯಕ್ಷ ಹನೀಫ್, ರಿಯಾಝ್ ಬೆಳ್ತಂಗಡಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ಧಾ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.