- Advertisement -
- Advertisement -
ವಿಟ್ಲ: ಕಂಬಳಬೆಟ್ಟುವಿನ ಅಂಗಡಿ ಮಾಲಿಕರೋರ್ವರಿಗೆ ಕೊರೋನ ಸೋಂಕು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅಂಗಡಿ ಹಾಗೂ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಮೊನ್ನೆ ಪುತ್ತೂರಿನಲ್ಲಿ ವ್ಯಕ್ತಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು.
ಅವರ ಸಂಪರ್ಕದಿಂದ ಅವರ ಸಂಬಂಧಿಯಾಗಿರುವ ಕಂಬಳಬೆಟ್ಟು ನಿವಾಸಿಗೂ ಕೊರೊನಾ ಸೊಂಕು ಹರಡಿದ್ದು, ಪುತ್ತೂರಿನಲ್ಲಿ ಪಾಸಿಟಿವ್ ಪ್ರಕರಣ ಪತ್ತೆಯಾಗುತ್ತಿದ್ದಂತೆ ಅವರ ಸಂಬಂಧಿ ಕಂಬಳಬೆಟ್ಟುವಿನ ಅಂಗಡಿ ಮಾಲಕನ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಜೂ.28ರಂದು ಬಂದ ವರದಿಯಲ್ಲಿ ಸೋಂಕು ದೃಢಪಟ್ಟಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಅವರ ಅಂಗಡಿಯನ್ನು ಹಾಗೂ ಅವರ ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಅಂಗಡಿ ಮಾಲಕನಿಗೆ ಕೊರೋನ ಸೋಂಕ ದೃಡಪಟ್ಟ ಹಿನ್ನೆಲೆಯಲ್ಲಿ ಅವರ ಅಂಗಡಿಗೆ ಭೇಟಿ ನೀಡಿದ ಸ್ಥಳೀಯರಲ್ಲಿ ಆತಂಕಕ್ಕೆ ಎಡೆಮಾಡಿದೆ ಮಾತ್ರವಲ್ಲದೆ ಕಂಬಳ ಬೆಟ್ಟು ಪರಿಸರದ ಕೆಲ ಅಂಗಡಿಗಳನ್ನು ಮಾಲಕರು ಸ್ವಯಂ ಮುಚ್ಚಿದ್ದಾರೆ.
- Advertisement -