ಕೇರಳ: 12ರ ಬಾಲಕನೋರ್ವ ಯೂಟ್ಯೂಬ್ ನೋಡಿ ಹೇರ್ ಸ್ಟೈಲ್ ಮಾಡಲು ಹೋಗಿ ಸಾವು ತಂದುಕೊಂಡ ಘಟನೆ ತಿರುವನಂತಪುರಂ ನಲ್ಲಿ ನಡೆದಿದೆ.

ತಿರುವನಂತಪುರಂ ನ ವೆಂಗನೂರು ಎಂಬಲ್ಲಿ ಈ ದುರಂತ ನಡೆದಿದೆ. ಹೆಚ್ಚಿನ ಮಲೆಯಾಳಿ ಗಳಿಗೆ ಇರುವಂತೆ ಆತನಿಗೂ ತಲೆಯಲ್ಲಿ ಪೊದೆ ಪೊದೆಯ ಗುಂಗುರು ಕೂದಲು. ಅದು ಆತನಿಗೆ ಸ್ವಲ್ಪವೂ ಇಷ್ಟ ಇರಲಿಲ್ಲ.

ಹೇಗಾದರೂ ಮಾಡಿ ತಲೆಯಲ್ಲಿರುವ ಎಲ್ಲ ಕೂದಲನ್ನು ನೇರ ಮಾಡಿಸಿಕೊಂಡು ಎಲ್ಲರಿಗಿಂತ ವಿಭಿನ್ನವಾಗಿ ಕಾಣುವ ಆಸೆ ಆತನಿಗೆ. ಇದರ ಬಗ್ಗೆ ಚಿಂತಿಸುತ್ತಾ ಇದ್ದಾಗ ಆತನಿಗೆ ಪಕ್ಕನೆ ಹೊಳೆದದ್ದು ಯೂಟ್ಯೂಬ್. ಆಗ ಆತ ಮೊರೆ ಹೋಗಿದ್ದು ಯು ಟ್ಯೂಬ್ ನ್ನು ಯು ಟ್ಯೂಬ್ ನಲ್ಲಿ ಹಲವು ವೀಡಿಯೊಗಳನ್ನು ನೋಡಿದ ಬಾಲಕ, ಅದರಲ್ಲಿ ಒಂದು ವೀಡಿಯೊದಲ್ಲಿ ತೋರಿಸಿದ್ದು ಆತನನ್ನು ಪ್ರಭಾವಿತನನ್ನಾಗಿ ಮಾಡಿದೆ.

ಅದರಂತೆ ಆತ ಪ್ರಯೋಗ ಮಾಡಲು ಮುಂದಾಗಿದ್ದಾನೆ. ಆತ ತಲೆಗೆ ಸೀಮೆ ಎಣ್ಣೆ ಸುರಿದು ಬೆಂಕಿ ಪೊಟ್ಟಣದಿಂದ ಸ್ವಲ್ಪ ಬೆಂಕಿ ಹಚ್ಚಿ ತಲೆ ಕೂದಲನ್ನು ನೇರ ಮಾಡಲು ಪ್ಲಾನ್ ಮಾಡಿದ್ದ.

ಆದರೆ ಅಷ್ಟರಲ್ಲಿ ಅನಾಹುತ ಘಟಿಸಿ ಹೋಗಿತ್ತು. ಸೀಮೆ ಎಣ್ಣೆಗೆ ಬೆಂಕಿ ತಗುಲಿಕೊಂಡ ಕೂಡಲೇ ಇಡೀ ಶರೀರಕ್ಕೆ ಬೆಂಕಿ ವ್ಯಾಪಿಸಿದೆ. ತೀವ್ರ ಸುಟ್ಟ ಗಾಯಗಳಾದ ಬಾಲಕ ಕೆಲವೇ ನಿಮಿಷಗಳಲ್ಲಿ ಕೊನೆಯುಸಿಳೆದಿದ್ದಾನೆ.

