Friday, September 25, 2026
spot_imgspot_img
spot_imgspot_img

ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತ ಪಡಿಸಲಿರುವ ಗೆಜ್ಜೆನಾದ -3 ಏಕವ್ಯಕ್ತಿ ನೃತ್ಯ ಸ್ಪರ್ಧೆಯ ಪಧಾಧಿಕಾರಿಗಳ ಆಯ್ಕೆ

- Advertisement -
- Advertisement -

ಅಧ್ಯಕ್ಷರಾಗಿ ಅಜಿತ್ ದೇವಸ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ಸುಶ್ಮಿತಾ ಧನಂಜಯ ಕಾರ್ಯಡಿ ಆಯ್ಕೆ

ಕಳೆದ ನಾಲ್ಕು ವರ್ಷಗಳಿಂದ ತಮ್ಮ ವಿನೂತನ ಕಾರ್ಯಕ್ರಮಗಳ ಮೂಲಕ ಕರಾವಳಿ ಕರ್ನಾಟಕದಾದ್ಯಂತ ಅಪಾರ ಜನಮನ್ನಣೆ ಪಡೆದಿರುವ ಕಲಾತಪಸ್ವಿ ಸಾಂಸ್ಕೃತಿಕ ತಂಡ ಇದೀಗ ತನ್ನ ಇನ್ನೊಂದು ಐತಿಹಾಸಿಕ ಹೆಜ್ಜೆಯನಿಡಲು ಮುಂದಾಗಿದೆ.

ಅದೆಷ್ಟೋ ಪ್ರತಿಭೆಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ನೀಡುವುದರ ಜೊತೆಗೆ ವಿವಿಧ ಬಗೆಯ ಸ್ಪರ್ಧೆಗಳನ್ನು ಆಯೋಜನೆ ಮಾಡಿ ಜನಮನ್ನಣೆ ಪಡೆದಿದೆ. ಕಳೆದ ವರ್ಷ ಜನವರಿ ಮತ್ತು ನವೆಂಬರ್ ತಿಂಗಳನಲ್ಲಿ ಒಂದೇ ವರ್ಷ ಎರಡು ಬಾರಿ ಗೆಜ್ಜೆನಾದ ನಾಮಾಂಕಿತ ಏಕವ್ಯಕ್ತಿ ಸ್ಪರ್ಧೆಯನ್ನು ಆಯೋಜಿಸಿದ ಕೀರ್ತಿ ತಂಡಕ್ಕೆ ಸಲ್ಲುತ್ತದೆ.

ಇದೀಗ ಇದರ ಮುಂದುವರಿದ ಅಂಗವಾಗಿ ಅತಿ ಶೀಘ್ರದಲ್ಲೇ ಗೆಜ್ಜೆನಾದ -ಸೀಸನ್ 3 ಸ್ಪರ್ಧೆ ವೈಭವಯುತವಾಗಿ ನಡೆಯಲಿದ್ದು, ಈ ಕಾರ್ಯಕ್ರಮದ ಯಶಸ್ಸಿಗಾಗಿ ಪಧಾಧಿಕಾರಿಗಳ ಆಯ್ಕೆಯನ್ನು ಮಾಡಲಾಗಿದ್ದು, ಗೌರವಾಧ್ಯಕ್ಷರಾಗಿ ತಾರಾನಾಥ್ ಬೋಳಿಗದ್ದೆ, ಅಧ್ಯಕ್ಷರಾಗಿ ಅಜಿತ್ ದೇವಸ್ಯ, ಕಾರ್ಯದರ್ಶಿಯಾಗಿ ಶ್ರೀಮತಿ ಸುಶ್ಮಿತಾ ಧನಂಜಯ ಕಾರ್ಯಡಿ, ಕೋಶಾಧಿಕಾರಿಯಾಗಿ ಶ್ರೀಮತಿ ನಮಿತಾ ತಾರಾನಾಥ್ ಉರಿಮಜಲು ಸರ್ವಾನುಮತದಿಂದ ಆಯ್ಕೆಯಾದರು.

ಸ್ಪರ್ಧೆಯ ದಿನಾಂಕ ಮತ್ತು ಸ್ಥಳವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!