Sunday, May 19, 2024
spot_imgspot_img
spot_imgspot_img

ಬೆಳ್ತಂಗಡಿಯ ಸಿಯೋನ್ ಅನಾಥಾಶ್ರಮದಲ್ಲಿ 210 ಜನರಿಗೆ ಕೊರೊನಾ ಸೋಂಕು ಪತ್ತೆ

- Advertisement -G L Acharya panikkar
- Advertisement -

ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಮಾಹಾಸ್ಫೋಟವಾಗಿದೆ. ತಾಲೂಕಿನ ನೆರಿಯ ಗ್ರಾಮ ಪಂಚಾಯತಿ ವ್ಯಾಪ್ತಿಯ ಗಂಡಿಬಾಗಿಲು ಪ್ರದೇಶದಲ್ಲಿರುವ ಸಿಯೋನ್ ಅನಾಥಾಶ್ರಮದಲ್ಲಿ 210 ಜನರಿಗೆ ಸೋಂಕು ಕಾಣಿಸಿಕೊಂಡು, ಆತಂಕ ಸೃಷ್ಟಿಯಾಗಿದೆ.

ಆಶ್ರಮದ 270 ಜನರಲ್ಲಿ 210 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಾಮೂಹಿಕ ಪರೀಕ್ಷೆಯನ್ನು ಮಾಡಿದ್ದು, ಈ ವೇಳೆ ಸೋಂಕು ತಗುಲಿರುವುದು ಪತ್ತೆಯಾಗಿದೆ.

ಕಳೆದ ಕೆಲ ದಿನಗಳ ಹಿಂದೆ ಕೆಲವು ಮಂದಿಯಲ್ಲಿ ಸೋಂಕು ಕಂಡುಬಂದಿತ್ತು. ಶನಿವಾರ ನಡೆಸಿದ ಸಾಮೂಹಿಕ ಪರೀಕ್ಷೆಯಲ್ಲಿ ಬಹುತೇಕ ಎಲ್ಲರಲ್ಲೂ ಸೋಂಕು ಪತ್ತೆಯಾಗಿದೆ.

ಸಿಯೋನ್ ಆಶ್ರಮದಲ್ಲಿ ಬಹುತೇಕ ವೃದ್ಧರು ಮತ್ತು ಮನೋರೋಗಿಗಳಿದ್ದಾರೆ. ಸೋಂಕಿತರನ್ನು ಕೊವೀಡ್ ಕೇರ್ ಸೆಂಟರ್ಗೆ ಸ್ಥಳಾಂತರ ಮಾಡಲು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಮುಂದಾಗಿದ್ದಾರೆ.

ಧರ್ಮಸ್ಥಳದ ರಜತಾದ್ರಿ ವಸತಿಗೃಹಕ್ಕೆ ಸೋಂಕಿತರು ಸ್ಥಳಾಂತರವಾಗಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳದ ರಜತಾದ್ರಿ ವಸತಿ ಗೃಹ ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಗಲಿದೆ.

- Advertisement -

Related news

error: Content is protected !!