Saturday, June 28, 2025
spot_imgspot_img
spot_imgspot_img

ಪುತ್ತೂರು: ಕಬಕ ದಲ್ಲಿ ಸರಣಿ ಅಪಘಾತ… ಅಂಬ್ಯುಲೆನ್ಸ್‌ -ನ್ಯಾನೋ-ಬ್ರೆಝಾ ಕಾರು ಮಧ್ಯೆ ಅಪಘಾತ.. ಗಂಟೆಗಟ್ಟಲೆ ಟ್ರಾಫಿಕ್ ಜಾಮ್..

- Advertisement -
- Advertisement -
This image has an empty alt attribute; its file name is VC_PUC_-1-819x1024.jpg

ಪುತ್ತೂರು: ಮಂಗಳೂರಿಗೆ ರೋಗಿಯನ್ನು ಕರೆದೊಯ್ಯುತ್ತಿದ್ದ ಆಂಬುಲೆನ್ಸಿಗೆ ನ್ಯಾನೋ ಕಾರು ಡಿಕ್ಕಿ ಹೊಡೆದಿದ್ದು, ನ್ಯಾನೋ ಕಾರಿಗೆ ಮಂಗಳೂರಿನಿಂದ ಬರುತ್ತಿದ್ದ ಮತ್ತೊಂದು ಬ್ರೆಝಾ ಕಾರು ಢಿಕ್ಕಿಯಾದ ಘಟನೆ ಕಬಕದಲ್ಲಿ ನಡೆದಿದೆ.

ಘಟನೆಯಿಂದ ಮಂಗಳೂರು – ಪುತ್ತೂರು ಹಾಗೂ ಪುತ್ತೂರು – ವಿಟ್ಲ ರಸ್ತೆಯಲ್ಲಿ ಟ್ರಾಫಿಕ್ ದಟ್ಟಣೆ ಉಂಟಾಯಿತು.

ಘಟನೆಯಲ್ಲಿ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಂಬುಲೆನ್ಸ್ ನಲ್ಲಿದ್ದ ರೋಗಿ ಹಾಗೂ ರೋಗಿಯ ಕಡೆಯವರನ್ನು ಪರ್ಯಾಯ ಆಂಬುಲೆನ್ಸ್ ನಲ್ಲಿ ಮಂಗಳೂರಿಗೆ ಕಳುಹಿಸಿಕೊಡಲಾಯಿತು.
ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಆ್ಯಂಬುಲೆನ್ಸ್ ಎಂದು ಗುರುತಿಸಲಾಗಿದ್ದು, ಮಂಗಳೂರಿಗೆ ರೋಗಿಯೋರ್ವರನ್ನು ಕೊಂಡೊಯ್ಯಲಾಗುತ್ತಿತ್ತು. ಆಂಬುಲೆನ್ಸ್ ಗೆ ಕಬಕದ ಶಾಲಾ ರಸ್ತೆಯಿಂದ ನೇರವಾಗಿ ಮುಖ್ಯ ರಸ್ತೆಗೆ ಬಂದ ನ್ಯಾನೊ ಡಿಕ್ಕಿಯಾಗಿದೆ. ಇದೇ ಸಂದರ್ಭ ಮಂಗಳೂರು ಕಡೆಯಿಂದ ಬಂದ ಮತ್ತೊಂದು ಕಾರು ನ್ಯಾನೋಗೆ ಅಡಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ. ಸಂಚಾರಿ ಠಾಣೆ ಪೋಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ.

- Advertisement -

Related news

error: Content is protected !!