Wednesday, June 26, 2024
spot_imgspot_img
spot_imgspot_img

ವಿಟ್ಲ : ಬೋಳಂತೂರು ಪರಿಸರದಲ್ಲಿ ಸರಣಿ ಕಳ್ಳತನ : ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲು

- Advertisement -G L Acharya panikkar
- Advertisement -

ವಿಟ್ಲ : ಬೇಕರಿ ಹಾಗೂ ತರಕಾರಿ ಮಾರಾಟದ ಅಂಗಡಿಗೆ ನುಗ್ಗಿದ ಕಳ್ಳರು ನಗದು ಸಹಿತ ಅಗತ್ಯ ದಾಖಲೆಗಳನ್ನು ಕಳವುಗೈದ ಘಟನೆ ಬೋಳಂತೂರು ಗ್ರಾಮದ ಕಲ್ಪನೆ-ಮುಡ ಕ್ರಾಸ್ ಎಂಬಲ್ಲಿ ಭಾನುವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ.

ಬೋಳಂತೂರು ನಿವಾಸಿ ಮಹಮ್ಮದ್ ರಫೀಕ್ ಅವರಿಗೆ ಸೇರಿದ ಬೋಳಂತೂರು ಗ್ರಾಮದ ಕಲ್ಪನೆ-ಮೂಡ ಕ್ರಾಸ್ ಬಳಿಯ ಪಂಚಾಯತ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಬೇಕರಿ ಹಾಗೂ ತರಕಾರಿ ಮಾರಾಟದ ಅಂಗಡಿಯಲ್ಲಿ ಈ ಕಳವು ಕೃತ್ಯ ನಡೆದಿದೆ. ಇವರು ಶನಿವಾರ ರಾತ್ರಿ ಅಂಗಡಿಗೆ ಬೀಗ ಹಾಕಿ ಮನೆಗೆ ತೆರಳಿದ್ದು, ಭಾನುವಾರ ಬೆಳಿಗ್ಗೆ ಅಂಗಡಿ ತೆರೆಯಲು ಬಂದಾಗ ಅಂಗಡಿಯ ಎದುರಿನ ಮೇಸ್ ನೆಟ್ ಬಾಗಿಲಿಗೆ ಅಳವಡಿಸಿದ ಬೀಗ ತುಂಡರಿಸಿರುವುದು ಕಂಡು ಬಂದಿದೆ. ಈ ಬಗ್ಗೆ ಅಂಗಡಿಯ ಒಳಗೆ ಪರಿಶೀಲಿಸಿದಾಗ ಅಂಗಡಿಯ ಡ್ರಾವರಿನಲ್ಲಿದ್ದ 10 ಸಾವಿರ ರೂಪಾಯಿ ನಗದು, ಅಲ್ಲೇ ಪಕ್ಕದಲ್ಲಿಟ್ಟಿದ್ದ 15 ಸಾವಿರ ರೂಪಾಯಿ ನಗದು ಹಣ, ಅಗತ್ಯ ದಾಖಲಾತಿಗಳು, ಎಟಿಎಂ ಕಾರ್ಡ್ ಹಾಗೂ 650 ರೂಪಾಯಿ ಚಿಲ್ಲರೆ ಹಣ ಮತ್ತು ಹರಿದ ನೋಟುಗಳಿದ್ದ ಡಬ್ಬ ಕಳವಾಗಿರುವುದು ಬೆಳಕಿಗೆ ಬಂದಿದೆ. ಕಳವಾಗಿರುವ ಒಟ್ಟು ಮೌಲ್ಯ 26,650/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ರಫೀಕ್ ಅವರ ಭಾವ ಅಬ್ದುಲ್ ಲತೀಫ್ ಅವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 110/2024 ಕಲಂ: 454, 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ಬೋಳಂತೂರು ನಿವಾಸಿ ನಸೀಮ ಎಂಬವರ ದೂರಿನಂತೆ, ಬೊಳಂತೂರು ಗ್ರಾಮದ ಕೊಕ್ಕೆಪುಣಿ ಎಂಬಲ್ಲಿರುವ ತನ್ನ ಮನೆಯಲ್ಲಿ, ದಿನಾಂಕ:15-06-2024 ರಂದು ರಾತ್ರಿ ಮಲಗಿದ್ದವರು ಮರುದಿನ ಮುಂಜಾನೆ ಎದ್ದು ನೋಡಿದಾಗ, ಮನೆಯ ಎದುರು ಬಾಗಿಲು ತೆರೆದಿದ್ದು, ನಸೀಮರವರ ಮಗನ ರೂಮಿನಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಮನೆಯನ್ನು ಪರಿಶೀಲಿಸಿದಾಗ, ಮನೆಯ ಎದುರಿನ ಬಾಗಿಲನ್ನು ಕಳ್ಳರು ತೆರೆದು ಒಳಪ್ರವೇಶಿಸಿ ರೂಮಿನೊಳಗಡೆ ಇದ್ದ ಗೋಡ್ರೇಜ್ ಕಪಾಟನ್ನು ಜಾಲಾಡಿ, ಅದರ ಒಳಗಡೆ ಇದ್ದ 1000/- ರೂ ನಗದು ಮತ್ತು ಕೆಲವೊಂದು Perfume ಬಾಟಲ್ ಗಳನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆ ಅ.ಕ್ರ 109/2024 ಕಲಂ: 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!