Saturday, June 28, 2025
spot_imgspot_img
spot_imgspot_img

ಕಾವೂರು: ಬಾಲಕಿಗೆ ಲೈಂಗಿಕ ಕಿರುಕುಳ : ವಿಚಾರಿಸಲು ಹೋದ ತಾಯಿಗೆ ಹಲ್ಲೆ ! ಆರೋಪಿ ಅರೆಸ್ಟ್‌

- Advertisement -
- Advertisement -

ಕಾವೂರು: ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಕುರಿತು ವಿಚಾರಿಸಲು ಹೋದ ತಾಯಿಗೆ ಹಲ್ಲೆ ನಡೆಸಿರುವ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿ ಕಾವೂರು ನಿವಾಸಿ ನವೀನ ಎಂದು ತಿಳಿದು ಬಂದಿದೆ.

ಕಾವೂರು ಭಾಗದ 14 ವರ್ಷದ ಬಾಲಕಿ ಮತ್ತು ಆಕೆಯ ಸಹೋದರ 10 ವರ್ಷದ ಬಾಲಕ ಸಮೀಪದ ಪಾರ್ಕ್ ನಲ್ಲಿ ಸಂಜೆ ಆಟ ಆಡಲು ತೆರಳಿದ್ದರು.
ಈ ಸಂದರ್ಭ ಆರೋಪಿ ನವೀನ ಆತನ ಮನೆಯ ಮೇಲಿನ ಸಿಟೌಟ್ ನಲ್ಲಿ ನಿಂತುಕೊಂಡು ಪ್ಯಾಂಟ್ ಹಾಗೂ ಒಳಉಡುಪು ಕಳಚಿ ಗುಪ್ತಾಂಗ ತೋರಿಸಿ, ಅಸಭ್ಯ ರೀತಿಯಲ್ಲಿ ಕೈ ಸನ್ನೆ ಮಾಡಿದ್ದಾನೆ ಎನ್ನಲಾಗಿದೆ.

10 ವರ್ಷದ ಸಹೋದರ ಸೈಕಲ್ ನಲ್ಲಿ ಆಡಲು ಪಾರ್ಕ್ ಗೆ ಬರುತ್ತಿದ್ದ ವೇಳೆ ಉದ್ದೇಶ ಪೂರ್ವಕವಾಗಿ ನವೀನ ನು ಅಡ್ಡ ಬಂದಿದ್ದು, ಇದರಿಂದ ನಿಯಂತ್ರಣ ಕಳೆದುಕೊಂಡು ರಸ್ತೆಗೆ ಬಿದ್ದ ಬಾಲಕ ಗಾಯಗಂಡಿದ್ದಾನೆ ಎಂದು ತಿಳಿದು ಬಂದಿದೆ.
ಈ ಎರಡೂ ಘಟನೆಗಳನ್ನು ಕೇಳಲು ಮಕ್ಕಳ ತಾಯಿ ಆರೋಪಿ ಬಳಿ ತೆರಳಿದ್ದಾಗ, ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರಿಗೆ ಕೈಯಿಂದ ಹಲ್ಲೆ ಮಾಡಿದ್ದಾನೆ ಎಂದು ಬಾಲಕಿಯ ತಾಯಿ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಘಟನೆ ಬಗ್ಗೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದು, ಆರೋಪಿಗೆ ಆರೋಗ್ಯ ತಪಾಸಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!