- Advertisement -
- Advertisement -
ಶಬರಿಮಲೆ: ಇತಿಹಾಸ ಪ್ರಸಿದ್ಧ ಶಬರಿಮಲೆ ದೇಗುಲ ಐದು ದಿನಗಳ ಕಾಲ ತೆರೆಯಲಿದೆ. ತುಲಾ ಮಾಸದ ಪ್ರಯುಕ್ತ ಭಕ್ತರಿಗೆ ಅಯ್ಯಪ್ಪ ದರ್ಶನ ನೀಡಲಿದ್ದಾರೆ ಅಂತಾ ಟಿಡಿಬಿ (Travancore Devasom Board) ತಿಳಿಸಿದೆ. ಅಕ್ಟೋಬರ್ 16 ರಿಂದ 20ರ ವರೆಗೆ ಅಯ್ಯಪ್ಪನ ದರ್ಶನ ಪಡೆಯಲು ಅವಕಾಶ ಇದೆ. ಕೊರೊನಾ ಹಿನ್ನೆಲೆಯಲ್ಲಿ ಕೆಲವೊಂದು ನಿಯಮಗಳೊಂದಿಗೆ ಭಕ್ತರಿಗೆ ದರ್ಶನದ ವ್ಯವಸ್ಥೆ ಮಾಡಲು ಟಿಡಿಬಿ ಮುಂದಾಗಿದೆ.

ಮಲಯಾಳಂ ತಿಂಗಳ ಹಿನ್ನಲೆಯಲ್ಲಿ 5 ದಿನ ಬಾಗಿಲು ತೆರೆಯಲು ನಿರ್ಧಾರ. ನಿತ್ಯ 250 ಮಂದಿಗೆ ದೇವರ ದರ್ಶನ. ಅಯ್ಯಪ್ಪನ ದರ್ಶನ ಪಡೆಯೋರಿಗೆ ಆನ್ ಲೈನ್ ಬುಕಿಂಗ್ ವ್ಯವಸ್ಥೆ. ಯಾರು ಮೊದಲು ಬುಕ್ ಮಾಡ್ತಾರೋ ಅವರಿಗೆ ಮೊದಲ ಆದ್ಯತೆ. ಕೊರೊನ ಪರೀಕ್ಷೆ ಕಡ್ಡಾಯ, ದರ್ಶನಕ್ಕೆ ನೆಗೆಟಿವ್ ಸರ್ಟಿಫಿಕೇಟ್ ಬೇಕೇ ಬೇಕು.ಟಿಡಿಬಿ ಈ ನಿಯಮಗಳೊಂದಿಗೆ ಭಕ್ತರಿಗೆ ದರ್ಶನದ ವ್ಯವಸ್ಥೆ.

- Advertisement -