Wednesday, April 24, 2024
spot_imgspot_img
spot_imgspot_img

ಅಯ್ಯಪ್ಪ ಭಕ್ತರಿಗೆ ಸಿಹಿಸುದ್ದಿ; ಜುಲೈ 17 ರಿಂದ ಶಬರಿಮಲೆ ಓಪನ್, ಕಂಡೀಷನ್ಸ್ ಅಪ್ಲೈ

- Advertisement -G L Acharya panikkar
- Advertisement -

ಕೊಚ್ಚಿ: ಮಾರಕ ಕೋವಿಡ್-19 ವೈರಸ್ ತೀವ್ರಗೊಳ್ಳುತ್ತಿದ್ದಂತೆಯೇ ಬಂದ್ ಮಾಡಿದ್ದ ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲವನ್ನು ಮತ್ತೆ ತೆರೆಯಲಾಗುತ್ತಿದೆ. ತಿಂಗಳ ಪೂಜೆ ಪ್ರಯುಕ್ತ ಜುಲೈ 17ನೇ ತಾರೀಕಿನಿಂದ 21 ರವರೆಗೂ ಅಯ್ಯಪ್ಪ ಸ್ವಾಮಿ ದೇಗುಲ ಓಪನ್ ಮಾಡಲಿದ್ದೇವೆ ಎಂದು ದೇವಸ್ಥಾನ ಆಡಳಿತ ಮಂಡಳಿ ತಿಳಿಸಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತಾಡಿದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಂಡಳಿ ಸದಸ್ಯರು, ಕೇವಲ ಐದು ದಿನಗಳ ಕಾಲ ಮಾತ್ರ ದೇಗುಲ ತೆಗೆಯಲಾಗುತ್ತಿದೆ. ಕೋವಿಡ್-19 ಪ್ರೋಟೋಕಾಲ್ ನಿಬಂಧನೆಗಳೊಂದಿಗೆ ದೇಗುಲ ಪ್ರವೇಶಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿದೆ ಎಂದಿದ್ದಾರೆ.

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ದೇಗುಲಕ್ಕೆ ಆಗಮಿಸುವ ಭಕ್ತರಿಗೆ ಕೊರೊನಾ ಲಸಿಕೆ ಪಡೆದ ಪ್ರಮಾಣಪತ್ರ ಕಡ್ಡಾಯ. ಜತೆಗೆ 48 ಗಂಟೆಗಳ ಹಿಂದೆ ಪರೀಕ್ಷೆ ಮಾಡಿಸಿದ ಕೊರೊನಾ RTPCR ನೆಗೆಟಿವ್ ರಿಪೋರ್ಟ್​ನೊಂದಿದೆ ಭಕ್ತರು ದೇಗುಲಕ್ಕೆ ಬರಬಹುದು ಎನ್ನಲಾಗಿದೆ.

ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಆಗಮಿಸುವವರು ಆನ್​ಲೈನ್​ನಲ್ಲಿ ಟಿಕೆಟ್ ಬುಕ್ ಮಾಡಬೇಕಾಗುತ್ತದೆ. ಮೊದಲ ಐದು ಸಾವಿರ ಭಕ್ತರಿಗೆ ಮಾತ್ರ ಅಯ್ಯಪ್ಪನ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ತಿಳಿಸಲಾಗಿದೆ.

- Advertisement -

Related news

error: Content is protected !!