ಮಂಗಳೂರು : ಉಳ್ಳಾಲದ ಸಮಾಜ ಸೇವಕ ಬಾಬು ಪಿಲಾರ್ ಗೆ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಈ ಬಾರಿ ಕೊಡಮಾಡುವ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರಕಟಿಸಿ ಬೆಂಗಳೂರಿಗೆ ಕರೇಸಿ ಕೊನೆ ಕ್ಷಣದಲ್ಲಿ ಕೈಬಿಟ್ಟು ಅವಮಾಡಿದ ಘಟನೆ ನಡೆದಿದೆ.
ಪ್ರಶಸ್ತಿಗೆ ಆಯ್ಕೆಯಾಗಿದ್ದೀರಿ ಎಂದು ಮಂಗಳೂರಿನ ಸಮಾಜ ಸೇವಕರೊಬ್ಬರಿಗೆ ಫೋನ್ ಕರೆ ಮಾಡಿ ಬೆಂಗಳೂರಿಗೆ ಕರೆಸಿಕೊಂಡಿದೆ. ಇನ್ನೇನು ಪ್ರಶಸ್ತಿ ಸ್ವೀಕರಿಸಲು ಹೋಗಬೇಕು ಎನ್ನುವಷ್ಟರಲ್ಲಿ ನಿಮಗೆ ಪ್ರಶಸ್ತಿ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ಮಂಗಳೂರಿನ ಸಮಾಜ ಸೇವಕ ಬಾಬು ಪಿಲಾರ್ ಅವಮಾನ ಮಾಡಿದ್ದಾರೆ. ಖುದ್ದು ಇಲಾಖೆ ಅಧಿಕಾರಿ ನೀಲಮ್ಮ ಎನ್ನುವರು ನಿಮ್ಮನ್ನು ಸುವರ್ಣ ಮಹೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಮಂಗಳೂರಿನಿಂದ ಬೆಂಗಳೂರಿಗೆ ಕರೆಯಿಸಿಕೊಂಡಿದ್ದಾರೆ. ಅಲ್ಲದೇ ಕುಮಾರಕೃಪಾ ಅತಿಥಿ ಗೃಹದಲ್ಲಿ ಅತಿಥ್ಯ ಕೂಡ ನೀಡಿದ್ದಾರೆ
ಶುಕ್ರವಾರ ಸಂಜೆ ಪ್ರಶಸ್ತಿ ವಿತರಣೆ ವೇಳೆ ಕೊನೇ ಕ್ಷಣದಲ್ಲಿ ಬಾಬು ಪಿಲಾರ್ ಗೆ ಪ್ರಶಸ್ತಿ ಇಲ್ಲ ಎಂದಿದ್ದಾರೆ. ಹೆಸರು ತಪ್ಪಿದೆ ಎಂದು ಸಮಜಾಯಿಷಿ ನೀಡಿ ಪ್ರಶಸ್ತಿ ಕೈಬಿಟ್ಟು ಅವಮಾನ ಮಾಡಿದ್ದಾರೆ. ಕುಮಾರ ಕೃಪಾ ಬಳಿ ಬಸ್ ಹತ್ತುವ ವೇಳೆ ನಿಮಗೆ ಪ್ರಶಸ್ತಿ ಇಲ್ಲ ಅಂತ ಹೇಳಿ ಅವಮಾನ ಮಾಡಿದ್ದಾರೆ ಎಂದು ದೂರಲಾಗಿದೆ. ಮತ್ತೊಬ್ಬರು ಬಾಬು ಕಿಲಾರ್ ಎಂಬವರಿಗೆ ಪ್ರಶಸ್ತಿ ಬಂದಿರೋದು, ನಿಮಗಲ್ಲಾ ಎಂದಿದ್ದಾರೆ.