Friday, May 3, 2024
spot_imgspot_img
spot_imgspot_img

ಮೂರು ಸಾವಿರ ಕಾರುಗಳಿದ್ದ ಹಡಗಿಗೆ ಬೆಂಕಿ : ಭಾರತ ಮೂಲದ ಸಿಬ್ಬಂದಿ ಸಾವು

- Advertisement -G L Acharya panikkar
- Advertisement -

ಮೂರು ಸಾವಿರ ಕಾರುಗಳನ್ನು ಹೊತ್ತೊಯುತ್ತಿದ್ದ ಸರಕು ಸಾಗಣೆಯ ಹಡಗು ಜರ್ಮನಿಯಿಂದ ಈಜಿಪ್ಟ್‌ಗೆ ತೆರಳುತ್ತಿದ್ದ ವೇಳೆ ನೆದರ್ಲೆಂಡ್ಸ್‌ ಸಮುದ್ರ ತೀರದಲ್ಲಿ ಬೆಂಕಿ ಬಿದ್ದಿದ್ದು, ಭಾರತ ಮೂಲದ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 20 ಮಂದಿ ಗಾಯಗೊಂಡಿದ್ದಾರೆ. ಹಡಗಿಗೆ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಕೆಲವು ದಿನ ಉರಿಯಲಿದೆ ಎಂದು ಡಚ್‌ ಕರಾವಳಿ ಕಾವಲು ಪಡೆ ಹೇಳಿದೆ.

199 ಮೀಟರ್‌ ಉದ್ದದ, ಪನಾಮದ ‘ಫ್ರೀಮೆಂಟಲ್ ಹೈವೇ’ ಹೆಸರಿನ ಹಡಗಿನಲ್ಲಿ ಮಂಗಳವಾರ ರಾತ್ರಿ ಬೆಂಕಿ ಕಾಣಿಸಿಕೊಂಡಿತ್ತು. ಹೀಗಾಗಿ ಸಿಬ್ಬಂದಿ ಸಮುದ್ರಕ್ಕೆ ಹಾರಿ ಪಾರಾಗಲು ಪ್ರಯತ್ನಿಸಿದ್ದರು. ಈ ಪೈಕಿ 7 ಮಂದಿಯನ್ನು ಕರಾವಳಿ ಕಾವಲು ಪಡೆ ರಕ್ಷಿಸಿದೆ.

ಭಾರತ ಮೂಲದ ಸಿಬ್ಬಂದಿಯೊಬ್ಬರು ಮೃತಪಟ್ಟಿರುವುದಾಗಿ ನೆದರ್ಲೆಂಡ್ಸ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಪ್ರಕಟಿಸಿ ಮಾಹಿತಿ ನೀಡಿದೆ. ಮೃತದೇಹವನ್ನು ಕುಟುಂಬಸ್ಥರಿಗೆ ತಲುಪಿಸಲು ಎಲ್ಲ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದೆ.

ದೋಣಿ ಮತ್ತು ಹೆಲಿಕಾಪ್ಟರ್‌ಗಳನ್ನು ಬಳಸಿ ಉಳಿದ 23 ಸಿಬ್ಬಂದಿಯ ರಕ್ಷಣೆ ಮಾಡಲಾಗಿದೆ ಎಂದು ನೆದರ್ಲೆಂಡ್ಸ್‌ ಕರಾವಳಿ ಕಾವಲುಪಡೆಯ ವಕ್ತಾರರು ತಿಳಿಸಿದ್ದಾರೆ.

ಹಡಗಿಗೆ ಹೊತ್ತಿಕೊಂಡಿರುವ ಬೆಂಕಿ ಇನ್ನೂ ಕೆಲವು ದಿನ ಉರಿಯಲಿದೆ ಎಂದು ಡಚ್‌ ಕರಾವಳಿ ಕಾವಲು ಪಡೆ ಹೇಳಿದೆ. ಹಡಗಿನಲ್ಲಿದ್ದ 25 ಎಲೆಕ್ಟ್ರಿಕ್‌ ಕಾರುಗಳ ಪೈಕಿ ಒಂದರಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ಹಡಗಿಗೆ ಆವರಿಸಿತು ಎಂದು ಡಚ್‌ ಸುದ್ದಿ ಮಾಧ್ಯಮ ‘ಎನ್‌ಒಎಸ್‌’ ತಿಳಿಸಿದೆ.

- Advertisement -

Related news

error: Content is protected !!