- Advertisement -
- Advertisement -



ಸಾಮಾಜಿಕ ಜಾಲತಾಣದಲ್ಲಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಅಪಮಾನ ಮಾಡಿದ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕಲಘಟಗಿ ತಾಲೂಕಿನ ಹಸರಂಬಿ ಗ್ರಾಮದ ಅಶ್ಪಕ್ ಹಾಗೂ ಶೌಖಲ್ ಅಲಿ ಬಂಧಿತ ಆರೋಪಿಗಳು. ಇವರಿಬ್ಬರು ಟಿಪ್ಪು ಸುಲ್ತಾನ್ ಕಾಲಿನಡಿ ಕುಳಿತು ಶಿವಾಜಿ ಬೇಡಿಕೊಳ್ಳುವ ಹಾಗೆ ಫೊಟೋವನ್ನು ಎಡಿಟ್ ಮಾಡಿ, ಆ ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.
ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಎಚ್ಚೆತ್ತ ಕಲಘಟಗಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಅಶ್ಫಕ್ ಹಾಗೂ ಶೌಖತ್ ಅಲಿಯನ್ನು ಬಂಧಿಸಿದ್ದಾರೆ.
- Advertisement -








