Saturday, June 28, 2025
spot_imgspot_img
spot_imgspot_img

ರೋಗಿಗೆ ಲೈಂಗಿಕ ಕಿರುಕುಳ ನೀಡಿದ ವೈದ್ಯ!

- Advertisement -
- Advertisement -

ಭದ್ರಾವತಿ(ಶಿವಮೊಗ್ಗ): ಚಿಕಿತ್ಸೆ ನೀಡುವ ವೇಳೆ ರೋಗಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರೊಬ್ಬರನ್ನು ಬಂಧಿಸಲಾಗಿದೆ. ಬಂಧಿತ ವೈದ್ಯನನ್ನು ಅನಿವೇಶ್ ಬಿಶ್ವಾಸ್ ಎಂದು ಗುರುತಿಸಲಾಗಿದೆ.

ಮೂಲವ್ಯಾಧಿಗೆ ಅನಿವೇಶ್ ಬಿಶ್ವಾಸ್ ಚಿಕಿತ್ಸೆ ನೀಡುತ್ತಿದ್ದರು. ತಮ್ಮ ಬಳಿ ಚಿಕಿತ್ಸೆಗೆ ಬಂದ ಮಹಿಳೆಯೊಬ್ಬರ ಜತೆ ವೈದ್ಯ ಬಿಶ್ವಾಸ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಭದ್ರಾವತಿ ಹಳೆ ನಗರ ಖಾಜಿ ಮೊಹಲ್ಲಾದಲ್ಲಿ ವೈದ್ಯ ಬಿಶ್ವಾಸ್ ಕ್ಲಿನಿಕ್ ಹೊಂದಿದ್ದರು. ಈ ಸಂಬಂಧ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!