





ಇರಂದೂರು ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕುಂಟುಕುಡೇಲು ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವವು ದಿನಾಂಕ: 07.05.2025ನೇ ಬುಧವಾರದಿಂದ 11.05.2025ನೇ ಆದಿತ್ಯವಾರದವರೆಗೆ ನಡೆಯಲಿದೆ.











ದಿನಾಂಕ:7-05-2025ನೇ ಬುಧವಾರ ಸಾಯಂಕಾಲ 5.00 ಕ್ಕೆ ತಂತ್ರಿವರ್ಯರ ಆಗಮನ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮುಹೂರ್ತ, ನೂತನ ಆಲಯದ ಪರಿಗ್ರಹ, ಸ್ವಸ್ತಿ ಪುಣ್ಯಾಹ ವಾಚನ, ಋತ್ವಿಗ್ವರಣೆ, ಸಪ್ತ ಶುದ್ಧಿ, ಪ್ರಾಸಾದ ಶುದ್ಧಿ, ಅಂಕುರಾರೋಹಣ, ದುರ್ಗಾಪೂಜೆ, ರಾಕೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ಪ್ರಾಕಾರ ಬಲಿ, ನಿಶೀಥ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ದಿನಾಂಕ: 8-05-2025ನೇ ಗುರುವಾರ ಪ್ರಾತಃ 8.00 ಗಂಟೆಯಿಂದ ಉಷಾ ಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ಸರ್ವ ಪ್ರಾಯಶ್ಚಿತ್ತ ಹೋಮ, ತಟಾಕ / ಕೂಪ ಶಾಂತಿ, ಸಂಹಾರ ತತ್ವ ಹೋಮ, ಕಲಶಾಭಿಷೇಕ, ಮಹಾ ಪೂಜೆ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 5:00ರಿಂದ ಬಿಂಬ ಶುದ್ಧಿ, ಅಂಕುರ ಪೂಜೆ, ಕುಂಭೇಶ ಕರ್ಕರಿ ಪ್ರತಿಷ್ಠೆ, ಜೀವ ಕಲಶ ಪ್ರತಿಷ್ಠೆ, ಸೃಷ್ಟಿ ತತ್ವ ಹೋಮ, ದುರ್ಗಾಪೂಜೆ, ಮಹಾ ಸುದರ್ಶನ ಹೋಮ, ಬಿಂಬಾಧಿವಾಸ ಹೋಮ, ನಿಶೀಥಪೂಜೆ, ಶಯ್ಯಾಧಿವಾಸ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ದಿನಾಂಕ: 9-05-2025ನೇ ಶುಕ್ರವಾರ ಪ್ರಾತಃ 6.30 ರಿಂದ ಮಹಾಗಣಪತಿ ಹೋಮ, ನಾಂದಿ ಪುಣ್ಯಾಹ ವಾಚನ, ಅಲ್ಪ ಪ್ರಸಾದ ಶುದ್ದಿ, ಪ್ರಾಸಾದ ಪ್ರತಿಷ್ಠೆ ರತ್ನ ನ್ಯಾಸಾದಿ ಪೀಠ ಪ್ರತಿಷ್ಠೆ, ಅಂಕುರ ಪೂಜೆ, ವಿಷ್ಣು ಸಹಸ್ರನಾಮ ಯಾಗ ನಡೆಯಲಿದೆ. ಬೆಳಗ್ಗೆ 8:33 ರ ಮಿಥುನ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಮತ್ತು ಸಪರಿವಾರ ಮಹಾಗಣಪತಿ, ವನದುರ್ಗಾ ದೇವರ ಪುನಃ ಪ್ರತಿಷ್ಟೆ, ನಡೆದು ಬಳಿಕ ಅಷ್ಟಬಂಧ ಕ್ರಿಯೆ, ನಿದ್ರಾ ಕಲಶಾಭಿಷೇಕ, ಜೀವ ಕಲಶಾಭಿಷೇಕ, ಶಿಖರ ಪ್ರತಿಷ್ಠೆ, ಪ್ರತಿಷ್ಠಾ ಪೂಜೆ, ಮುಂದಿನ ಕ್ಷೇತ್ರಾನುಷ್ಠಾನ ನಿಯಮ ನಿಶ್ಚಯಿಸಿ ಎಲ್ಲರೂ ಸೇರಿ ಪ್ರಾರ್ಥಿಸುವುದು, ಮಹಾ ಪೂಜೆ, ಪ್ರಸಾದ ವಿತರಣೆ, ಬ್ರಾಹ್ಮಣ ಸಮಾರಾಧನೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 6:00 ರಿಂದ ಅಂಕುರ ಪೂಜೆ, ದುರ್ಗಾಪೂಜೆ, ಅಶ್ಲೇಷಾ ಬಲಿ, ನಿಶೀಥ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ದಿನಾಂಕ: 10-05-2025ನೇ ಶನಿವಾರ ಪ್ರಾತಃ 7.00 ರಿಂದ ಉಷಾ ಪೂಜೆ, ಮಹಾಗಣಪತಿ ಹೋಮ, ಅಂಕುರ ಪೂಜೆ, ತತ್ವ ಹೋಮ, ಚಂಡಿಕಾ ಯಾಗ, ಮಹಾಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 5.00 ರಿಂದ : ಅಂಕುರ ಪೂಜೆ, ದುರ್ಗಾಪೂಜೆ, ಕುಂಭೇಶ ಕರ್ಕರಿ ಪ್ರತಿಷ್ಠೆ, ಬ್ರಹ್ಮಕಲಶ ಪ್ರತಿಷ್ಠೆ, ಪರಿವಾರ ದೇವತಾ ಕಲಶ ಪ್ರತಿಷ್ಠೆ, ಕಲಶಾಧಿವಾಸ ಹೋಮ, ನಿಶೀಥ ಪೂಜೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ದಿನಾಂಕ: 11-05-2025ನೇ ಆದಿತ್ಯವಾರ ಪ್ರಾತಃ 7.00 ರಿಂದ ಮಹಾಗಣಪತಿ ಹೋಮ, ಉಷಾ ಪೂಜೆ, ನವಗ್ರಹ ಹೋಮ, 8.20 ಕ್ಕೆ ಸಲುವ ಮಿಥುನ ಲಗ್ನ ಸುಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ, ಪರಿವಾರ ದೇವತಾ ಕಲಶಾಭಿಷೇಕ, ನರಸಿಂಹ ಹೋಮ, ಉಳ್ಳಾಕ್ಲು ಹಾಗೂ ಮಲರಾಯ ದೈವದ ಪ್ರತಿಷ್ಠೆ, ಕಲಶಾಭಿಷೇಕ ನಡೆದು ಬಳಿಕ ಮಧ್ಯಾಹ್ನ 12.00ಕ್ಕೆ ಮಹಾಪೂಜೆ, ದೈವಗಳಿಗೆ ತಂಬಿಲ, ಋತ್ವಿಜ ಗೌರವಾರ್ಪಣೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಾಯಂಕಾಲ 5.00 ರಿಂದ ದುರ್ಗಾಪೂಜೆ, ನಿಶೀಥ ಪೂಜೆ, ಶ್ರೀ ರಂಗ ಪೂಜಾರಾಧನೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಧಾರ್ಮಿಕ ಸಭಾ ಕಾಯಕ್ರಮ: ದಿನಾಂಕ: 9-05-2025ನೇ ಶುಕ್ರವಾರ ಸಂಜೆ 6:30 ರಿಂದ ನಡೆಯುವ ಧಾರ್ಮಿಕ ಸಭಾ ಕಾಯಕ್ರಮದಲ್ಲಿ ಪರಮಪೂಜ್ಯ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಸುಬ್ರಹ್ಮಣ್ಯ ಮಠ, ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಪಾದಂಗಳವರು ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನಂ ಶ್ರೀಮರ್ ಎಡನೀರು ಮಠ, ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿ ಶ್ರೀ ಗುರುದೇವದತ್ತಸಂಸ್ಥಾನಂ ಒಡಿಯೂರು, ಪರಮಪೂಜ್ಯ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಪರಮಹಂಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಆಶೀರ್ವಚನ ನೀಡಲಿರುವರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೈಂತಿಲ ಸದಾಶಿವ ಆಚಾರ್ಯ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೈವಜ್ಞರು ವೆಂಕಟರಮಣ ಭಟ್ ವಳಕುಂಜ (ಗೌರವಿಸಲ್ಪಡುವವರು), ವಾಸ್ತುತಜ್ಞರು ರಮೇಶ ಕಾರಂತರು ಬೆದ್ರಡ್ಕ (ಗೌರವಿಸಲ್ಪಡುವವರು) ದಿವ್ಯ ಉಪಸ್ಥಿತರಿರುವರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಂಗಾರು ಅರಸರು ವಿಟ್ಲ ಅರಮನೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಇರಾ ಬಾಳಿಕೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಗೌರವ ಸಲಹೆಗಾರ ಸೀತಾರಾಮ ಶೆಟ್ಟಿ, ವಕ್ಕೆತ್ತೂರು ಗೌರವ ಉಪಸ್ಥಿತರಿರುವರು.ಮಂಗಳೂರು ಲೋಕಸಭಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಬಂಟ್ವಾಳ ವಿಧಾನಸಭಾ ಕ್ಷೇತ್ರ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಪುತ್ತೂರು ವಿಧಾನಸಭಾ ಕ್ಷೇತ್ರ ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಹಿಂದೂ ಧಾರ್ಮಿಕ ಮುಖಂಡ ಅರುಣ್ ಕುಮಾರ್ ಪುತ್ತಿಲ, ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ, ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ರುಣಾಕರ ನಾಯ್ತೋಟ್ಟು, ಕ್ಯಾಂಪೊ ಮಂಗಳೂರು ಮಾಜಿ ಅಧ್ಯಕ್ಷ ಪದ್ಮನಾಭ ಭಟ್ ಕೊಂಕೋಡಿ, ಉದ್ಯಮಿ ಶ್ರೀಧರ ಶೆಟ್ಟಿ ಗುಬ್ಯ ಮೇಗಿನಗುತ್ತು, ಮೈತ್ರೇಯಿ ಗುರುಕುಲ ಮೂರುಕಜೆ ಜಗನ್ನಾಥ ಕಾಸರಗೋಡು, ಉದ್ಯಮಿ ರಾಜರಾಮ ಬಲಿಪಗುಳಿ, ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವೀಶ ವಿಟ್ಲ, ವಿಟ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ನರ್ಸಪ್ಪ ಪೂಜಾರಿ, ಅನಂತಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸನತ್ ಕುಮಾರ್ ರೈ ತುಂಬೆಕೋಡಿ, ಉದ್ಯಮಿ ಅನನ್ಯಪೀಡ್ ಹುಬ್ಬಳ್ಳಿ ಡಿ. ಗೋವಿಂದ ಭಟ್ ದಿವಾಣ, ಉದ್ಯಮಿ ವಿಟ್ಲ ಪ್ರಭಾಕರ ಶೆಟ್ಟಿ ದಂಬೆಕಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ದಿನಾಂಕ: 10-05-2025ನೇ ಶನಿವಾರ ಸಂಜೆ 6:30 ರಿಂದ ನಡೆಯುವ ಧಾರ್ಮಿಕ ಸಭಾ ಕಾಯಕ್ರಮದಲ್ಲಿ ಪರಮಪೂಜ್ಯ ಶ್ರೀ ಕಾಳಹಸ್ತೇಂದ್ರ ಮಹಾ ಸ್ವಾಮೀಜಿ ಪಡುಕುತ್ಯಾರು ಉಡುಪಿ, ಪರಮಪೂಜ್ಯ ಶ್ರೀ ಮಹಾಬಲ ಸ್ವಾಮೀಜಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರ, ಕಣಿಯೂರು, ಪರಮಪೂಜ್ಯ ಶ್ರೀ ಯೋಗಿ ಕೌಸ್ತುಭ ಮೋಹನದಾಸ ಸ್ವಾಮೀಜಿ ಶ್ರೀ ಧಾಮ ಮಾಣಿಲ ಆಶೀರ್ವಚನ ನೀಡಲಿರುವರು.ಶಾಸಕರು ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ ಕೆ.ಎಸ್ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿಟ್ಲ ಶ್ರೀ ಧನ್ವಂತರಿ ಕ್ಷೇತ್ರ ಜ್ಯೋತಿಷ್ಯ ಕೇಶವ ಭಟ್, ಬಂಟ್ವಾಳ ಮಾಜಿ ಶಾಸಕ ಹಾಗೂ ಕರ್ನಾಟಕ ಸರಕಾರ ಮಾಜಿ ಅರಣ್ಯ ಸಚಿವ ರಮಾನಾಥ ರೈ, ವಾಸ್ತು ತಜ್ಞ ಪ್ರಸನ್ನ ಭಟ್ ಮುಳಿಯಾಲ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಕೃಷ್ಣಯ್ಯ ಕೆ., ವಿಟ್ಲ ಅರಮನೆ, ನರೇಂದ್ರ ರೈ ನೆಲ್ತೊಟ್ಟು, ಅನಂತಾಡಿ, ಹರೀಶ್ ಆರಿಕೋಡಿ ಧರ್ಮದರ್ಶಿ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ, ಬೆಳ್ತಂಗಡಿ, ಅರ್ಚಕ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಶ್ರೀನಿವಾಸ ಶಗ್ರೀತ್ತಾಯ, ಬ್ರಹ್ಮಕಲಶೋತ್ಸವ ಸಮಿತಿ ಗೌರವ ಸಲಹೆಗಾರ ಉದಯೇಶ ಕೆದಿಲಾಯ ವಿಟ್ಲ ಗೌರವ ಉಪಸ್ಥಿತರಿರುವರು. ಧಾರ್ಮಿಕ ಉಪನ್ಯಾಸಕ ಹಿರಣ್ಯ ವೆಂಕಟೇಶ ಪ್ರಧಾನ ಭಾಷಣ ಮಾಡಲಿರುವರು.ದಿವಾಕರ ದಾಸ್ ನೇರ್ಲಾಜೆ, ಉದ್ಯಮಿ, ಎಸ್.ಎಲ್.ವಿ.ಗ್ರೂಪ್ ಮೈಸೂರು, ಅಶ್ವಿನ್ ಕುಮಾರ್ ನ್ಯಾಕ್, ತೆಂಕ, ಎಡಪದವು, ಉದ್ಯಮಿ ಸುಭಾಶ್ ನಾಯಕ್ ವಿಟ್ಲ, ಉದ್ಯಮಿ ಸುಬ್ರಾಯ ಪೈ ವಿಟ್ಲ, ಗ್ರಾಮೀಣ ಸಹಕಾರಿ ಬ್ಯಾಂಕ್ ನಿಯಮಿತ ವಿಟ್ಲ ಅಧ್ಯಕ್ಷ ಗನ್ನಾಥ ಸಾಲ್ಯಾನ್, ಮಾಣಿ ಉದ್ಯಮಿ ನಾಗರಾಜ ಶೆಟ್ಟಿ ಸಾಗು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಡೀಕಯ್ಯ ಸುರುಳಿಮೂಲೆ ವಿಟ್ಲ ಉದ್ಯಮಿ ಸುರೇಶ ಬನಾರಿ, ರಾಜಾರಾಮ ಶೆಟ್ಟಿ ಕೊಲ್ಪೆಗುತ್ತು, ಪುತ್ತೂರು ಉದ್ಯಮಿ ಶಿವಪ್ರಸಾದ್ ಶೆಟ್ಟಿ, ಮುಳಿಯ ಜ್ಯುವೆಲ್ಲರ್ಸ್ ಪುತ್ತೂರು ಕೇಶವ ಪ್ರಸಾದ್, ಶ್ರೀ ಉಳ್ಳಾಲ್ತಿ ದೈವಸ್ಥಾನದ ಭಂಡಾರದ ಮನೆ ಆಡಳಿತ ಮೋಕ್ತೇಸರ ಗಿರಿಧರ ರೈ ಬೆಂಞನ್ತಿಮಾರು, ಮೈಸೂರು ಉದ್ಯಮಿ ಶ್ರೀನಿವಾಸ್ ರಾವ್ ಕಾಸರಗೋಡು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ದಿನಾಂಕ :11-05-2025ನೇ ಆದಿತ್ಯವಾರ ಬೆಳಿಗ್ಗೆ 10:30 ರಿಂದ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪರಮಪೂಜ್ಯ ಸಾದ್ವಿ ಶ್ರೀ ಮಾತಾನಂದಮಯೀ ಶ್ರೀ ಗುರುದೇವದತ್ತ ಸಂಸ್ಥಾನಂ ಒಡಿಯೂರು ಆಶೀರ್ವಚನ ನೀಡಲಿರುವರು. ಮಾಜಿ ಶಾಸಕಿ, ಪುತ್ತೂರು ಮತ್ತು ಮಾಜಿ ಮುಖ್ಯಮಂತ್ರಿಗಳ ಸಂಸದೀಯ ವ್ಯವಹಾರಗಳ ಕಾರ್ಯದರ್ಶಿ ಶ್ರೀಮತಿ ಶಕುಂತಳ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಮತಿ ಸಿರಿ ಎಲ್.ಎನ್. ಕೂಡೂರುವಿಟ್ಲ ಗೌರವ ಉಪಸ್ಥಿತರಿರುವರು. ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮಾಜಿ ಸದಸ್ಯೆ ಶ್ರೀಮತಿ ಶ್ರೀಶಾ ವಾಸವು ತುಳುನಾಡ್ ಪ್ರಧಾನ ಭಾಷಣ ಮಾಡಲಿದ್ದಾರೆ. ಶ್ರೀ ಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆ ಕಲ್ಲಡ್ಕ ವಲಯ ಮೇಲ್ವಿಚಾರಕಿ ಶ್ರೀಮತಿ ಸುಗುಣ ಶೆಟ್ಟಿ, ಪಟ್ಟಣ ಪಂಚಾಯತ್ ಸದಸ್ಯೆ ಶ್ರೀಮತಿ ಲತಾ ಅಶೋಕ್ ಪೂಜಾರಿ ಮಚ್ಚ, ಶ್ರೀಮತಿ ಲ| ಪುಷ್ಪಲತಾ ವಿಟ್ಲ, ಶ್ರೀಮತಿ ಪುಷ್ಪಲತಾ ಸೀತಾರಾಮ ಶೆಟ್ಟಿ ವಕ್ಕೆತ್ತೂರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.ದಿನಾಂಕ: 9-05-2025ನೇ ಶುಕ್ರವಾರ ಸೂರ್ಯೋದಯದಿಂದ 11-05-2025ನೇ ಆದಿತ್ಯವಾರ ಸೂರ್ಯಾಸ್ತದವರೆಗೆ ವಿವಿಧ ಭಜನಾ ಮಂಡಳಿಗಳಿಂದ ‘ಅಖಂಡ ಭಜನೆ’ ಭಜನಾ ಸೇವೆ ನಡೆಯಲಿದೆ.ಸಾಂಸ್ಕೃತಿಕ ಕಾರ್ಯಕ್ರಮಗಳು:ದಿನಾಂಕ: 07-05-2025ನೇ ಬುಧವಾ ರಾತ್ರಿ 7:00 ರಿಂದ ಶ್ರೀ ಧಾಮ ಮಾಣಿಲ ಇವರ ಪ್ರಾಯೋಜಕತ್ವದಲ್ಲಿ ನೃತ್ಯ ನಿದೇಶಕ ಬಾಲಕೃಷ್ಣ ಮಾಸ್ಟರ್ ನಾಟ್ಯನಿಲಯ ಮಂಜೇಶ್ವರ ಇವರ ಶಿಷ್ಯರಿಂದ ಭರತನಾಟ್ಯ ನಡೆಯಲಿದೆ.ದಿನಾಂಕ: 08-05-2025ನೇ ಗುರುವಾರ ರಾತ್ರಿ 7:00 ರಿಂದ ಪುರಂದರ ಇಂದ್ರಪಡ್ಡು ಮತ್ತು ಬಳಗದವರಿಂದ ಭಕ್ತಿ, ಭಾವ, ಜಾನಪದ ಸಂಗೀತ ವೈಭವ ಮತ್ತು ನೃತ್ಯ ವೈವಿಧ್ಯ ನಡೆಯಲಿದೆ.ದಿನಾಂಕ: 09-05-2025ನೇ ಶುಕ್ರವಾರ ರಾತ್ರಿ 9:00 ರಿಂದ ನವಚೇತನ ಗೆಳೆಯರ ಬಳಗ ಮತ್ತು ಶ್ರೀ ನಾಗಬ್ರಹ್ಮ ಸೇವಾ ಟ್ರಸ್ಟ್ (ರಿ.), ಇರಂದೂರು ಇವರ ಪ್ರಾಯೋಜಕತ್ವದಲ್ಲಿ ಪಿಂಗಾರ ಕಲಾವಿದೆರ್ ಬೆದ್ರ ಅಭಿನಯಿಸಿರುವ ’ಕದಂಬ’ ಎಂಬ ನಾಟಕ ನಡೆಯಲಿದೆ.ದಿನಾಂಕ: 10-05-2025ನೇ ಶನಿವಾರ ವಿ.ಕೆ. ಟ್ರೇಡ್‌ಲಿಂಕ್ಸ್ ಅಟೋಮೊಬೈಲ್ ಸ್ಪಾರ್ ಪಾರ್ಟ್ಸ್ ಡಿಸ್ಟ್ರಿಬ್ಯೂಟರ್ಸ್ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ ದುರ್ಗಾ೦ಬಾ ಕಲಾವಿದರು ವರಪ್ಪಾದೆ, ವಿಟ್ಲ ಅಭಿನಯಿಸಿರುವ ’ಬುಡಿಯೆರಾಪುಜಿ’ ಎಂಬ ನಾಟಕ ನಡೆಯಲಿದೆ.ದಿನಾಂಕ: 11-05-2025ನೇ ಆದಿತ್ಯವಾರ ಬೆಳಿಗ್ಗೆ 9:00 ರಿಂದ ಪುರಂದರ ಅಂಚನ್, ಮಾತೃಶ್ರೀ ಇಂಜಿನಿಯರಿಂಗ್ ವರ್ಕ್, ಮಂಗಳಪದವು ಇವರ ಪ್ರಾಯೋಜಕತ್ವದಲ್ಲಿ ಕು| ಸುಕನ್ಯಾ ಸೇರಾಜೆ ಮತ್ತು ಬಳಗದವರಿಂದ ಸ್ವರ ಸಿಂಚನ ‘ಭಕ್ತಿ ರಸಮಂಜರಿ’ ನಡೆಯಲಿದೆ. ಮಧ್ಯಾಹ್ನ 1:00 ರಿಂದ ಸ್ಥಳೀಯರಿಂದ ‘ಸಾಂಸ್ಕೃತಿಕ ಕಾರ್ಯಕ್ರಮ’ ಸಂಜೆ 6:00 ರಿಂದ ಶ್ರೀ ರಾಜೇಶ್ ವಿಟ್ಲ ಸಾರಥ್ಯದ ಆರ್. ಕೆ. ಯಕ್ಷಗಾನ ಕಲಾ ಕೇಂದ್ರ ವಿಟ್ಲ ಇವರಿಂದ ನಾಟ್ಯ ಮುಯೂರಿ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಇವರನಿರ್ದೇಶನದಲ್ಲಿ ’ಲೀಲಾಮಾನುಷ ವಿಗ್ರಹ’ ಪೌರಣಿಕ ಯಕ್ಷಗಾನ ಬಯಲಾಟ ನಡೆಯಲಿದೆ.