- Advertisement -
- Advertisement -
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ತನಿಖೆ ಎದುರಿಸುತ್ತಿರುವ ರಿಯಾ ಚಕ್ರವರ್ತಿ ಕುಟುಂಬ ಇಂದು 3ನೇ ಬಾರಿಗೆ ಇಡಿ ಅಧಿಕಾರಿಗಳ ಮುಂದೆ ಹಾಜರಾಗಿದೆ.
ರಿಯಾಳ ಫೋನ್ ದಾಖಲೆಗಳನ್ನು ವಶಪಡಿಸಿಕೊಂಡಿದ್ದ ಇಡಿ ಅಧಿಕಾರಿಗಳ ತಂಡ ಇಂದು ಆಕೆಯ 2 ಫೋನ್ ಹಾಗೂ ತಂದೆ ಹಾಗೂ ಸಹೋದರನ ಮೊಬೈಲ್ ಸೇರಿ ಒಟ್ಟು 4 ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಲೆಕ್ಟ್ರಾನಿಕ್ಸ್ ವಸ್ತುಗಳ ಮೂಲಕ ಹಣ ವರ್ಗಾವಣೆ, ದೂರವಾಣಿ ಕರೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ದಿಯಾ ಕುಟುಂಬ ಏನೆಲ್ಲಾ ವ್ಯವಹಾರ ನಡೆಸಿದೆ ಎಂಬುದರ ಬಗ್ಗೆ ತನಿಖೆ ನಡೆಸಲಿದೆ ಎಂದು ತಿಳಿದುಬಂದಿದೆ.
- Advertisement -