Tuesday, May 21, 2024
spot_imgspot_img
spot_imgspot_img

24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್, ಹೆಚ್.ಡಿ ರೇವಣ್ಣಗೆ ಎಸ್‍ಐಟಿ ನೋಟಿಸ್..!

- Advertisement -G L Acharya panikkar
- Advertisement -

ಬೆಂಗಳೂರು: ದೇಶಾದ್ಯಂತ ಹಲ್‍ಚಲ್ ಎಬ್ಬಿಸಿರುವ ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಇದೀಗ ಎಸ್‍ಐಟಿ ಅಂಗಳದಲ್ಲಿದೆ.

ಸದ್ಯ ಪ್ರಕರಣದ ತನಿಖೆಗೆ ಇಳಿದಿರುವ ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳು ಪ್ರಜ್ವಲ್ ರೇವಣ್ಣ, ರೇವಣ್ಣಗೆ ಶಾಕ್ ಕೊಟ್ಟಿದ್ದಾರೆ. ಅಪ್ಪ- ಮಗನಿಗೆ ನೋಟಿಸ್ ಕೊಟ್ಟಿರುವ ಅಧಿಕಾರಿಗಳು ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.ನೋಟಿಸ್ ಸಿಕ್ಕ ತಕ್ಷಣ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು. ಇಲ್ಲದೇ ಹೋದರೆ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ ಎಂದು ನೋಟಿಸ್‍ನಲ್ಲಿಯೇ ಕಾನೂನು ಕ್ರಮದ ಎಚ್ಚರಿಕೆ ಉಲ್ಲೇಖ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ರೇವಣ್ಣ ಹಾಗೂ ಪ್ರಜ್ವಲ್ ಇಂದು ವಿಚಾರಣೆಗೆ ಹಾಜರಾಗ್ತಾರಾ ಎಂಬ ಕುತೂಹಲ ಹುಟ್ಟಿದೆ. ಯಾಕೆಂದರೆ ಪ್ರಜ್ವಲ್ ಈಗಾಗಲೇ ಜರ್ಮನಿಯಲ್ಲಿದ್ದಾರೆ. ಇತ್ತ ರೇವಣ್ಣ ಕೂಡ ವಿಚಾರಣೆಗೆ ಗೈರಾಗುವ ಸಾಧ್ಯತೆಗಳೀವೆ ಎಂಬುದಾಗಿ ಮುಳಗಳಿಂದ ತಿಳಿದುಬಂದಿದೆ.

ಈ ನಡುವೆ ಪ್ರಕರಣಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (karnataka State Child Rights Protection Commission) ಎಂಟ್ರಿ ಕೊಟ್ಟಿದೆ. ಪ್ರಕರಣ ಸಂಬಂಧ ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿಜಯ್ ಕುಮಾರ್ ಸಿಂಗ್‌ಗೆ ಮಕ್ಕಳ ರಕ್ಷಣಾ ಆಯೋಗದ ಅಧ್ಯಕ್ಷ ಕೆ.ನಾಗಣ್ಣಗೌಡ ಪತ್ರ ಬರೆದಿದ್ದಾರೆ.

ಸಂತ್ರಸ್ತೆ ಒಬ್ಬರು ತನ್ನ ಮಗಳ ಜೊತೆ ಕೂಡ ಅಸಭ್ಯವಾಗಿ ವರ್ತಿಸಿರುವ ಬಗ್ಗೆ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದಾರೆ. ಪ್ರಕರಣದಲ್ಲಿ ಆರೋಪಿ ಅಪ್ರಾಪ್ತ ಹೆಣ್ಣು ಮಕ್ಕಳನ್ನ ಬಳಸಿಕೊಂಡಿರುವ ಬಗ್ಗೆ ಮೇಲ್ನೋಟಕ್ಕೆ ಅನುಮಾನ ಇದೆ. ಹಾಗಾಗಿ ಪ್ರಕರಣದಲ್ಲಿ ಆರೋಪಿಯಿಂದ ಅಪ್ರಾಪ್ತ ಹೆಣ್ಣು ಮಕ್ಕಳ ಬಳಕೆ ಪತ್ತೆಯಾದಲ್ಲಿ ಈ ಬಗ್ಗೆ ವರದಿ ನೀಡುವಂತೆ ಎಸ್‌ಐಟಿಗೆ ಪತ್ರ ಬರೆದಿದ್ದಾರೆ.

- Advertisement -

Related news

error: Content is protected !!